ಕೊಚ್ಚಿ:ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಮಹಿಳೆಯೊಬ್ಬಳು 1500 ರೂ. ಹಣಕ್ಕಾಗಿ ಹೆತ್ತ ಮಗಳನ್ನೇ ತಲೆಹಿಡಿದಿದ್ದು, ಈ ಪ್ರಕರಣದಲ್ಲಿ ಓರ್ವ ವ್ಯಕ್ತಿ, ಆತನ ಗರ್ಲ್​ಫ್ರೆಂಡ್​ ಹಾಗೂ ಸಂತ್ರಸ್ತೆಯ ತಾಯಿಯನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಮಹಿಳೆ ಹಣ ಪಡೆದ ಬಳಿಕ ತನ್ನ ಮಗಳನ್ನು ಕೇರಳದ ಎರ್ನಾಕುಲಂಗೆ ಕರೆತಂದಳು. ಬಳಿಕ ಅಲ್ಲಿಂದ ಕಟ್ಟಕ್ಕಾಡಗೆ ಕರೆದೊಯ್ದಿದ್ದು, ಹೀಗೆ ವಿವಿಧ ಸ್ಥಳಗಳಲ್ಲಿ ತಾಯಿಯ ಸಮ್ಮುಖದಲ್ಲೇ ಸಂತ್ರಸ್ತೆಯ ಮೇಲೆ ಲೈಂಗಿ ದೌರ್ಜನ್ಯ ನಡೆದಿದೆ.
ಇದನ್ನೂ ಓದಿ:ನಟ ಸುದೀಪ್​ ವಿರುದ್ಧ ನಿರ್ಮಾಪಕ ಕುಮಾರ್​ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಜ್ಯಾಕ್​ ಮಂಜು
ಆರೋಪಿಗಳಾದ ಅಖಿಲ್​ ದೇವ್​ (25) ಮತ್ತು ಆತನ ಗರ್ಲ್​ಫ್ರೆಂಡ್​ ವಿನಿಶಾ (24) ಹಾಗೂ ಸಂತ್ರಸ್ತೆಯ ತಾಯಿಯನ್ನು ಕಟ್ಟಕ್ಕಾಡ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ತಾಯಿ ಮತ್ತು ಮಗಳನ್ನು ಆರೋಪಿ ಅಖಿಲ್​ ದೇವ್​ ರೈಲಿನಲ್ಲಿ ಭೇಟಿಯಾಗಿದ್ದ. ಬಳಿಕ ಜುಲೈ 3ರಂದು ಎರ್ನಾಕುಲಂನಲ್ಲಿ ಮಹಿಳೆಯ 13 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಾದ ನಂತರ ತಾಯಿಗೆ 1500 ರೂ. ಪಾವತಿಸಿದ ಬಳಿಕ ಆರೋಪಿ ಅಖಿಲ್, ಸಂತ್ರಸ್ತೆಯೊಂದಿಗೆ ಕಟ್ಟಕ್ಕಾಡಕ್ಕೆ ಬಂದಿದ್ದ.
ಮೊದಲು ಕಟ್ಟಕ್ಕಾಡದಲ್ಲಿರುವ ಕೋಣೆಯೊಂದರಲ್ಲಿ ಬಾಲಕಿ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಆ ಬಳಿಕ ಎಡವಾಚಲ್​ನಲ್ಲಿರುವ ತನ್ನ ಮನೆಯಲ್ಲೇ ಮತ್ತೊಮ್ಮೆ ಬಾಲಕಿ ಮೇಲೆ ಆರೋಪಿ ಅಖಿಲ್​ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಾದ ಬಳಿಕ ಸಂತ್ರಸ್ತೆ ಮತ್ತು ಗರ್ಲ್​ಫ್ರೆಂಡ್ ಜೊತೆ ಆರೋಪಿಯು ನೆಯ್ಯಟ್ಟಿಂಕರದಲ್ಲಿ ತಾತ್ಕಾಲಿಕ ಉದ್ಯೋಗ ಮಾಡುತ್ತಿದ್ದ ಕೋಯರ್​ಫೆಡ್​ ಕಂಪನಿ ಬಳಿ ಬರುತ್ತಾರೆ. ಅಲ್ಲಿ ಅಖಿಲ್​ ಕಾರಿನಿಂದ ಕೆಳಗೆ ಇಳಿದು, ಹೋಗುವ ಮುನ್ನ ಆಕೆಯ ತಾಯಿ ಬಂದು ಕರೆದುಕೊಂಡು ಹೋಗುತ್ತಾರೆ ಎಂದು ವಿನಿಶಾಗೆ ಅಖಿಲ್​ ಹೇಳುತ್ತಾನೆ. ಬಳಿಕ ವಿನಿಶಾ ಮತ್ತು ಸಂತ್ರಸ್ತೆ ಮನೆಗೆ ಹೋಗುತ್ತಾರೆ.
ಇದನ್ನೂ ಓದಿ:13 ವರ್ಷದ ಹಿಂದೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಇಬ್ಬರ ಪ್ರಾಣ ತೆಗೆದಿದ್ದ ಬ್ಯೂಟಿಷಿಯನ್ ಖಿನ್ನತೆಗೆ ಬಲಿ!
ಇಬ್ಬರ ವರ್ತನೆಯಿಂದ ಅನುಮಾನಗೊಂಡು ಅಖಿಲ್​, ಗರ್ಲ್​ಫ್ರೆಂಡ್​ ವಿನಿಶಾ ತಾಯಿ ಪೊಲೀಸರಿಗೆ ದೂರು ನೀಡಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಿದ್ದು, ಅವರ ವಿರುದ್ಧ ಪೊಕ್ಸೊ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಖದೀಮರ ಕೈಯಿಂದ ಮೊಬೈಲ್ ಉಳಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ! ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ

ಭಾರತವೀಗ ನನ್ನದು! ಪಬ್​ಜಿಯಿಂದ ಶುರುವಾದ ಪ್ರೀತಿ ಸುಖಾಂತ್ಯ, ಇಲ್ಲಿಯೇ ಉಳಿಯಲು ಪಾಕ್ ಮಹಿಳೆ​ ನಿರ್ಧಾರ

ನಾಯಿಗಳ ಕುತ್ತಿಗೆಯಲ್ಲಿ ಕ್ಯೂಆರ್ ಕೋಡ್; ಕಾಣೆಯಾದ ನಾಯಿಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 11 =
Remember me
