ಕೊಚ್ಚಿ:ಕೇರಳದ ಕಲಮಸ್ಸೆರಿಯ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟದ ಶಂಕಿತ ಆರೋಪಿ ಡೊಮಿನಿಕ್ ಮಾರ್ಟಿನ್(48 ) ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆ ಕಲಿತಿದ್ದು, ಬಾಂಬ್ ತಯಾರಿಸಲು 3ಸಾವಿರ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ಮುಖೇಶ್ ಅಂಬಾನಿಗೆ ಮೂರನೇ ಬಾರಿಗೆ ಜೀವ ಬೆದರಿಕೆ; 400 ಕೋಟಿ ರೂ. ಬೇಡಿಕೆಮಾರ್ಟಿನ್ ಕುಟುಂಬವು ಕೊಚ್ಚಿ ಬಳಿ ಕಳೆದ ಐದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಎಲೆಕ್ಟ್ರಿಕ್ ಸರ್ಕ್ಯೂಟ್‌ನಲ್ಲಿ ಪರಿಣಿತ ಎಂದು ಹೇಳಲಾದ ಮಾರ್ಟಿನ್ ದುಬೈನಲ್ಲಿ ಫೋರ್‌ಮ್ಯಾನ್ ಆಗಿ ಹಲವು ವರ್ಷ ಕೆಲಸ ಮಾಡಿದ್ದು, ಎಲೆಕ್ಟ್ರಾನಿಕ್ ಸಾಧನವನ್ನು ಜೋಡಿಸಲು ಕಲಿಕೊಂಡಿದ್ದ. 2ತಿಂಗಳ ಹಿಂದೆ ದುಬೈನಿಂದ ವಾಪಸ್ಸಾಗಿದ್ದು, ಸ್ಫೋಟ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯ ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಫೋಟಕಗಳಿಂದ ಬಾಂಬ್​ ತಯಾರಿಸಲಾಗಿದೆ.ಮಾರ್ಟಿನ್ ತನ್ನ ಮನೆಯಲ್ಲಿಯೇ ಐಇಡಿಗಳನ್ನು ಜೋಡಿಸಿ ಬಾಂಬ್​ ತಯಾರಿದಸಿದ್ದಾನೆ. ಶರಣಾಗುವ ಮೊದಲು, ಆತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಪ್ರಾರ್ಥನಾ ಸಮಾವೇಶದ ಬೋಧನೆಗಳು “ದೇಶದ್ರೋಹಿ” ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಯೆಹೋವನ ಸಾಕ್ಷಿ ಆಯೋಜಿಸಿದ್ದ ಸಂಘಟಕರು ಮತ್ತು ಈ ಸಮುದಾಯವು ಸಾರ್ವಜನಿಕರು, ಮಕ್ಕಳಿಗೆ ಸಹ ತಪ್ಪು ಸಂದೇಶ ಹಾಗೂ ಮೌಲ್ಯಗಳನ್ನು ಕಲಿಸುತ್ತಿದೆ. ಸಮಾವೇಶ ನಿಲ್ಲಿಸಲು ಕೇಳಿಕೊಂಡಿದ್ದರೂ ಯಾರೂ ಗಮನಿಸಲಿಲ್ಲ. ಹೀಗಾಗಿ ಸರಣಿ ಸ್ಫೋಟ ಮಾಡಲು ನಿರ್ಧರಿಸಿದೆ ಎಂದು ಆತ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಭಾನುವಾರ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದರು. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ 2ಸಾವಿರ ಜನ ಹಾಜರಿದ್ದರು.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಸರಣಿ ಸ್ಫೋಟಗಳ ತನಿಖೆ ನಡೆಸುತ್ತಿದೆ.
ಮರಾಠ ಮೀಸಲಾತಿ ಕಿಚ್ಚು| KKRTC ಬಸ್​ಗೆ ಬೆಂಕಿ; ಅಂತರ್​ರಾಜ್ಯ ಸಾರಿಗೆ ಸಂಚಾರ ಸ್ಥಗಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
