ಕೋಯಿಕ್ಕೋಡ್​:ಮಲಗಿದ್ದ ಪತ್ನಿಯ ತಲೆ ಕತ್ತರಿಸಿ ಕೊಲೆ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದ್ದು, ಪತ್ನಿ ಶೀಲ ಶಂಕಿಸಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ.
ಮುಹ್ಸಿಲ (20) ಕೊಲೆಯಾದ ಮಹಿಳೆ. ಜಿಲ್ಲೆಯ ಮುಕ್ಕಮ್​ ಮುನ್ಸಿಪಾಲಿಟಿಯ ಚೆರುವಡಿ ಪಜಂಪರಂಬು ನಿವಾಸಿ ಜಹೀರ್​ ಕುಟ್ಟಿಯಾಲಿ (30) ಎಂಬಾತನನ್ನು ಮಹ್ಸಿಲ ಕಳೆದ ವರ್ಷ ಸೆಪ್ಟೆಂಬರ್​ 5ರಂದು ಮದುವೆಯಾಗಿದ್ದ. ಜಹೀರ್​ ಅವರದ್ದು ಅವಿಭಕ್ತ ಕುಟುಂಬ. ತಂದೆ-ತಾಯಿ, ನಾಲ್ಕು ಸಹೋದರರು ಹಾಗೂ ಓರ್ವ ಸಹೋದರಿಯೊಂದಿಗೆ ನೆಲೆಸಿದ್ದಾನೆ.
ಮಂಗಳವಾರ (ಫೆ.16) ಬೆಳಗ್ಗೆ ಜಹೀರ್​ ಬೆಡ್​ ರೂಮ್​ನಿಂದ ಜೋರಾದ ಶಬ್ದವೊಂದು ಕೇಳಿದೆ. ಪಕ್ಕದಲ್ಲೇ ಮಲಗಿದ್ದ ತಂದೆ-ತಾಯಿ ಎಚ್ಚರಗೊಂಡು ಓಡಿ ಬಂದು ಬಾಗಿಲು ತೆಗೆಯುವಂತೆ ಮಗನನ್ನು ಕೇಳುತ್ತಾರೆ. ಆದರೆ, ಜಹೀರ್​ ಬಾಗಿಲು ತಗೆಯಲು ನಿರಾಕರಿಸಿದ್ದಾನೆ. ಕೆಲ ಸಮಯದ ಬಳಿಕ ಬಾಗಿಲು ತೆಗೆದು ರಕ್ತಸಿಕ್ತ ಚಾಕುವಿನೊಂದಿಗೆ ಜಹೀರ್​ ಓಡಿ ಹೋದನು.
ಇದನ್ನೂ ಓದಿರಿ:ಫ್ಯಾಮಿಲಿ ಕೋರ್ಟ್‌ ಡಿವೋರ್ಸ್‌ ನೀಡಿದೆ- ಪತಿ ಮೇಲ್ಮನವಿ ಸಲ್ಲಿಸಲ್ಲ- ಕೂಡಲೇ ಮರುಮದುವೆಯಾಬಹುದೆ?
ಮಗ ಓಡಿಹೋಗಿದ್ದನ್ನು ನೋಡಿ ಕೋಣೆಯೊಳಗೆ ಹೋಗಿ ನೋಡಿದ ತಂದೆ-ತಾಯಿಗೆ ಬರಸಿಡಿಲು ಬಡಿದಂತಾಯಿತು. ಅವರ ಸೊಸೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಅವರ ಕಣ್ಣಿಗೆ ಬಿದ್ದಿತು. ತಕ್ಷಣ ಕಿರುಚಿಕೊಂಡು ನೆರೆ ಮನೆಯವರನ್ನು ಎಚ್ಚರಿಸಿದರು. ಆದರೆ, ಏಕೆ ಕೊಲೆ ನಡೆದಿದೆ ಎಂಬ ಅರಿವು ಯಾರಿಗು ಇರಲಿಲ್ಲ.
