ಅಂತ್ಯಸಂಸ್ಕಾರವಾಗಿಬೇಕಿದ್ದ ಶವದ ಫೋಟೋ ತೆಗೆಯಲು ಹೋದ ಫೋಟೋಗ್ರಾಫರ್​ ಶಾಕ್​ಗೆ ಒಳಗಾಗಿದ್ದಲ್ಲದೆ, ಅನ್ಯಾಯವಾಗಿ ಸಮಾಧಿಯಾಗುತ್ತಿದ್ದ ದೇಹವನ್ನು ಕಾಪಾಡಿದ್ದಾರೆ.
ಇದೊಂದು ವಿಚಿತ್ರ ಘಟನೆ ನಡೆದಿದ್ದು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ. ಶಿವದಾಸನ್​ ಎಂಬಾತನ ತಲೆಗೆ ಗುಂಡು ತಗುಲಿ, ಬಲವಾದ ಬಿದ್ದಿತ್ತು. ಆಸ್ಪತ್ರೆಗೆ ದಾಖಲಿಸಲು ತಡವಾಗಿತ್ತು. ಆದರೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಂತೆ ಆತ ಸತ್ತೇ ಹೋಗಿದ್ದಾನೆ ಎಂದು ವೈದ್ಯರು ತಿಳಿಸಿದರು. ಇದು ಪೊಲೀಸ್​ ಕೇಸ್​ ಆಗಿದ್ದರಿಂದ ಅವರಿಗೆ ವಿಚಾರಣೆ, ಸಾಕ್ಷಿ ಸಂಬಂಧ ಮೃತನ ಫೋಟೋ ಬೇಕಿತ್ತು.
ವೈದ್ಯರು ಈ ವ್ಯಕ್ತಿ ಮೃತಪಟ್ಟಿದ್ದಾನೆಂದು ಘೋಷಿಸಿದ್ದರಿಂದ ಅವನ ಅಂತ್ಯಕ್ರಿಯೆಗೂ ಮೊದಲು ಪೊಲೀಸರು ಫೋಟೋಗ್ರಾಫರ್ ಟಾಮಿ ಥಾಮಸ್​ ಎಂಬುವರನ್ನು ಕರೆಸಿ, ಶವದ ಫೋಟೋ ಕ್ಲಿಕ್​ ಮಾಡುವಂತೆ ತಿಳಿಸಿದರು.
ಶವ ಇದ್ದ ಕೋಣೆಗೆ ಹೋದ ಫೋಟೋಗ್ರಾಫರ್​ ತನ್ನ ಕ್ಯಾಮರಾವನ್ನು ಸಿದ್ಧಪಡಿಸಿಕೊಳ್ಳುತ್ತಿರುವಾಗ ಆತನಿಗೆ ಮೃತದೇಹದಲ್ಲಿ ಏನೋ ಚಲನೆಯಾಗುತ್ತಿರುವುದು ಗಮನಕ್ಕೆ ಬಂತು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಟಾಮಿ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು.
ಡೆಡ್​ ಬಾಡಿಯ ಹತ್ತಿರದಿಂದ ಫೋಟೋ ತೆಗೆಯುತ್ತಿದ್ದುದರಿಂದ ಅದರಿಂದ ಒಂದು ನರಳಾಟದ ಸದ್ದು ಬರುತ್ತಿರುವುದು ಫೋಟೋಗ್ರಾಫರ್​ಗೆ ಕೇಳಿಸಿತ್ತು. ಮತ್ತೊಮ್ಮೆ ಆಲಿಸಿದಾಗ, ಅದು ಮೃತದೇಹದಿಂದಲೇ ಬರುತ್ತಿರುವ ಶಬ್ದ ಎಂಬುದು ಖಚಿತವಾಯಿತು. ಕೂಡಲೇ ಎಚ್ಚೆತ್ತುಕೊಂಡ ಫೋಟೋ ಗ್ರಾಫರ್​ ಆ ವ್ಯಕ್ತಿಯ ಉಸಿರಾಡುತ್ತಿದ್ದಾನೆ ಎಂಬುದನ್ನು ಗಮನಿಸಿದರು. ಒಂದು ಕ್ಷಣ ಹೌಹಾರಿದ ಅವರು, ಕೂಡಲೇ ಅಲ್ಲಿಂದ ಓಡಿ ಹೋಗಿ ವೈದ್ಯರಿಗೆ, ಪೊಲೀಸರಿಗೆ ವಿಷಯ ತಿಳಿಸಿದರು. ನಂತರ ಶಿವದಾಸನ್​ ಅವರನ್ನು ಮತ್ತೆ ಐಸಿಯುಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು.
ಒಂದೊಮ್ಮೆ ಫೋಟೋಗ್ರಾಫರ್​ ಮೃತದೇಹವನ್ನು ಗಮನಿಸದೆ ಇದ್ದರೆ, ಶಿವದಾಸನ್​ ಅವರ ನರಳಾಟ ಕೇಳಿಸಿಕೊಳ್ಳದೆ ಇದ್ದರೆ, ಆತನ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಅನ್ಯಾಯವಾಗಿ ಒಬ್ಬನ ಜೀವಂತ ಸಮಾಧಿ ಮಾಡಬೇಕಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಿ ಎಂದ ನಿರ್ಭಯಾ ರೇಪ್​ ಕೇಸ್​ನ ವಕೀಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
