ಕೊಚ್ಚಿ:ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಯುವತಿಯೊಬ್ಬಳು ಕಾರಿನಲ್ಲಿ ತೆರಳುತ್ತಿದ್ದ ಅಪರಿಚಿತ ಹುಡುಗರಿಗೆ ತನ್ನ ಫೋನ್​ ನಂಬರ್​ ಕೊಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಅಪರಿಚಿತರಿಗೆ ಯಾರೂ ಕೂಡಾ ಫೋನ್​ ನಂಬರ್​ ನೀಡುವುದಿಲ್ಲ. ಅಂತಹುದರಲ್ಲಿ ವಿಡಿಯೋದಲ್ಲಿರುವ ಯುವತಿ ನಗುತ್ತಲೇ ಫೋನ್​ ನಂಬರ್​ ನೀಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ರೀತಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈವರೆಗೂ 6 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 6 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ.
ಇದನ್ನೂ ಓದಿ:ನನ್ನದೂ ಆಗಲೂ ಈಗಲೂ ಒಂದೇ ಮಾತು, ಅದು ಬಿಜೆಪಿಗೆ ಬಹುಮತ: ಸಿಎಂ ಬೊಮ್ಮಾಯಿ‌ ಹೇಳಿಕೆ
ತಮ್ಮ ಅನುಭವವನ್ನು ಹಂಚಿಕೊಳ್ಳಲು ಮತ್ತು ಬೇರೊಬ್ಬರ ಜತೆ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣವು ಇಂದು ಒಂದು ಉತ್ತಮ ವೇದಿಕೆಯಾಗಿದೆ. ಆದಾಗ್ಯೂ ಕೆಲವರು ಬೇಡವಾದ ವಿಚಾರವನ್ನೆಲ್ಲ ಶೇರ್​ ಮಾಡಿಕೊಳ್ಳುವ ಮೂಲಕ ಟೀಕೆಗೂ ಗುರಿಯಾಗುತ್ತಿರುತ್ತಾರೆ. ಇದೀಗ ವಿಡಿಯೋದಲ್ಲಿರುವ ಮೇಘನಾ ಹೆಸರಿನ ಯುವತಿಯು ಬಗ್ಗೆಯೂ ಇದೇ ಥರಾ ಟೀಕೆಗಳು ವ್ಯಕ್ತವಾಗುತ್ತಿವೆ.
ಮೇಘಾನಾ ಕೇರಳ ಮೂಲದ ಯುವತಿ. ಕಾರಿನಲ್ಲಿ ಪ್ರಯಾಣಿಸುತ್ತಿರುವ ಅಪರಿಚಿತ ಯುವಕರಿಗೆ ತನ್ನ ಫೋನ್​ ನಂಬರ್​ ನೀಡುವ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡುವ ಮೂಲಕ ಸ್ಥಳೀಯವಾಗಿ ಭಾರೀ ಸುದ್ದಿಯಾಗಿದ್ದಾಳೆ. ಆಕೆಯ ವಿಡಿಯೋಗೆ ಪಾಸಿಟಿವ್​ಗಿಂತ ನೆಗಿಟಿವ್​ ಕಾಮೆಂಟ್​ಗಳೇ ಹೆಚ್ಚಾಗಿವೆ. ಆಕೆಯ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಕೆಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ಅಪರಿಚಿತರಿಗೆ ಫೋನ್​ ನಂಬರ್​ ಕೊಡುವುದು ಒಳ್ಳೆಯದ್ದಲ್ಲ ಮತ್ತು ಇಷ್ಟು ಮುಕ್ತವಾಗಿರುವುದು ಕೂಡ ಅಪಾಯಕಾರಿ ಎಂದು ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಮೇಘನಾ ತಾನು ಪ್ರಯಾಣಿಸುತ್ತಿದ್ದ ಬಸ್​ನ ಕಿಟಕಿ ಪಕ್ಕದಲ್ಲಿ ತನ್ನ ಸ್ನೇಹಿತೆಯೊಂದಿಗೆ ಕುಳಿತಿದ್ದಾಳೆ. ಈ ವೇಳೆ ಇಬ್ಬರು ಬೆಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿರುತ್ತಾರೆ. ಇಬ್ಬರು ತಮ್ಮ ಪ್ರಯಾಣದ ಅನುಭವ ಮತ್ತು ಕೆಲವು ಅದ್ಭುತ ಜನರನ್ನು ಹೇಗೆ ಭೇಟಿಯಾದೆವು ಎಂಬುದರ ಕುರಿತು ಮಾತನಾಡುತ್ತಿರುತ್ತಾರೆ. ಇದೇ ಸಮಯದಲ್ಲಿ ಬಸ್​ನ ಪಕ್ಕದಲ್ಲೊಂದು ಕಾರು ಬರುತ್ತಿರುತ್ತದೆ. ಕಾರಿನಲ್ಲಿ ಕೆಲವು ಹುಡುಗರು ಇರುತ್ತಾರೆ. ಕೆಲಕಾಲ ಸನ್ನೆಗಳ ಮೂಲಕ ಸಂಭಾಷಣೆ ನಡೆಸುವುದರೊಂದಿಗೆ ಸಮಯ ಕಳೆಯುತ್ತಾರೆ. ಬಳಿಕ ಯುವಕರು ಮೇಘನಾ ಬಳಿ ಫೋನ್​ ನಂಬರ್​ ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಮೇಘನಾ ತನ್ನ ನಂಬರ್​ ಅನ್ನು ಕೊಡುತ್ತಾಳೆ. ಈ ದಿನವನ್ನು ತುಂಬಾ ಸ್ಮರಣೀಯವಾಗಿಸಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿ ಮೇಘನಾ ವಿಡಿಯೋ ಮುಗಿಸುತ್ತಾಳೆ.
ಇದನ್ನೂ ಓದಿ:ಬಾಜಿ ಕಟ್ಟುವವರಿದ್ದರೆ ಬನ್ನಿ! ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರು, ಡಂಗುರ ಸಾರಿಸಿ ಪಂಥಾಹ್ವಾನ