ಈ ವೇಳೆ ಜಹೀರ್​ನನ್ನು ಕೆಲವರು ಹಿಂಬಾಲಿಸಿ ಹಿಡಿದುಕೊಂಡರು. ಅಷ್ಟರಲ್ಲಾಗಲೇ ಜಹೀರ್​ ಪಾಲಕರ ಮಾಹಿತಿ ಮೇರೆಗೆ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದರು ಮತ್ತು ಆತನನ್ನು ಬಂಧಿಸಿದರು. ತದನಂತರ ವಿಚಾರಣೆ ವೇಳೆ ಜಹೀರ್​ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ.
ಗಲ್ಫ್​ ದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಹೀರ್​ ಕರೊನಾ ಕಠಿಣ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಮರಳಿದ್ದನು. ಬಳಿಕ ತವರಿನಲ್ಲಿ ಪೇಂಟರ್​ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಸೆಪ್ಟೆಂಬರ್​ನಲ್ಲಿ ಮದುವೆ ಆಗಿದ್ದ. ಇಬ್ಬರು ಚೆನ್ನಾಗಿಯೇ ಇದ್ದರು ಮತ್ತು ಯಾವುದೇ ಜಗಳವಾಗಲಿ ನಡೆದಿರಲಿಲ್ಲ. ಆದರೆ, ಜಹೀರ್​ಗೆ ಪತ್ನಿಯ ನಡತೆ ಬಗ್ಗೆ ಏಕೆ ಸಂಶಯ ಬಂತೋ ಗೊತ್ತಿಲ್ಲ? ಕೊನೆಗೆ ಆಕೆಯನ್ನು ಕೊಲೆ ಮಾಡಿಬಿಟ್ಟಿದ್ದಾನೆ.
ಇದನ್ನೂ ಓದಿರಿ:ನನ್ನಲ್ಲೂ ಆಸೆಗಳಿವೆ ಆದ್ರೆ ನನ್ನ ಗಂಡನಿಗೆ ಬರೀ ಅವನದ್ದೆ ಚಿಂತೆ: ಡೆತ್​ನೋಟ್​ ಬರೆದಿಟ್ಟು ಮಹಿಳೆ ಆತ್ಮಹತ್ಯೆ!
ಇನ್ನು ಮದುವೆಯಾದಾಗಿನಿಂದ ಜಹೀರ್​, ಸ್ನೇಹಿತರಿಂದ ದೂರ ಉಳಿದಿದ್ದ. ಅಲ್ಲದೆ, ಸ್ನೇಹಿತರ ನಂಬರ್​ ಸಹ ಡಿಲೀಟ್​ ಮಾಡಿದ್ದ. ಮದುವೆ ನಂತರ ತುಂಬಾ ಖುಷಿಯಾಗಿದ್ದ ಸ್ನೇಹಿತ ಪತ್ನಿಯನ್ನು ಏಕೆ ಕೊಂದ ಎಂಬುದು ಅವರಿಗೂ ಸಹ ತಿಳಿಯುತ್ತಿಲ್ಲವಂತೆ. ಇನ್ನು ಜಹೀರ್​ ಸ್ನೇಹಿತ ರಶೀದ್​ ಮಾತಿನ ಪ್ರಕಾರ, ಜಹೀರ್​ ಮಾನಸಿಕವಾಗಿ ಬಳಲುತ್ತಿದ್ದನಂತೆ. ಸ್ನೇಹಿತರ ಜತೆಯಲ್ಲು ಹೆಚ್ಚಿಗೆ ಮಾತನಾಡುತ್ತಿರಲಿಲ್ಲವಂತೆ.
ಸದ್ಯ ಪತ್ನಿಯನ್ನು ಏಕೆ ಕೊಂದ ಎಂಬುದು ಇನ್ನು ನಿಗೂಢವಾಗಿಯೇ ಇದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

ಕತ್ತಲಾದರೂ ಮನೆಗೆ ಹಿಂತಿರುಗದ ಹೆಣ್ಣುಮಕ್ಕಳು, ಹುಡುಕುತ್ತಾ ಹೊಲಕ್ಕೆ ಹೋದ ಪಾಲಕರಿಗೆ ಕಾದಿತ್ತು ಶಾಕ್!

VIDEO: ಪ.ಬಂಗಾಳದಲ್ಲಿ ಬಾಂಬ್‌ ದಾಳಿ: ಗಂಭೀರ ಗಾಯಗೊಂಡ ಸಚಿವ- ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:5 × two =
Remember me
