ಕೇರಳ:ಕರ್ನಾಟಕದ ಸಾರಿಗೆ ಬಸ್​ಗಳಲ್ಲಿ ಇತ್ತೀಚಿಗೆ ಚಾಲಕ ಕಂ ನಿರ್ವಾಹಕರಾಗಿ ಒಬ್ಬರೇ ಕೆಲಸ ನಿರ್ವಹಿಸುವುದನ್ನು ಕಂಡಿದ್ದೇವೆ. ಆದರೆ, ಕೇರಳದಲ್ಲಿ ಕಂಡಕ್ಟರ್​ಅನ್ನು ಬಿಟ್ಟು ಬಸ್ಸೊಂದು 2.5 ಕಿ.ಮೀ ಸಂಚರಿಸಿದ ಘಟನೆ ಕೇರಳದ ಪೊನ್​ಕುನ್ನಂನಲ್ಲಿ ನಡೆದಿದೆ.
ಘಟನೆ ವಿವರ:ಸಿಮೀತ ನಿಲುಗಡೆಯಲ್ಲಿ ಮುಂಡಕಾಯಂ-ಚಂಗನಾಶ್ಶೇರಿ ಮಾರ್ಗದಲ್ಲಿ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್ ಬುಧವಾರ ಡಿಪೋದಿಂದ ಹೊರಟಿದೆ. ಬೆಳಗ್ಗೆ 11.20ರ ವೇಳೆಗೆ ಪೊನ್​ಕುನ್ನಂ ಬಸ್​ ನಿಲ್ದಾಣದಲ್ಲಿ ಬಸ್​ನ ಮಹಿಳಾ ಕಂಡಕ್ಟರ್ ಬಸ್​ನ ಟ್ರಿಪ್​ ಶೀಟ್​ ನೀಡಲು ನಿಲ್ದಾಣದೊಳಗೆ ತೆರಳಿದ್ದಾಳೆ.
ಈ ವೇಳೆ ಬಸ್​ನ ಪ್ರಯಾಣಿಕರೊಬ್ಬರು ಮಾಡಿದ ಬೆಲ್​ ಸದ್ದು ಕೇಳಿಸಿ ಕೊಂಡ ಚಾಲಕ ಬಸ್​ ಚಲಾಯಿಸಿಕೊಂಡು ಬರೋಬ್ಬರಿ 2.5 ಕಿ.ಮೀ ಸಾಗಿದ್ದಾನೆ. ಐದು ನಿಮಿಷದ ಬಳಿಕ ಕಂಡಕ್ಟರ್​ ಇಲ್ಲದಿರುವುದು ಚಾಲಕನ ಗಮನಕ್ಕೆಬಂದಿದೆ. ಆ ವೇಳೆಗೆ ಬಸ್​ 18ನೇ ಮೈಲಿ ತಲುಪಿತ್ತು. ಕೊನೆಗೆ ಕಂಡಕ್ಟರ್​ ಬರುವಿಗೆ ಕಾದು ಅಲ್ಲಿಯೇ ಬಸ್​ ನಿಲ್ಲಿಸಿಕೊಂಡಿದ್ದನು.
ಲೇಡಿ ಕಂಡಕ್ಟರ್ ಬೇರೆ ಬಸ್ ಹಿಡಿದು ಸ್ಥಳಕ್ಕೆ ತೆರಳಿದ ಬಳಿಕ ಆ ಲಿಮಿಟೆಡ್ ಸ್ಟಾಪ್ ಬಸ್ ಮುಂದೆ ಸಾಗಿತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fifteen =
Remember me
