ಕೊಟ್ಟಾಯಂ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ರಕ್ತದ ಅವಶ್ಯಕತೆ ಇದ್ದ ವ್ಯಕ್ತಿಯೊರ್ವನಿಗೆ ಕೊನೆಯ ಕ್ಷಣದಲ್ಲಿ ಪೊಲೀಸರು ನೆರವಿಗೆ ಧಾವಿಸಿದ ಮನಕಲಕುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರೆಂದರೆ ಕೆಲವರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಇದೆ. ಯಾವುದಕ್ಕೂ ಸ್ಪಂದಿಸುವುದಿಲ್ಲ ಮತ್ತು ಹಣ ಬಿಚ್ಚದೆ ಯಾವುದೇ ಕೆಲಸ ಮಾಡುವುದಿಲ್ಲ ಎಂಬ ತಪ್ಪು ಭಾವನೆ ಇದೆ. ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ಅದೇ ರೀತಿ ನೋಡಬಾರದು ಮತ್ತು ಪೊಲೀಸರಲ್ಲೂ ಅಂತಃಕರಣ ಉಳ್ಳವರಿದ್ದಾರೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದ ಹಳೆಯ ಶಿಷ್ಯರು; ಡಿಕೆಶಿ ಪರ ಪರೋಕ್ಷವಾಗಿ ಬ್ಯಾಟ್ ಬೀಸಿದ ಬಿಜೆಪಿ
ಸರ್​ ನನಗೆ ಬೇರೆ ದಾರಿ ಕಾಣುತ್ತಿಲ್ಲ… ನಾನು ಎಲ್ಲ ಕಡೆ ಹುಡುಕಾಡಿದೆ, ನನಗೆ ನೆರವು ಬೇಕಿದೆ ಎಂದು ಕೇರಳದ ಥ್ರಿಕೊಡಿಥನಂ ಪೊಲೀಸ್​ ಠಾಣೆಗೆ ನಿನ್ನೆ (ಮೇ 16) ಮಧ್ಯಾಹ್ನ ಒಂದು ಕರೆ ಬರುತ್ತದೆ. ಆ ಕರೆಯನ್ನು ಥ್ರಿಕೊಡಿಥನಂ ಮೂಲದ ಅಜಿತ್​ ಎಂಬುವರು ಮಾಡಿರುತ್ತಾರೆ. ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಹೆಂಡತಿಯನ್ನು ಉಳಿಸಿಕೊಳ್ಳಲು ಅಂತಿಮ ಆಯ್ಕೆ ಎಂಬಂತೆ ಪೊಲೀಸರಿಗೆ ಕರೆ ಮಾಡಿ ನೆರವು ಕೋರುತ್ತಾರೆ.‘
ಅಷ್ಟಕ್ಕೂ ಅಜಿತ್​ ಪತ್ನಿಗೆ ಏನಾಗಿತ್ತು ಎಂದರೆ, ಒಂದೆಡೆ ಹೆರಿಗೆ ನೋವು ಆದರೆ, ಹೆರಿಗೆ ಮಾಡಲು ತಕ್ಷಣ ರಕ್ತದ ಅವಶ್ಯಕತೆ ಇರುತ್ತದೆ. ಅಜಿತ್​ ಅವರು ಎಲ್ಲ ಕಡೆ ವಿಚಾರಿಸುತ್ತಾರೆ ಮತ್ತು ಎಲ್ಲ ಕಡೆ ರಕ್ತಕ್ಕಾಗಿ ಹುಡುಕಾಡುತ್ತಾರೆ. ಆದರೆ, ಯಾವುದೇ ಪ್ರಯೋಜನ ಆಗುವುದಿಲ್ಲ. ಇಂತಹ ಸಂಕಷ್ಟು ಸ್ಥಿತಿಯಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿ ಇರುವಾಗ ಕೊನೆಯ ಆಯ್ಕೆ ಎಂಬಂತೆ ಪೊಲೀಸರ ನೆನಪಾಗಿ ಸಮೀಪದ ಠಾಣೆಗೆ ಕರೆ ಮಾಡಿ ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ:ಸೋತರೂ ಜೆಡಿಎಸ್‌ಗೆ ಹೆಚ್ಚು ಮತ: ಜಿಲ್ಲೆಯಲ್ಲಿ ಸುಧಾರಿಸಿಕೊಂಡ ಕಾಂಗ್ರೆಸ್, ಬಿಜೆಪಿ ಪಕ್ಷದ ಕಡೆಗೂ ಜನರ ಒಲವು
ಅಜಿತ್​ ಅವರ ಅಸಹಾಯಕತೆಯನ್ನು ಕೇಳಿದ ಥ್ರಿಕೊಡಿಥನಂ ಠಾಣಾ ಪೊಲೀಸರು ತಕ್ಷಣ ಅವರ ನೋವಿಗೆ ಸ್ಪಂಧಿಸುತ್ತಾರೆ. ಕೂಡಲೇ ಆಸ್ಪತ್ರೆಗೆ ತೆರಳಿ ತಾವೇ ರಕ್ತವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೇರಳ ಪೊಲೀಸ್​ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಭಾರೀ ವೈರಲ್​ ಆಗುವುದರ ಜೊತೆಗೆ ಪೊಲೀಸರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್​)
ಶೀಘ್ರದಲ್ಲೇ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಪ್ರವೀಣ್ ಸೂದ್; ಟ್ವೀಟ್ ಮೂಲಕ ವಿದಾಯ

ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ!: ಸ್ಫೋಟಕ ಹೇಳಿಕೆ ನೀಡಿದ ಸುಧಾಕರ್

ತಪ್ಪು ಮಾಡಿದ್ರೆ ನನ್ನ ವಂಶ ನಿರ್ವಂಶ ಆಗಲಿ: ಅಪಪ್ರಚಾರದ ವಿರುದ್ಧ ಸಿಡಿದೆದ್ದ ಪರಾಜಿತ ಅಭ್ಯರ್ಥಿ ಮುನಿರಾಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 3 =
Remember me
