ತಿರುವನಂತಪುರಂ:ಕರೊನಾ ತಡೆಗೆ ಲಾಕ್​ಡೌನ್​ ಪರಿಹಾರವಲ್ಲ; ಜನರ ಸಹಕಾರ ಅಗತ್ಯ ಎಂದು ಕರ್ನಾಟಕ ಸರ್ಕಾರ ಲಾಕ್​ಡೌನ್​ ತೆರವು ಮಾಡಿದೆ. ಆದರೆ, ಕೇರಳ ಸರ್ಕಾರ ಇದಕ್ಕೆ ವಿರುದ್ಧವಾಗಿ ಯೋಚನೆ ಮಾಡುತ್ತಿದೆ.
ಕರೊನಾ ನಿಯಂತ್ರಣದಲ್ಲಿ ಗಣನೀಯ ಶ್ರಮ ವಹಿಸಿ ವಿಶ್ವಸಂಸ್ಥೆಯಿಂದಲೂ ಮೆಚ್ಚುಗೆ ಗಳಿಸಿದ್ದ ಕೇರಳದಲ್ಲೀಗ ಕರೊನಾ ಮಹಾಮಾರಿ ತಾಂಡವವಾಡುತ್ತಿದೆ. ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ವರಿಯಾಗಿವೆ. ಇದು ಕೇರಳ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ;ರಾಜ್ಯದಲ್ಲಿ ಹೊಸ ದಾಖಲೆ ಬರೆದ ಸೋಂಕಿತರ ಸಂಖ್ಯೆ; ಕೋವಿಡ್​ ಸಾವು ನಿಯಂತ್ರಣ; ಹೊಸ ಪ್ರಕರಣಕ್ಕಿಲ್ಲ ಕಡಿವಾಣ
ಈ ಹಿಂದೆ ಕೇರಳದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳಿಸಲಾಗಿತ್ತು. ಈಗ ಮತ್ತೆ ಸಂಪೂರ್ಣ ಲಾಕ್​​ಡೌನ್​ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ, ಇದನ್ನು ಪರಿಗಣಿಸಬೇಕು ಎಂಬುದು ನನ್ನ ಅಭಿಪ್ರಾಯವೂ ಆಗಿದೆ ಎಂದು ಸಿಎಂ ಪಿಣರಾಯಿ ವಿಜಯನ್​ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕೇರಳದಲ್ಲಿ ಒಂದೇ ದಿನ 1,038 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 226 ಕೇಸ್​ಗಳು ತಿರುವನಂತಪುರದ್ದಾಗಿವೆ. ಈ ಮೂಲಕ ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8,818 ಆಗಿದೆ. ಇದರಲ್ಲಿ 53 ಜನರು ಐಸಿಯುನಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 24 ವೈದ್ಯ ಸಿಬ್ಬಂದಿಯೂ ಸೋಕಿಗೆ ಒಳಗಾಗಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?
ಕರಾವಳಿಯ ಎರಡು ಪ್ರದೇಶಗಳಲ್ಲಿ ಸೋಂಕು ಸಾಮುದಾಯಿಕ ಮಟ್ಟಕ್ಕೆ ವ್ಯಾಪಿಸಿದೆ. ಸ್ಥಳೀಯವಾಗಿ 738 ಜನರಿಗೆ ಸೋಂಕು ಹರಡಿದ್ದರೆ, 57 ಜನರ ಸಂಪರ್ಕವೇ ಗೊತ್ತಾಗುತ್ತಿಲ್ಲ. 87 ಜನರು ಹೊರದೇಶದಿಂದ ಬಂದವರು, 109 ಜನರಿಗೆ ಹೊರ ರಾಜ್ಯಗಳ ಟ್ರಾವೆಲ್​ ಹಿಸ್ಟರಿ ಇದೆ ಎಂದು ತಿಳಿಸಿದ್ದಾರೆ.ಕೇರಳದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ವೇಗವಾಗಿ ಹಬ್ಬುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಸಂಪೂರ್ಣ ಲಾಕ್​ಡೌ ನ್​ಗೆ ಕೇರಳ ಚಿಂತನೆ ನಡೆಸಿದೆ.
ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
