ತಿರುವನಂತಪುರ:ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್​ನ ಸೋಂಕು ಭಾರತದ ಕೇರಳಕ್ಕೂ ತಾಗಿತ್ತು. ಚೀನಾದಿಂದ ಕೇರಳಕ್ಕೆ ಬಂದಿಳಿದಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿತ್ತು. ಇದೀಗ ಆ ಮೂರು ರೋಗಿಗಳು ಗುಣಮುಖರಾಗಿದ್ದು ಕೇರಳ ಕೊರೊನಾ ಮುಕ್ತವಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೊರೊನಾ ವಿಚಾರವಾಗಿ ಮಾತನಾಡಿರುವ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, “ವೈರಸ್​ನಿಂದ ಮುಕ್ತವಾಗುವಲ್ಲಿ ನಾವು ಮೊದಲ ಹಂತವನ್ನು ಮುಗಿಸಿದ್ದೇವೆ. ಸೋಂಕು ತಗುಲಿದ್ದ ಮೂವರು ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ನಾವು ಪ್ರತಿಯೊಂದನ್ನು ನಿಯಮಬದ್ಧವಾಗಿ ಪರಿಪಾಲಿಸಿದ್ದೇವೆ” ಎಂದು ಹೇಳಿದ್ದಾರೆ.
ನಾವು ಕೇರಳವನ್ನು ಸಂಪೂರ್ಣವಾಗಿ ಕೊರೊನಾ ಮುಕ್ತ ಎಂದು ಘೋಷಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮ್ಮಲ್ಲಿ 3,500 ಜನರಲ್ಲಿ ಕೊರೊನಾ ಇರಬಹುದು ಎಂದು ಶಂಕಿಸಿ 28 ದಿನಗಳ ಕಾಲ ಅವರನ್ನು ಪ್ರತ್ಯೇಕಿಸಿಡಲಾಗಿತ್ತು. ಅವರಲ್ಲಿ ಯಾರೊಬ್ಬರಲ್ಲೂ ವೈರಸ್​ ಕಾಣದ ಕಾರಣ ಅವರನ್ನೆಲ್ಲ ಅವರ ಮನೆಗಳಿಗೆ ಕಳಿಸಿದ್ದೇವೆ. ಸದ್ಯ 135 ಜನರನ್ನು ವೈರಸ್​ನ ಶಂಕೆಯಿಂದ ಪ್ರತ್ಯೇಕಿಸಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೇರೆ ಬೇರೆ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರನ್ನು ರೋಗದ ಲಕ್ಷಣಗಳಿವೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ. ಇತ್ತೀಚೆಗೆ ಮಲೇಷಿಯಾದಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಥಂಡಿ ಮತ್ತು ಜ್ವರ ಕಾಣಿಸಿಕೊಂಡಿದೆ. ಆತನ ರಕ್ತವನ್ನು ತಪಾಸಣೆಗೆ ಕಳುಹಿಸಲಾಗಿದೆ ಮತ್ತು ಆತನನ್ನು ನಿರ್ಬಂಧಿಸಿಡಲಾಗಿದೆ. ಇಂದು ಆತನ ವೈದ್ಯಕೀಯ ವರದಿ ಬರುವ ನಿರೀಕ್ಷೆಯಿದೆ ಎಂದು ಸಚಿವೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
