ಕೊಲ್ಲಂ:ಕೇರಳದ ಕೊಟ್ಟರಕ್ಕರ ಡಿಪೋದಿಂದ ಕೆಎಸ್​ಆರ್​ಟಿಸಿ ಬಸ್​ ಕಳುವು ಮಾಡಿ ಪರಿಪ್ಪಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದ ಖದೀಮನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳ್ಳನನ್ನು ಸ್ರೀಕಾರ್ಯಂ ನಿವಾಸಿ ನಿಧಿನ್​ ಅಲಿಯಾಸ್​ ಟಿಪ್ಪರ್​ ಅನಿ ಎಂದು ಗುರುತಿಸಲಾಗಿದೆ.
ಖದೀಮನನ್ನು ಪಲಕ್ಕಾಡ್​ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನೇಕ ವಾಹನಗಳನ್ನು ಕಳುವು ಮಾಡಿದ ಆರೋಪ ನಿಧಿನ್​ ಮೇಲಿದೆ. ಈತ ಪಲಕ್ಕಾಡ್​ ಸರ್ವೀಸ್​ ಸ್ಟೇಷನ್​ನಲ್ಲಿ ಕೆಲಸ ಮಾಡುತ್ತಿದ್ದ. ಮಧ್ಯರಾತ್ರಿಯಾಗಿದ್ದಕ್ಕೆ ಮನೆಗೆ ಹೋಗಲು ಬಸ್​ ಕಳುವು ಮಾಡಿದ್ದಾಗಿ ನಿಧಿನ್​ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿರಿ:ಬೈಕ್​ ಕಳ್ಳನ ಸೆರೆ ಹಿಡಿಯಿತು ಸಿಸಿಟಿವಿ ಕ್ಯಾಮರಾ, ವಿಡಿಯೋ ಈಗ ವೈರಲ್…
ಫೆ.8ರಂದು ಕೊಟ್ಟರಕ್ಕರ ಡಿಪೋದಿಂದ ಬಸ್​ ಕಳುವಾಗಿತ್ತು. ಮಾರನೇ ದಿನ ಬಸ್ ಪೆರಿಪಳ್ಳಿಯಲ್ಲಿ ಕಳುವಾದ ಕೆಲವೇ ದಿನಗಳಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ ಖದೀಮನನ್ನು ಬಲೆಗೆ ಬೀಳಿಸಲು ಕಾರ್ಯಾಚರಣೆಗೆ ಇಳಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವಕನೊಬ್ಬ ಡಿಪೋದಿಂದ ಬಸ್​ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ.
ಆದರೆ, ಪೊಲೀಸರಿಗೆ ಖದೀಮದ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಬಳಿಕ ಸೈಬರ್​ ಸೆಲ್​ ನೆರವಿನಿಂದ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರಿಗೆ ಖದೀಮ ನಿಧಿನ್​ ಬಲೆಗೆ ಬಿದ್ದಿದ್ದಾನೆ. ಆತನ ಮೊಬೈಲ್​ ಟವರ್​ ಲೊಕೇಶನ್​ ಸಹಾಯದಿಂದ ನಿಧಿನ್​ನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಹಿಳೆಯನ್ನು ಕೊಂದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ತಿಂದ- ಸಂಬಂಧಿಕರನ್ನೂ ಕೊಲೆ ಮಾಡಿದ!

ಕೇರಳದಲ್ಲಿ ಎಸ್​ಡಿಪಿಐ ಗೂಂಡಾಗಿರಿಗೆ ಆರ್​ಎಸ್​ಎಸ್​ ಕಾರ್ಯಕರ್ತ ಬಲಿ!

ಆಟದ ಮಧ್ಯೆ ಮೈದಾನದ ಒಳನುಗ್ಗಿದ ಅಭಿಮಾನಿ! ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 1 =
Remember me
