ತಿರುವನಂತಪುರ: ರಾಜ್ಯದಲ್ಲಿ ಮೂರನೇ ವಿದ್ಯಾರ್ಥಿಯಲ್ಲೂ ಕೊರೊನಾ ವೈರಸ್​ ಪತ್ತೆಯಾದ ಕಾರಣ, ಈ ಕಾಯಿಲೆಯ ಸನ್ನಿವೇಶವನ್ನು ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಸೋಮವಾರ ಸಂಜೆ ಘೋಷಿಸಿದೆ.
ಮೂರನೇ ವಿದ್ಯಾರ್ಥಿಯ ತಪಾಸಣೆ ವೇಳೆ ವೈರಸ್​ ಸೋಂಕು ಕುರಿತ ಪಾಸೆಟಿವ್ ಫಲಿತಾಂಶ ಕಂಡು ಬಂದಿದೆ. ಇದು ಹರಡುವ ಸೋಂಕು ಆಗಿರುವ ಕಾರಣ ರಾಜ್ಯ ಇದನ್ನು ವಿಪತ್ತು ಎಂದು ಪರಿಗಣಿಸಿದೆ. ಹೀಗಾಗಿ ಈ ಸೋಂಕು ಕಾಯಿಲೆಯನ್ನು ರಾಜ್ಯ ವಿಪತ್ತು ಎಂದು ಸರ್ಕಾರ ಘೋಷಿಸಿರುವುದಾಗಿ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.
ಈ ರಾಜ್ಯ ವಿಪತ್ತಿನ ಕಾಯಿಲೆಯನ್ನು ಹಂತ ಹಂತವಾಗಿ ತಡೆಗಟ್ಟುವುದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಂಡಿದೆ. ಪರಿಣಾಮಕಾರಿಯಾಗಿ ಕಾಯಿಲೆಯನ್ನು ನಿಯಂತ್ರಿಸಿ, ತಡೆಗಟ್ಟಲಾಗುವುದು ಎಂದೂ ಅವರು ಆಶ್ವಾಸನೆ ನೀಡಿದರು.
ರಾಜ್ಯ ವಿಪತ್ತು ಎಂದು ಘೋಷಿಸುವುದಕ್ಕೆ ಮುನ್ನ, ಮುಖ್ಯ ಕಾರ್ಯದರ್ಶಿ ಟಾಮ್​ ಜೋಸ್ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಸೇರಿ ಈ ವಿಷಯವಾಗಿ ಚರ್ಚಿಸಿತ್ತು. ಅಲ್ಲಿ ಎಲ್ಲ ಸಾಧಕ-ಬಾಧಕಗಳನ್ನು ಗಮನಿಸಿ ಈ ನಿರ್ಣಯ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 17 =
Remember me
