|ರವಿ ಗೋಸಾವಿಬೆಳಗಾವಿ
‘ನಿನ್ನದೆಲ್ಲ ಖರ್ಚು ನಾನೇ ನೋಡಿಕೊಳ್ಳುತ್ತೇನೆ. ರಾಜೀನಾಮೆ ಕೊಟ್ಟು ಬೆಳಗಾವಿಗೆ ಬಾ’ ಎಂದವನ ಮಾತು ನಂಬಿ ಉದ್ಯೋಗ, ಚಿನ್ನಾಭರಣದ ಜತೆಗೆ ಸರ್ವಸ್ವವನ್ನೂ ಕಳೆದುಕೊಂಡಿದ್ದಾಳೆ ಬೆಂಗಾಲಿ ಬೆಡಗಿ. ಕೊಲ್ಕತ್ತಾದಲ್ಲಿ ಬ್ರಿಟಿಷ್ ಕೌನ್ಸಿಲ್ ಸ್ಕೂಲ್​ನಲ್ಲಿ ಶಿಕ್ಷಕಿಯಾಗಿದ್ದಾಕೆಗೆ ಮದುವೆಯಾಗುತ್ತೇನೆಂದು ಮೋಸ ಮಾಡಿದ ಕೇರಳದ ವಂಚಕನ ವಿರುದ್ಧ ಬೆಳಗಾವಿಯಿಂದಲೇ ಏಕಾಂಗಿಯಾಗಿ ಕಾನೂನು ಸಮರ ಸಾರಿದ್ದಾಳೆ.
ಬೆಳಗಾವಿಯ ವೈಭವ ನಗರದಲ್ಲಿ ವಾಸವಿದ್ದು, ನಗರದ ಹೊರವಲಯದಲ್ಲಿ ‘ರಾಮ್ ಹೆಸರಿನಲ್ಲಿ ಡಾಬಾ ನಡೆಸುತ್ತಿದ್ದ ಎನ್ನಲಾದ ವಂಚಕ ನೌಶಾದ್ ಚನೋತ್, ಇದೀಗ ದಿನಕ್ಕೊಂದು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅಲೆಯುತ್ತಿದ್ದಾನೆ. ಹೈ ಪ್ರೊಫೈಲ್ ಪ್ರಕರಣ ಆಗಿರುವುದರಿಂದ ಪೊಲೀಸರು ಆರೋಪಿಯನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಲವ್ ಜಿಹಾದ್?:ಪ್ರೀತಿಯ ನಾಟಕವಾಡಿ ಮೋಸ ಮಾಡಿದವನಿಗೆ ಶಿಕ್ಷೆ ಆಗಲೇಬೇಕು. ಆಗ ಮಾತ್ರ ಮತ್ತಷ್ಟು ಯುವತಿಯರು ಆತನ ಮೋಸದ ಜಾಲಕ್ಕೆ ಬಲಿಯಾಗುವುದು ತಪು್ಪತ್ತದೆ ಎಂದು ಕಣ್ಣೀರು ಸುರಿಸುತ್ತಿದ್ದಾಳೆ ಸಂತ್ರಸ್ತೆ. ದೂರು ದಾಖಲಿಸಿ 2 ತಿಂಗಳು ಕಳೆದರೂ ಪೊಲೀಸರು ಕಿಂಚಿತ್ತೂ ತನಿಖೆ ನಡೆಸದಿರುವುದು ಮಹಿಳಾ ಹೋರಾಟಗಾರರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತ ಹಿಂದುವಾದಿಗಳು ಇದು ವ್ಯವಸ್ಥಿತ ಲವ್ ಜಿಹಾದ್ ಎಂದು ಆರೋಪ ಮಾಡುತ್ತಿದ್ದಾರೆ.
ಮೆಸೆಂಜರ್​ನಲ್ಲಿ ಪ್ರೇಮ ನಿವೇದನೆ:ಆರೋಪಿ ನೌಶಾದ್ 2020ರ ಜನವರಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಶಾಪಿಂಗ್ ಮಾಲ್​ನಲ್ಲಿ ಪರಿಚಯವಾದ ಯವತಿಗೆ ನಿರ್ಮಲ್ ಎಂದು ಪರಿಚಯಿಸಿಕೊಂಡಿದ್ದಾನೆ. ಮೊಬೈಲ್ ನಂಬರ್ ಕೇಳಿದ ಆತನಿಗೆ ಯುವತಿ ಫೇಸ್​ಬುಕ್ ಐಡಿ ನೀಡಿದ್ದಳು. ಬಳಿಕ ಮೆಸೆಂಜರ್​ನಲ್ಲೇ ಆತ ಪ್ರೇಮ ನಿವೇದಿಸಿದ್ದಾನೆ. ಗೋವಾದಲ್ಲಿ ವಿವಾಹವಾಗೋಣ ಎಂದು ಸೆ.16ರಂದು ವಿಮಾನ ಟಿಕೆಟ್ ಬುಕ್ ಮಾಡಿ, ಬೆಳಗಾವಿಗೆ ಕರೆಯಿಸಿಕೊಂಡಿದ್ದಾನೆ. ನಿರ್ಮಲ್ ಹೆಸರಿನ ವೋಟರ್ ಐಡಿ ತೋರಿಸಿ, ಮದುವೆಗೆ ಒಪ್ಪಿಸಿದ್ದಾನೆ. ಬಳಿಕ ಜಾಂಬೋಟಿಯ ರೆಸಾರ್ಟ್​ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಗಿನ ದೃಶ್ಯಾವಳಿ ಚಿತ್ರೀಕರಿಸಿ, ಜಾಲತಾಣದಲ್ಲಿ ವೈರಲ್ ಮಾಡುವ ಹಾಗೂ ಜೀವ ಬೆದರಿಕೆ ಹಾಕಿದ್ದಾನೆ. ಆನಂತರ ಆಗಾಗ ಬೆಳಗಾವಿ, ಗೋವಾ, ಪುಣೆಗೆ ಕರೆಸಿಕೊಂಡು ನಿರಂತರ ದೌರ್ಜನ್ಯ ಎಸಗಿದ್ದಾನೆ.
