ತಿರುವನಂತಪುರ:ಕ್ಯಾನ್ಸರ್​ ಪೀಡಿತ ನಾಲ್ಕು ವರ್ಷದ ಬಾಲಕಿಗೆ ಅಗತ್ಯ ಇರುವ ಔಷಧಿಯನ್ನು ಸರಿಯಾದ ಸಮಯಕ್ಕೆ ಒದಗಿಸುವ ಸಲುವಾಗಿ ಮೆಡಿಕಲ್​ ಸಾರ್ಜಂಟ್​ ಓರ್ವರು, ಬೈಕ್​​ನಲ್ಲಿ 150 ಕಿ.ಮೀ.ದೂರವನ್ನು ಅತಿ ಕಡಿಮೆ ಅವಧಿಯಲ್ಲಿ ಕ್ರಮಿಸಿದ ಘಟನೆ ನಡೆದಿದೆ.
ಇದು ನಡೆದಿದ್ದು ಮಾರ್ಚ್​ 29ರಂದು. ಬಾಲಕಿ ಅಲಾಪ್ಪುಝಾದ ನಿವಾಸಿ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಈಕೆಗೆ ತಿರುವನಂತಪುರದ ಪ್ರಾದೇಶಿಕ ಕ್ಯಾನ್ಸರ್​ ಸೆಂಟರ್​​ನಲ್ಲಿ ಪ್ರತಿ ತಿಂಗಳೂ ಕಿಮೊಥೆರಪಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿಗೆ ಹೋದಾಗ ಲಾಕ್​ಡೌನ್​ ನಿಮಿತ್ತ, ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕಿಮೊ ಘಟಕಗಳನ್ನು ಮುಚ್ಚಲಾಗಿತ್ತು. ವೈದ್ಯರು ಅದರ ಬದಲಿಗೆ ಕೆಲವು ಮಾತ್ರೆಗಳನ್ನು ಬರೆದುಕೊಟ್ಟಿದ್ದರು. ಆದರೆ ಆ ಮಾತ್ರೆ ಅಲ್ಲೆಲ್ಲೂ ಸಿಗಲಿಲ್ಲ. ಅಲಾಪ್ಪುಜಾದಲ್ಲೂ ದೊರೆಯಲಿಲ್ಲ. ಇದರಿಂದ ಕಂಗಾಲಾದ ಪಾಲಕರು ಕೂಡಲೇ ಸಿವಿಲ್​ ಪೊಲೀಸ್​ ಅಧಿಕಾರಿ ಅಂಥೋನಿ ರತೀಶ್​ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದರು.
ರತೀಶ್ ಅವರು ತಮ್ಮ ಸ್ನೇಹಿತ ವಿಷ್ಣು ಎಂಬುವರಿಗೆ ಕರೆ ಮಾಡಿ ಬಾಲಕಿಯ ಬಗ್ಗೆ ತಿಳಿಸಿದರು. ಈ ವಿಷ್ಣು ಮೊದಲು ಪೊಲೀಸ್​ ಅಧಿಕಾರಿಯಾಗಿದ್ದವರು. ಈಗ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಸಾರ್ಜೆಂಟ್​ ಆಗಿದ್ದಾರೆ.
ವಿಷ್ಣು ಆ ಸಮಯದಲ್ಲಿ ಅಲಾಪ್ಪುಜಾದಲ್ಲಿ ಇದ್ದರು. ಅಲ್ಲಿಂದ ತಿರುವನಂತಪುರಂಗೆ ಹೋಗಲು ಸಿದ್ಧರಾಗಿದ್ದರು. ಮತ್ತು ಕರ್ತವ್ಯದ ನಿಮಿತ್ತ ಒಂದು ವಾರ ಅಲ್ಲಿಯೇ ಇರಬೇಕಿತ್ತು. ಆದರೆ ಬಾಲಕಿಯ ಪರಿಸ್ಥಿತಿ ಬಗ್ಗೆ ವಿವರಿಸುತ್ತಿದ್ದಂತೆ ಸಹಾಯ ಮಾಡಲು ಒಪ್ಪಿಕೊಂಡರು. ತಿರುವನಂತಪುರಂಗೆ ಹೋಗಿ ಅಗತ್ಯ ಔಷಧಗಳನ್ನು ತಂದುಕೊಡಲು ಒಪ್ಪಿಕೊಂಡರು ಎಂದು ಪೊಲೀಸ್ ಅಧಿಕಾರಿ ರತೀಶ್​ ತಿಳಿಸಿದ್ದಾರೆ.
ಹಾಗೇ ಔಷಧಿಯಗಳ ವಿವರವನ್ನು ರತೀಶ್​ ಅವರಿಂದ ಪಡೆದ ವಿಷ್ಣು ತಮ್ಮ ಬೈಕ್​ನಲ್ಲಿಯೇ ತಿರುವನಂತಪುರಂಗೆ ಹೋಗಿ ಬಾಲಕಿಗೆ ಬೇಕಾದ ಎಲ್ಲ ರೀತಿಯ ಔಷಧಗಳನ್ನೂ ತಂದುಕೊಟ್ಟಿದ್ದಾರೆ. ಹೋಗಿಬರುವ ದೂರ 150 ಕಿಮೀಗಳನ್ನು ಅತಿ ಕಡಿಮೆ ವೇಗದಲ್ಲಿ ಕ್ರಮಿಸಿದ್ದಾರೆ. ಬಾಲಕಿಗೆ ಅಂದು ಸಂಜೆ 6ಗಂಟೆಗೆ ಒಂದು ಮಾತ್ರೆ ಬೇಕಾಗಿತ್ತು. ವಿಷ್ಣು ಅವರು 5.10ಕ್ಕೆಲ್ಲ ಔಷಧಿಗಳನ್ನು ತಂದುಕೊಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದು ನಿಜಕ್ಕೂ ಅಪಾಯಕಾರಿ ಪ್ರಯಾಣವಾಗಿತ್ತು. ಆದರೆ ಓರ್ವ ವೈದ್ಯನಾಗಿ ಅವರ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
