ಕೊಚ್ಚಿ:ಕೇರಳ ಚಿನ್ನ ಕಳ್ಳಸಾಗಣೆ ಕೇಸ್​ನ ಪ್ರಮುಖ ಆರೋಪಿಗಳಾದ ಫೈಸಲ್ ಫರೀದ್ ಮತ್ತು ರಾಬಿನ್ಸ್​ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ನ್ಯಾಷನಲ್​ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಕೊಚ್ಚಿ ಕೋರ್ಟ್​​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿದೆ. ಯುಎಇ ಆಡಳಿತ ಅಧಿಕೃತವಾಗಿಯೇ ಫೈಸಲ್ ಫರೀದ್​ನ ಬಂಧನವನ್ನು ಖಾತ್ರಿಗೊಳಿಸಿದೆ ಎಂದು ಎನ್​ಐಎ ಹೇಳಿದೆ.
ಕಳ್ಳಸಾಗಣೆ ಕೇಸ್​ನ ಇಬ್ಬರು ಪ್ರಮುಖ ಪಿತೂರಿಗಾರರು ಇವರೆಂಬುದನ್ನು ಎನ್​ಐಎ ಪ್ರತಿಪಾದಿಸಿದೆ. ಫೈಸಲ್ ಫರೀದ್​, ರಾಬಿನ್ಸ್ ಹಮೀದ್​, ಸಿದ್ದಿಕ್​ ಅಕ್ಬರ್, ಅಹ್ಮದ್​ ಕುಟ್ಟಿ, ರತೀಶ್​, ಮೊಹಮ್ಮದ್ ಶಮೀರ್​ ಎಂಬ ಆರು ಆರೋಪಿಗಳ ವಿರುದ್ಧ ಇಂಟರ್​ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್​ ಜಾರಿಗೊಳಿಸಲಾಗಿತ್ತು. ಚಿನ್ನಕಳ್ಳಸಾಗಣೆ ಕೇಸ್​ನಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎನ್​ಐಎ ಸಲ್ಲಿಸಿದ ಅಫಿಡವಿಟ್​ನಲ್ಲಿ ಈ ವಿವರಗಳಿವೆ. ಮೊಹಮ್ಮದ್ ಶಫಿ ಮತ್ತು ಕೆ.ಟಿ.ರಮೀಸ್ ಎಂಬಿಬ್ಬರು ಈ ಚಿನ್ನ ಕಳ್ಳಸಾಗಣೆ ಕೇಸ್​ನ ಮಾಸ್ಟರ್​ಮೈಂಡ್​ಗಳು ಎಂದು ಹೇಳಿರುವ ಎನ್​ಐಎಗೆ ಕೋರ್ಟ್​ ಆರೋಪಿಗಳ ವಿರುದ್ಧದ ಸಾಕ್ಷ್ಯ ಒದಗಿಸುವಂತೆ ನಿನ್ನೆ ತಾಕೀತು ಮಾಡಿತ್ತು. ಏತನ್ಮಧ್ಯೆ ಈ ಆರೋಪಿಗಳ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.
ಇದನ್ನು ಓದಿ:30 ಕೆ.ಜಿ ಚಿನ್ನ ಕಳ್ಳಸಾಗಣೆ ಹಿಂದೆ ಇದ್ದದ್ದು ಈ ಪ್ರಭಾವಿ ಮಹಿಳೆ
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಕಸ್ಟಮ್ಸ್ ಕೇಸ್​ನಲ್ಲಿ ನಿನ್ನೆಯಷ್ಟೇ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ಗೆ ಜಾಮೀನು ಲಭ್ಯವಾಗಿದೆ. ಕೊಚ್ಚಿಯಲ್ಲಿರುವ ಆರ್ಥಿಕ ಅಪರಾಧ ನ್ಯಾಯಾಲಯ ಈ ಜಾಮೀನು ಮಂಜೂರು ಮಾಡಿದೆ. ಕಸ್ಟಮ್ಸ್ ಇಲಾಖೆ 60 ದಿನದೊಳಗೆ ಆರೋಪ ಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಆಕೆಗೆ ಜಾಮೀನು ಮಂಜೂರಾಗಿತ್ತು. (ಏಜೆನ್ಸೀಸ್)
ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