ಮದುವೆ ತಪ್ಪಿಸಿಕೊಳ್ಳಲು ನಾಟಕ:ಮದುವೆಯಾಗಲು 3 ಬಾರಿ ಬಂದಾಗಲೂ ತಾಯಿಗೆ ಕೋವಿಡ್-19 ಆಗಿದೆ. ಸ್ನೇಹಿತ ಮೃತಪಟ್ಟಿದ್ದಾನೆ. ನನಗೆ ಕೋವಿಡ್ ದೃಢಪಟ್ಟಿದ್ದು ಕೇರಳಕ್ಕೆ ಹೋಗುವೆ ಎಂದು ಕೊಲ್ಕತ್ತಾಗೆ ಆಕೆಯನ್ನು ಕಳುಹಿಸಿದ್ದಾನೆ. ಒಂದೊಮ್ಮೆ ಗರ್ಭಿಣಿಯಾಗಿದ್ದಾಗ ಅಬಾರ್ಷನ್ ಮಾಡಿಸಿಕೊಂಡರೆ ಮಾತ್ರ ಮದುವೆ ಯಾಗುವುದಾಗಿ ಬೆದರಿಸಿ, ಸ್ನೇಹಿತನ ಮೂಲಕ ಮಾತ್ರೆಗಳನ್ನು ನೀಡಿದ್ದಾನೆ. ನಗ್ನಚಿತ್ರಗಳನ್ನು ಡಿಲೀಟ್ ಮಾಡುವಂತೆ ಅಂಗಲಾಚಿದರೂ ಅಮಾನವೀಯವಾಗಿ ನಡೆದುಕೊಂಡಿದ್ದಾನೆ ಎಂದು ಯುವತಿ ದೂರಿದ್ದಾಳೆ.
ಪ್ರಿಯಕರನ ಹುಡುಕಿ ಹೋದವಳಿಗೆ ಶಾಕ್:ಮದುವೆ ಮುಂದೂಡಲು ನೆಪ ಹೇಳಿ ಕೇರಳಕ್ಕೆ ತೆರಳುತ್ತಿದ್ದ ಪ್ರಿಯಕರನ ಜಾಡು ಹಿಡಿದು ಹೊರಟ ಬೆಡಗಿಗೆ ಕೇರಳದಲ್ಲಿ ಬಯಲಾದ ಕಟು ಸತ್ಯ ದಿಗಮೆ ಮೂಡಿಸಿದೆ. ನಿರ್ಮಲ್ ಮತ್ತು ಮಹೇಶ ಎಂದು ಪರಿಚಯಿಸಿಕೊಂಡವನ ಅಸಲಿ ಹೆಸರು ನೌಶಾದ್, ಮೆಹರೂಪ್ ಎಂದು ಗೊತ್ತಾಗಿದ್ದು, ನೌಶಾದ್​ನಿಗೆ ಅದಾಗಲೆ ವಿವಾಹವಾಗಿ 3 ಮಕ್ಕಳಿದ್ದಾರೆ. ಮಡದಿ ಮಕ್ಕಳಿ ದ್ದರೂ ತನಗೇಕೆ ಮೋಸ ಮಾಡಿದ್ದು ಎಂದು ಪ್ರಶ್ನಿಸಿದಾಗ, ‘ಸುಮ್ಮನೆ ಕೊಲ್ಕತ್ತಾಗೆ ಹೊರಡು. ಇಲ್ಲದಿದ್ದರೆ ನಿನ್ನ ಜೀವ ತೆಗೆಯುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ನಂತರ ಯುವತಿ ಬೆಳಗಾವಿಗೆ ಬಂದು ದೂರು ಸಲ್ಲಿಸಿದ್ದಾಳೆ. ವಂಚಕರಿಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ವಿಶೇಷ ತಂಡ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
|ಡಾ. ಕೆ.ತ್ಯಾಗರಾಜನ್ಪೊಲೀಸ್ ಆಯುಕ್ತ, ಬೆಳಗಾವಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 11 =
Remember me
