ತಿರುವನಂತಪುರಂ:ಕೇರಳದ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ. ಮಹಿಳಾ ಕಾಂಗ್ರೆಸ್​ ಘಟಕದ ಅಧ್ಯಕ್ಷೆಯ ಹೆಸರನ್ನೂ ಪಕ್ಷ ಕೈ ಬಿಟ್ಟಿದೆ. ಈ ಪಟ್ಟಿಯಿಂದ ಪಕ್ಷದ ಹಲವು ನಾಯಕರ ನಡುವೆ ವೈಮನಸ್ಸು ಉಂಟಾಗಿದ್ದು, ಅವರೆಲ್ಲ ಪಕ್ಷದ ವಿರುದ್ಧ ತಿರುಗಿ ನಿಲ್ಲುವಂತಾಗಿದೆ.
ರಾಜ್ಯ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷೆ ಲತಿಕಾ ಸುಭಾಷ್​ ಎತ್ತುಮನೂರ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಬಯಸಿದ್ದರಂತೆ. ಪಕ್ಷ ಆಕೆಯ ಬಯಕೆಯನ್ನು ಈಡೇರಿಸುವ ನಂಬಿಕೆಯನ್ನೂ ಇಟ್ಟುಕೊಂಡಿದ್ದರಂತೆ. ಆದರೆ ಅದು ಹುಸಿಯಾಗಿದೆ. ಕಾಂಗ್ರೆಸ್​ ಲತಿಕಾಗೆ ಟಿಕೆಟ್​ ನಿರಾಕರಿಸಿದೆ. ಇದರಿಂದಾಗಿ ಮನನೊಂದಿರುವ ಲತಿಕಾ ಕಾಂಗ್ರೆಸ್​ ವಿರುದ್ಧ ವಿಶೇಷ ರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಲೆ ಬೋಳಿಸಿಕೊಂಡು ನ್ಯಾಯ ಕೇಳಿದ್ದಾರೆ.
ಕಾಂಗ್ರೆಸ್​ನಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ. ಹಲವು ವರ್ಷಗಳಿಂದ ಶ್ರಮ ಹಾಕಿ ದುಡಿದ ನಮ್ಮಂತವರನ್ನು ಲೆಕ್ಕದಲ್ಲಿ ಇಟ್ಟುಕೊಂಡಿಲ್ಲ ಎಂದು ಅವರು ದೂರಿದ್ದಾರೆ. ನಾನು ಬೇರಾವುದೇ ಪಕ್ಷವನ್ನು ಸೇರಿಕೊಳ್ಳುವುದಿಲ್ಲ. ಪಕ್ಷೇತರ ಸ್ಫರ್ದಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಿಗ್​ಬಾಸ್​ 8: ಇಂದು ಮನೆಯಿಂದ ಹೊರ ಬರುವವರು ಯಾರು?

ಬೆಂಗಳೂರಿನ ಜೊಮ್ಯಾಟೋ ಡೆಲಿವರಿ ಬಾಯ್​ ಪರ ನಿಂತ ಬಾಲಿವುಡ್​ ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
