ತಿರುವನಂತಪುರಂ:ಕೇರಳದ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯಪ್ರೇರಿತ ನೇಮಕಾತಿಗಳನ್ನು ಮಾಡುತ್ತಿರುವ ಬಗ್ಗೆ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್​​ಗೆ ನಾಲ್ಕು ಪುಟಗಳ ಪತ್ರ ಬರೆದಿರುವ ವಿವಿಗಳ ಕುಲಪತಿಗಳಾದ ರಾಜ್ಯಪಾಲರು, “ನೀವೇ ಕುಲಪತಿಗಳ ಹುದ್ದೆ ಸ್ವೀಕರಿಸಿಬಿಡಿ. ಆಗ ಯಾರೂ ರಾಜಕೀಯ ಹಸ್ತಕ್ಷೇಪದ ಬಗ್ಗೆ ಮಾತನಾಡುವುದೂ ಇಲ್ಲ” ಎಂದು ಕಟುವಾಗಿ ನುಡಿದಿದ್ದಾರೆ.
ಇತ್ತೀಚಿನ ಕಣ್ಣೂರು ವಿವಿಯ ಉಪಕುಲಪತಿಗಳ ಮರುನೇಮಕಾತಿ ಸೇರಿದಂತೆ ವಿವಿಗಳ ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ರಾಜ್ಯಪಾಲರು, ತಮಗೆ ಕಾನೂನುಬದ್ಧವಾಗಿ ಸೂಕ್ತ ಎನಿಸದಿದ್ದರೂ, ಹಲವು ನಿರ್ಣಯಗಳಿಗೆ ಸರ್ಕಾರದ ಪರವಾಗಿ ಮೊಹರು ಹಾಕಬೇಕಾಗುತ್ತಿರುವುದು ಇಕ್ಕಟ್ಟು ಉಂಟುಮಾಡಿದೆ ಎಂದಿದ್ದಾರೆ.
ಇದನ್ನೂ ಓದಿ:ತಂದೆಯ ಕಣ್ಣೆದುರೇ ಸಾವಿಗೀಡಾದ ಮಗಳು; ಲಾರಿ-ಬೈಕ್​ ಅಪಘಾತ, ಚಾಲಕ ಪರಾರಿ..
“ನಿಮಗೆ ನನ್ನ ಸಲಹೆಯೇನೆಂದರೆ, ವಿವಿಗಳ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ನೀವೇ ಖುದ್ದಾಗಿ ಕುಲಪತಿಯ ಹುದ್ದೆ ಅಲಂಕರಿಸಿ. ಇದರಿಂದ ನಿಮ್ಮ ರಾಜಕೀಯ ಉದ್ದೇಶಗಳನ್ನು ರಾಜ್ಯಪಾಲರ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಈಡೇರಿಸಿಕೊಳ್ಳಬಹುದು” ಎಂದು ಖಾನ್​ ಬರೆದಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.(ಏಜೆನ್ಸೀಸ್)
ಮತ್ತಷ್ಟು ರೋಮಾಂಚಕ ಫೋಟೋಗಳು: ‘ಮೆಹೆಂದಿ’ಯಲ್ಲಿ ಮೂಡಿಬಂದ ‘ವಿಕತ್ರಿನಾ’ ಕೆಮಿಸ್ಟ್ರಿ!

22 ವರ್ಷದ ಮಗಳ ಸೋಗು ಹಾಕಿದ 48ರ ಮಹಿಳೆ! ಕಾಲೇಜು ಸೇರಿ ಯುವಕರೊಂದಿಗೆ ಸರಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