A post shared by Agnes Meghana Jiji (@_agnes_meghna_jiji_)

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋ ಇದುವರೆಗೂ 6 ಮಿಲಿಯನ್ಸ್​ ವೀಕ್ಷಣೆ ಮತ್ತು 6 ಲಕ್ಷ ಲೈಕ್ಸ್​ ಪಡೆದುಕೊಂಡಿದೆ. ಕೆಲವರು ಆಕೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹುಡುಗಿಯರು ಅಂದರೆ ನಾಚಿಕೆಗೆ ಸೀಮಿತ ಎಂಬ ಮನೋಭಾವವನ್ನು ಮೇಘನಾ ತೊಡೆದು ಹಾಕಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಮೇಘನಾ ನಡೆದುಕೊಂಡ ರೀತಿ ಕೆಲ ಪ್ರಶ್ನೆಗಳನ್ನು ಸಹ ಹುಟ್ಟುಹಾಕಿವೆ. ಅಪರಿಚಿತರೊಂದಿಗೆ ಫೋನ್​ ನಂಬರ್​ ಹಂಚಿಕೊಳ್ಳುವುದು ಅಪಾಯಕಾರಿ. ಹೀಗಿರುವಾಗ ಮೇಘನಾ ತಮ್ಮ ನಂಬರ್​ ನೀಡಿರುವುದು ತಪ್ಪು. ವಿಡಿಯೋ ಮಾಡಿ ಹರಿಬಿಟ್ಟಿರುವುದು ಇನ್ನೂ ತಪ್ಪು ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನಿಸಿತು ಎಂದು ಕಾಮೆಂಟ್​ ಮಾಡಿ.(ಏಜೆನ್ಸೀಸ್​)
1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!

ಮರಕ್ಕೆ ಡಿಕ್ಕಿ ಹೊಡೆದ 2 ಕೋಟಿ ರೂ. ಪೋರ್ಷೆ ಕಾರು ಸುಟ್ಟು ಭಸ್ಮ!

ಹೆತ್ತತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿ, ತಂದೆಯನ್ನು ಗಾಯಗೊಳಿಸಿದ ಮಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − five =
Remember me
