ನವದೆಹಲಿ:ಬೆಲೆ ಬಾಳುವ ಹಳದಿ ಲೋಹ ಚಿನ್ನದ ಕಳ್ಳಸಾಗಾಣಿಕೆಯಲ್ಲಿ ಇಡೀ ದೇಶದಲ್ಲಿ ಕೇರಳ ಮೊದಲ ಸ್ಥಾನದ ಕುಖ್ಯಾತಿ ಪಡೆದಿದೆ. ದೇಶದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳು ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಕಳ್ಳಸಾಗಾಣೆ ಮಾಡುವುದರಲ್ಲಿ ಕೇರಳ ನಂ. 1 ಸ್ಥಾನದಲ್ಲಿದೆ.
ತೆರಿಗೆ ಪಾವತಿಸದೆ ವಿದೇಶದಿಂದ ತಂದ ಚಿನ್ನವನ್ನು ಸಹ ಚಿನ್ನದ ಕಳ್ಳಸಾಗಣೆ ವರ್ಗಕ್ಕೆ ಸೇರಿಸಲಾಗಿದೆ. ಕಳೆದ 4 ವರ್ಷಗಳಲ್ಲಿ ಒಟ್ಟು 3173 ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ಕೇಂದ್ರ ಹಣಕಾಸು ಸಚಿವಾಲಯ ಲಿಖಿತ ರೂಪದಲ್ಲಿ ನೀಡಿದ ದಾಖಲೆಯಲ್ಲಿ ಈ ವಿಚಾರ ಅಧಿಕೃತವಾಗಿದೆ. ಈ ದತ್ತಾಂಶಗಳು ಆದಾಯ ಗುಪ್ತಚರ ವರದಿಯನ್ನು ಆಧರಿಸಿದೆ.
ಈ ನಾಲ್ಕು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 2291.51 ಕೆಜಿ ಚಿನ್ನವನ್ನು ಕೇರಳದಲ್ಲಿ ವಶಕ್ಕೆ ಪಡೆಯಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಒಂದು ಸಾವಿರ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣಗಳ ದೈನಂದಿನ ಸರಾಸರಿ 2.17 ಆಗಿದೆ.
ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕೇರಳದ ನಂತರ 2979 ಪ್ರಕರಣಗಳೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 2528 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.
ಕೇರಳ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿರುವುದರಿಂದ ರಾಜ್ಯದಲ್ಲಿ ಚಿನ್ನ ಕಳ್ಳಸಾಗಾಣೆಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಯಲಾಗಿವೆ ಎಂದು ಅಲ್ಲಿನ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಮೋದಿಗೆ ಪೈಪೋಟಿ ಕೊಡಲು ಯಾರೂ ಇರಲಿಲ್ಲ; ಸತೀಶ್ ಜಾರಕಿಹೊಳಿ ವಿಶ್ಲೇಷಣೆ

ಕಸಾಪ ದತ್ತಿ ಪ್ರಶಸ್ತಿಗೆ ಶಾ.ಮಂ.ಕೃಷ್ಣರಾಯ ಆಯ್ಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 7 =
Remember me
