ನವದೆಹಲಿ:ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮಗೆ ದೈಹಿಕವಾಗಿ ಹಾನಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಆರೋಪಿಸಿದ್ದಾರೆ. ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸದಸ್ಯರು ರಾಜ್ಯಪಾಲರ ಬೆಂಗಾವಲು ವಾಹನ ತಡೆದು ದಾಳಿ ನಡೆಸಿದ ನಂತರ ಖಾನ್ ಅವರು ಇಂತಹ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ತೃಣಮೂಲ ಕಾಂಗ್ರೆಸ್‌ ನಾಯಕಿಗೆ ಅಧಿಕೃತ ಮನೆ ಖಾಲಿ ಮಾಡಲು ಸೂಚನೆ..ರಾಜ್ಯಪಾಲರು ಹೊಸದಿಲ್ಲಿಗೆ ತೆರಳಲು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಗವರ್ನರ್ ಖಾನ್ ಅವರು, ಮುಖ್ಯಮಂತ್ರಿ ವಿಜಯನ್ ನನಗೆ ದೈಹಿಕ ಹಾನಿಯನ್ನುಂಟುಮಾಡಲು ಸಂಘಟಿತ ಸಂಚು ರೂಪಿಸಿದ್ದಾರೆ. ಘಟನೆಯು ಆಕಸ್ಮಿಕವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ತನ್ನನ್ನು ಗುರಿಯಾಗಿಸಿಕೊಂಡು ನಡೆದ ಕೃತ್ಯ ಎಂದು ಅವರು ಆರೋಪಿಸಿದರು.ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುತ್ತಿದ್ದರೆ, ಪ್ರತಿಭಟನಾಕಾರರಿರುವ ಕಾರುಗಳನ್ನು ಅಲ್ಲಿಗೆ ಬಿಡಲು ಸಾಧ್ಯವೇ? ಯಾರಾದರೂ ಮುಖ್ಯಮಂತ್ರಿಗಳ ಕಾರಿನ ಬಳಿ ಬರಲು ಪೊಲೀಸರು ಬಿಡುತ್ತಾರೆಯೇ? ಪ್ರತಿಭಟನಾಕಾರರ ಕಾರುಗಳು ಅಲ್ಲಿ ನಿಂತಿದ್ದವು. ಪೊಲೀಸರು ಅವರನ್ನು ಮುಂದೆ ತಳ್ಳಿದರು. ಅವರು ತಮ್ಮ ಕಾರುಗಳಿಗೆ ಹತ್ತಿಕೊಳ್ಳಲು ಓಡಿಹೋದರು ಎಂದು ಖಾನ್ ಹೇಳಿದರು.
ಹೀಗಾಗಿ ಇದು ಮುಖ್ಯಮಂತ್ರಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಮಾಡುತ್ತಿರುವ ಪಿತೂರಿಯಾಗಿದೆ. ನನ್ನನ್ನು ದೈಹಿಕವಾಗಿ ಹಿಂಸಿಸಲು ಗೂಂಡಾಗಳನ್ನು ಕಳುಹಿಸುತ್ತಿದ್ದಾರೆ. ತಿರುವನಂತಪುರಂನ ರಸ್ತೆಗಳ ಇವರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ನಾನು ಇದನ್ನೆಲ್ಲ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ಅವರು ಆರೋಪಿಸಿದರು.
ಕೇರಳದಲ್ಲಿ ಪ್ರಜಾಪ್ರಭುತ್ವ ಹದಗೆಟ್ಟ ಸ್ಥಿತಿ ತಲುಪಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ದೈಹಿಕ ಹಿಂಸೆಗೆ ಕಾರಣವಾಗಬಾರದು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನನ್ನ ಮೇಲೆ ಕಪ್ಪು ಬಾವುಟವನ್ನು ಬೀಸಿದರು ಮಾತ್ರವಲ್ಲದೆ ತನ್ನ ವಾಹನವನ್ನು ಎರಡೂ ಬದಿಗಳಲ್ಲಿ ದ್ವಂಸಗೊಳಿಸಿದರು. ನಾನು ನನ್ನ ಕಾರಿನಿಂದ ಇಳಿದೆ. ಆಗ ಅವರೆಲ್ಲ ಓಡಿಹೋಗಿ ಕಾರಿನಲ್ಲಿ ಕುಳಿತಿದ್ದರು. ಇದು ಪೊಲೀಸರಿಗೆ ತಿಳಿದಿತ್ತು. ಆದರೆ ಮುಖ್ಯಮಂತ್ರಿ ಅವರಿಗೆ ನಿರ್ದೇಶನ ನೀಡುವಾಗ ಬಡ ಪೋಲೀಸರು ಏನು ತಾನೆ ಮಾಡುತ್ತಾರೆ? ಎಂದು ಅವರು ಪ್ರಶ್ನಿಸಿದರು.
ಬಾಂಬ್​ ಬೆದರಿಕೆ ಪ್ರಕರಣ; ರಾಜಭವನಕ್ಕೆ ಬಂದಿದ್ದು ಹುಸಿ ಕರೆ ಎಂದು ಸ್ಪಷ್ಟನೆ ನೀಡಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
