ತಿರುವನಂತಪುರಂ :ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ನೀಲಿ ಮತ್ತು ಬಿಳಿ ಪಡಿತರ ಚೀಟಿದಾರರಿಗೆ 10 ಕೆಜಿ ಹೆಚ್ಚಿನ ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಯೋಜನೆಯನ್ನು ನಿಲ್ಲಿಸಿದ್ದ ಚುನಾವಣಾ ಆಯೋಗದ ನಿರ್ದೇಶನಕ್ಕೆ ಇದೀಗ ಕೇರಳ ಹೈಕೋರ್ಟ್ ತಡೆ ನೀಡಿದೆ. ಈಸ್ಟರ್-ವಿಶು-ರಮಜಾನ್ ಸಮಯಕ್ಕೆ ಆಡಳಿತಾರೂಢ ಪಿನ್ನಾರಿ ವಿಜಯನ್ ಸರ್ಕಾರ ರೂಪಿಸಿದ್ದ ವಿಶೇಷ ಅಕ್ಕಿಯ ವಿತರಣೆಗೆ ಕೋರ್ಟ್ ಸೋಮವಾರ ಹಸಿರು ನಿಶಾನೆ ತೋರಿದೆ.
ಆದ್ಯತೆ ರಹಿತ ಪಡಿತರದಾರರಿಗೆ ಎಂದಿನ ರೇಷನ್​ನೊಂದಿಗೆ 10 ಕೆಜಿ ಹೆಚ್ಚು ಅಕ್ಕಿಯನ್ನು 15 ರೂಪಾಯಿ ದರದಲ್ಲಿ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇತರ ರಾಜಕೀಯ ಪಕ್ಷಗಳು ಏಪ್ರಿಲ್ 6 ರಂದು ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಆಕ್ಷೇಪ ಸಲ್ಲಿಸಿದ್ದವು. ಹೀಗಾಗಿ ಚುನಾವಣಾ ಆಯೋಗವು ಉದ್ದೇಶಿಸಲಾದ ಅಕ್ಕಿ ವಿತರಣೆಯನ್ನು ಮುಂದುವರಿಸದಂತೆ ಸರ್ಕಾರಕ್ಕೆ ಸೂಚಿಸಿತ್ತು.
ಇದನ್ನೂ ಓದಿ:‘ಎಲೆಕ್ಷನ್ ಡ್ಯೂಟಿಗೆ ಯುಪಿ ಪೊಲೀಸ್ ಬೇಡ’ : ಟಿಎಂಸಿ ತಕರಾರು
ಈ ಬಗ್ಗೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರ್ಕಾರ, ಅದಾಗಲೇ 83.34 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗಾಗಿ ಅಕ್ಕಿಯನ್ನು ಖರೀದಿಸಲಾಗಿದೆ. ಈ ಬಗ್ಗೆ ಬಜೆಟ್​ನಲ್ಲಿ ನಿರ್ಧರಿಸಿ 2021 ರ ಫೆಬ್ರವರಿ 4 ರಂದು ಚುನಾವಣೆ ಘೋಷಣೆಯಾಗುವ ಮುಂಚೆಯೇ ಆದೇಶ ಜಾರಿಗೊಳಿಸಲಾಗಿತ್ತು. ಇದು ಯಾವುದೇ ಹೊಸ ಕಾರ್ಯಕ್ರಮವಲ್ಲದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ವಾದಿಸಿತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಆಶಾ ಅವರು, ಆಯೋಗದ ನಿರ್ದೇಶನಕ್ಕೆ ತಡೆಯಾಜ್ನೆ ನೀಡಿ, ಅಕ್ಕಿ ವಿತರಣೆ ಮುಂದುವರಿಯಬಹುದು ಎಂದಿದ್ದಾರೆ. ಆದಾಗ್ಯೂ ಈ ಜನಹಿತ ಕಾರ್ಯಕ್ರಮವನ್ನು ಆಡಳಿತದಲ್ಲಿರುವ ಪಕ್ಷ ತೆಗೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿಸಿ ಮತದಾರರ ಮೇಲೆ ಪ್ರಭಾವ ಬೀಳುವಂತೆ ನಡೆದುಕೊಳ್ಳಬಾರದು ಎಂದು ಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ.(ಏಜೆನ್ಸೀಸ್)
‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!
ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…
ಚುನಾವಣಾ ಪ್ರಚಾರದ ನಡುವೆ ದೋಸೆ ಹಾಕಿದ ಖುಷ್​ಬೂ !


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − one =
Remember me
