ತಿರುವನಂತಪುರಂ:ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಆಗಾಗ ಹೇಳುತ್ತಾರೆ. ಆದರೆ, ಇಲ್ಲಿಯೂ ಮದುವೆ ನಿಶ್ಚಯ ಆಗಬಹುದೆಂದು ಗೊತ್ತಾಗಿದ್ದೇ ಈ ಸ್ಟೋರಿ ನೋಡಿದ ಮೇಲೆ.
ಹೌದು. ಸಾಮಾನ್ಯವಾಗಿ ಮದುವೆ ಸಡಗರವೆಂದರೆ, ವಾದ್ಯ ಮೇಳಗಳ ರಂಗು, ಮನಸೆಳೆಯುವ ಹೂವಿನ ಅಲಂಕಾರ, ಅತಿಥಿಗಳ ಕಲರವ ಹಾಗೂ ವಧು-ವರರ ಉತ್ಸಾಹದೊಂದಿಗೆ ಇಡೀ ಮದುವೆ ಮಂಟಪವೇ ದೇವಲೋಕದಂತೆ ಬದಲಾಗಿರುತ್ತದೆ. ಆದರೆ, ಕೇರಳದಲ್ಲಿ ನಡೆದ ಮದುವೆಯೊಂದು ಇದಕ್ಕೆ ತದ್ವಿರುದ್ಧವಾಗಿದೆ. ಏಕೆಂದರೆ ಸದಾ ನೋವು, ಆತಂಕ ಮತ್ತು ದುಃಖವೇ ಆವರಿಸಿರುವ ಆಸ್ಪತ್ರೆಯಲ್ಲಿ ನವಜೋಡಿಯ ಮದುವೆ ನಡೆದಿದೆ.
ಇದನ್ನೂ ಓದಿರಿ:ಎಲ್​ಪಿಜಿ ಸಬ್ಸಿಡಿಗೆ ಶೀಘ್ರ ಬ್ರೇಕ್?; ಹೊರೆ ಇಳಿಕೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
ತಿರುವನಂತಪುರದ ನಿವಾಸಿ ಮನೋಜ್​ ಮತ್ತು ರೇವತಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ಶನಿವಾರ (ಫೆ.6) ವಿಶೇಷ ವಿವಾಹ ಸಮಾರಂಭವನ್ನು ನೆರವೇರಿಸಿಕೊಂಡಿದ್ದಾರೆ. ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲಿ ಮನೋಜ್​, ಬೇಡ್​ ಮೇಲೆಯೇ ರೇವತಿಯನ್ನು ವರಿಸಿದ್ದಾರೆ.
ಫೆ. 4ರಂದು ಮದುವೆ ನಡೆಯಬೇಕಿತ್ತು. ಆದರೆ, ಮನೋಜ್​ ತುರ್ತು ಚಿಕಿತ್ಸೆಗೆ ಒಳಗಾಗಬೇಕಿತ್ತು. ಇದರಿಂದ ಎರಡು ಕುಟುಂಬದ ಅದ್ಧೂರಿ ವಿವಾಹದ ಕನಸಿಗೆ ನಿರಾಸೆಯಾಗಿತ್ತು. ಹೀಗಿದ್ದರೂ ನಿರಾಸೆಯನ್ನು ಬದಿಗೊತ್ತಿ ಆಸ್ಪತ್ರೆಯಲ್ಲಿ ಮದುವೆ ಮಾಡಲು ನಿರ್ಧರಿಸಿ, ಎರಡು ಕುಟುಂಬ ವಿಶೇಷತೆಯನ್ನು ಮೆರೆದಿದೆ.
ಎಸ್​ಪಿ ಫೋರ್ಟ್​ ಆಸ್ಪತ್ರೆಯ ಕೋಣೆಯೊಂದನ್ನು ಮದುವೆ ಮಂಟಪವಾಗಿ ಬದಲಾಯಿಸಿ ವಧು-ವರರ ಮದುವೆ ನೆರವೇರಿಸಲಾಗಿದೆ. ಮನೋಜ್​ ಬೆಡ್​ ಮೇಲೆಯೇ ಮಲಗಿ ರೇವತಿಗೆ ತಾಳಿಯನ್ನು ಕಟ್ಟಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಇಒ ಡಾ. ಪಿ. ಅಶೋಕನ್​, ಡಾ. ಲೈಜಾ ಮತ್ತು ಇತರೆ ಸಿಬ್ಬಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡರು.(ಏಜೆನ್ಸೀಸ್​)
ಇದನ್ನೂ ಓದಿರಿ:ಸುದೀಪ್ ರೀಲೋಡೆಡ್!; 25ರ ಹುಮ್ಮಸ್ಸಿನಲ್ಲಿ ಮತ್ತಷ್ಟು ಮಾತು…
ಕಾಣೆಯಾಗಿದ್ದ ಯುವಕ ಮಂಗಳಮುಖಿಯಾಗಿ ಪ್ರತ್ಯಕ್ಷ: ಆತ್ಮಹತ್ಯೆಗೂ ಮುನ್ನ ಸ್ಫೋಟಕ ರಹಸ್ಯ ಬಯಲು!

ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!

ಗರ್ಭಿಣಿ ಹೆಂಡತಿ ಮತ್ತು ಮಗಳನ್ನು ಕೊಂದ ಪಾಪಿ ಗಂಡ! ಮೂರನೇ ಮದುವೆಯಾದರೂ ಮುಗಿಯಲಿಲ್ಲ ಜಗಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
