ತ್ರಿಶೂರ್​:ಯುವಕನ ಮೂತ್ರಪಿಂಡ ಕಸಿಗಾಗಿ ಸಚಿವೆ ತಮ್ಮ ಬಂಗಾರದ ಬಳೆಯನ್ನೇ ನೀಡುವ ಮೂಲಕ ನೆರವಾಗಿದ್ದಾರೆ. ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಬಂದಿದ್ದ ಯುವಕನಿಗೆ ಸಚಿವೆ ಈ ರೀತಿ ಸಹಾಯಹಸ್ತ ನೀಡಿದ್ದಾರೆ.
ತ್ರಿಶೂರ್​ನಲ್ಲಿ ಮೂತ್ರಪಿಂಡ ಕಸಿಗೆ ಸಂಬಂಧಿಸಿದ ವೈದ್ಯಕೀಯ ನೆರವು ಸಮಿತಿಯ ಸಭೆಯಲ್ಲಿ ಸಚಿವೆ ಬಿಂದು ಅವರು ಭಾಗಿಯಾಗಿದ್ದರು. ಈ ವೇಳೆ ಅಲ್ಲೇ ಇದ್ದ 27 ವರ್ಷದ ವಿವೇಕ್​ ಪ್ರಭಾಕರ್ ಎಂಬ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದದ್ದನ್ನು ಕಂಡು ಮರುಗಿದ ಸಚಿವೆ ತಕ್ಷಣವೇ ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಯನ್ನು ತೆಗೆದುಕೊಟ್ಟಿದ್ದಾರೆ.
ಈ ಯುವಕ ತುರ್ತು ಮೂತ್ರ ಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ ಹಣವಿಲ್ಲದೇ ಚಿಕತ್ಸೆ ಪಡೆದುಕೊಂಡಿರಲಿಲ್ಲ. ಚಿಕಿತ್ಸೆಗಾಗಿ ನೆರವಿನ ಹಸ್ತ ಚಾಚಿದ್ದ ಯುವಕನ ಕುಟುಂಬಕ್ಕೆ ಸಚಿವೆ ಮೊದಲ ನೆರವು ನೀಡಿದ್ದಾರೆ. ಸದ್ಯ ಸಚಿವೆಯ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್​)
ಕಾಳಿ ಮಾತೆ ಪೋಸ್ಟರ್ ವಿವಾದ: ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್​ನಿಂದ ಸಮನ್ಸ್​ ಜಾರಿ

ವಿರಾಟ್​ ಕೊಹ್ಲಿಯನ್ನು ಕೈ ಬಿಡಬೇಕೆಂದ ಕಪಿಲ್​ದೇವ್​​​ ಹೇಳಿಕೆಗೆ ನಾಯಕ ರೋಹಿತ್​ ಶರ್ಮಾ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
