ಅಯೋಧ್ಯೆ:ಲೋಕಸಭೆ ಚುನಾವಣೆಯಲ್ಲಿ ಹಿಂದೂ – ಮುಸ್ಲಿಂ ಎಂದು ವಿಭಜಕ ರಾಜಕಾರಣ ಮಾಡುತ್ತಿರುವ ನಾಯಕರ ನಡುವೆ ರಾಜ್ಯಪಾಲರೊಬ್ಬರು ಧಾರ್ಮಿಕ ಸೌಹಾರ್ದತೆ ಮೆರೆದಿದ್ದಾರೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ನೆಟಿಜನ್‌ಗಳಿಂದ ಪ್ರಶಂಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:‘ಚರ್ಚೆಗೆ ಬನ್ನಿ ನಿಮ್ಮ ಆರೋಪಗಳಿಗೆ ಉತ್ತರಿಸ್ತೀವಿ’: ಕಾಂಗ್ರೆಸ್​ ನಾಯಕರಿಗೆ ಸ್ಮೃತಿ ಇರಾನಿ ಸವಾಲ್​
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬುಧವಾರ ಬೆಳಗ್ಗೆ ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿದ್ದರು. ಅಲ್ಲಿ ಅವರು ಶ್ರೀರಾಮ ದೇವಾಲಯವನ್ನು ಪ್ರವೇಶಿಸಿ ಬಾಲರಾಮದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರು ಅಯೋಧ್ಯೆಗೆ ಭೇಟಿ ನೀಡಿದ ವಿವರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Hon'ble Governor Shri Arif Mohammed Khan at Prabhu Shri Ram Temple Ayodhya: PRO KeralaRajBhavanpic.twitter.com/wCzZCSirLt
— Kerala Governor (@KeralaGovernor)May 8, 2024

‘ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಬಂದಿದ್ದೆ. ಅಂದಿನ ಭಾವನೆ ಇಂದಿಗೂ ಹಾಗೆಯೇ ಉಳಿದಿದೆ. ನಾನು ಅಯೋಧ್ಯೆಗೆ ಹಲವು ಬಾರಿ ಬಂದಿದ್ದೇನೆ. ರಾಮ ಮಂದಿರ ದೇಶದ ಹೆಮ್ಮೆ. ಭಗವಾನ್ ಶ್ರೀರಾಮನನ್ನು ಆರಾಧಿಸಿ’ ಎಂದು ರಾಜ್ಯಪಾಲರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಪಾಲರು ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವ ದೃಶ್ಯಗಳನ್ನು ಪೋಸ್ಟ್ ತೋರಿಸುತ್ತದೆ. ಧಾರ್ಮಿಕ ಸೌಹಾರ್ದತೆ ಮೆರೆದ ರಾಜ್ಯಪಾಲರ ನಡೆಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. “ಜೈ ಶ್ರೀ ರಾಮ್” ಎಂಬ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.
ಭಾರತದಲ್ಲಿ ಹಿಂದೂ ಧರ್ಮಿಯರ ಜನಸಂಖ್ಯೆ 7.8% ಕುಸಿತ; ಮುಸ್ಲಿಮರು 43.15%; ಕ್ರಿಶ್ಚಿಯನ್ನರು 5.38% ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
