ತಿರುವನಂತಪುರಂ:ಕೇರಳ ಕಾಂಗ್ರೆಸ್ ನಾಯಕರಾಗಿದ್ದ ಪಿಸಿ ಚಾಕೊ ಅವರು ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಸೇರಲಿದ್ದಾರೆ. ಈ ವಿಷಯವನ್ನು ಖಚಿಪಡಿಸಿರುವ ಅವರು ಮಂಗಳವಾರ ಸಂಜೆಯ ವೇಳೆಗೆ ಎನ್​ಸಿಪಿ ಪಾರ್ಟಿಯನ್ನು ಅಧಿಕೃತವಾಗಿ ಸೇರಲಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಚಾಕೊ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದರು. ಅವರು ಹಲವು ದಶಕಗಳ ಕಾಲ ಕೇರಳ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡು ದೊಡ್ಡ ನಾಯಕರಾಗಿ ಬೆಳೆದಿದ್ದರು. ಕೇರಳ ಕಾಂಗ್ರೆಸ್​​ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಆರೋಪಿಸಿ ಕಾಂಗ್ರೆಸ್ ತೊರೆದಿದ್ದರು.
ಇದನ್ನೂ ಓದಿ:ಸದನದಲ್ಲಿ ಸದ್ದು ಮಾಡುತ್ತಿದೆ ಸಿಡಿ- ಕೋರ್ಟ್‌ಗೆ ಹೋಗಿದ್ದಕ್ಕೆ ಕೊಡಲಾಗ್ತಿದೆ ಸಮರ್ಥನೆ
ಶರದ್ ಪವಾರ್ ಅವರ ಜೊತೆ ನಾನು ಚರ್ಚಿಸಿದ್ದು, ಎನ್​ಸಿಪಿಯೊಂದಿಗೆ ಕೇರಳದಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಅದೇ ರೀತಿ ಸಿಪಿಎಂ ನ ಸೀತಾರಾಮ್ ಯಚೂರಿ ಹಾಗೂ ಗುಲಾಂ ನಬಿ ಅಜಾದ್ ಅವರೊಂದಿಗೆ ಕೂಡ ಚರ್ಚಿಸಿದ್ದು, ಕೇರಳ ಚುನಾವಣೆಯಲ್ಲಿ ಎಲ್​ಡಿಎಫ್​ಗೆ ಬೆಂಬಲ ನೀಡಲಿದ್ದೇವೆ ಎಂದು ಪಿಸಿ ಚಾಕೊ ತಿಳಿಸಿದ್ದಾರೆ.
ಕೇರಳ ತ್ರಿಶೂರ್ ಲೋಕಸಭಾ ಸದಸ್ಯರೂ ಆಗಿದ್ದ ಪಿಸಿ ಚಾಕೊ, 2 ಜಿ ಹಗರಣ ತನಿಖೆಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಇನ್ನು ಶರದ್ ಪವಾರ್ ಅವರ ಎನ್​ಸಿಪಿ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್​ಡಿಎಫ್​ ಮೈತ್ರಿಕೂಟವನ್ನು ಬೆಂಬಲಿಸಿದೆ. ಏಪ್ರೀಲ್ 6 ರಂದು ಒಂದೇ ಹಂತದಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
VIDEO| ಹಾವಿನ ಜತೆ ಆಟವಾಡಲು ಹೋದವನಿಗೆ ಹಾವು ಹೇಗೆ ಬುದ್ಧಿ ಕಲಿಸಿತು ನೀವೇ ನೋಡಿ..

ಚಂದ್ರಬಾಬು ನಾಯ್ಡುಗೆ ಎದುರಾದ ಕಂಟಕ: ಬಂಧನದ ಭೀತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
