ಬೆಂಗಳೂರು:ಕೇರಳ ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ಹೇರಬೇಕು. ಕೇರಳ ಭಯೋತ್ಪಾದಕರ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.
ಪಾಕಿಸ್ತಾನದ ಕಾರ್ಖಾನೆಯಲ್ಲಿ ತಯಾರಿಸಿರುವ 14 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸದೆ ಟ್ವೀಟ್​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಕೊಲ್ಲಂ ಜಿಲ್ಲೆಯ ಕುಲತುಪೂಝಾ ಎಂಬಲ್ಲಿನ ಪೊಲೀಸ್​ ಠಾಣೆಯಿಂದ ಬಂದೂಕು ಮತ್ತು ಬುಲೆಟ್​ಗಳು ನಾಪತ್ತೆಯಾಗಿದ್ದವು. ಈಗ 14 ಜೀವಂತ ಬುಲೆಟ್​ಗಳು ಸಿಕ್ಕಿವೆ ಎಂದು ಬರೆದುಕೊಂಡಿದ್ದಾರೆ.
ಸಿಎಎ ಪರ ಇರುವುದಕ್ಕೆ ಅಲ್ಲಿನ ಹಿಂದುಗಳಿಗೆ ಸಮಸ್ಯೆ ತಂದೊಡ್ಡಲಾಗುತ್ತಿದೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
14 ಜೀವಂತ ಬುಲೆಟ್​ಗಳು ಸಿಕ್ಕಿರುವುದನ್ನು ಅಲ್ಲಿನ ಪೊಲೀಸರು ಖಚಿತ ಪಡಿಸಿದ್ದಾರೆ. ಜತೆಗೆ ಆ ಬುಲೆಟ್​ಗಳ ಮೇಲೆ ಪಾಕಿಸ್ತಾನದ ಮುದ್ರೆ ಇರುವುದಾಗಿ ತಿಳಿಸಿದ ಪೊಲೀಸರು ಹೆಚ್ಚಿನ ತನಿಖೆಯಿಂದಷ್ಟೆ ಸತ್ಯ ಬಯಲಾಗಬೇಕಿದೆ ಎಂದಿದ್ದಾರೆ.
https://twitter.com/ShobhaBJP/status/1231430165613252608?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
