ತ್ರಿಶ್ಶೂರ್​:ಕರೊನಾ ವೈರಸ್​ ತಡೆಗಟ್ಟಲು ಕರೆ ನೀಡಿರುವ ಲಾಕ್​ಡೌನ್​ನಿಂದಾಗಿ ಆಲ್ಕೋಹಾಲ್​ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಕೇರಳದ 38 ವರ್ಷದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ವೃತ್ತಿಯಲ್ಲಿ ಪೇಂಟರ್​ ಆಗಿರುವ ಸನೋಜ್​ ತಮ್ಮ ನಿವಾಸದ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಎಲ್ಲಿಯೂ ಆಲ್ಕೋಹಾಲ್​ ದೊರೆಯದಿದ್ದಕ್ಕೆ ಸನೋಜ್​ ತುಂಬಾ ಹತಾಶನಾಗಿದ್ದ ಎಂದು ಕುಟುಂಬದವರು ತಿಳಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ವಾಭವಿಕವಲ್ಲದ ಮರಣ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಲಾಕ್​ಡೌನ್​ ಆದೇಶ ಹೊರಬಿದ್ದಾಗಿನಿಂದ ಕೇರಳದಲ್ಲಿ ಖಾಸಗಿ ಮತ್ತು ಸರ್ಕಾರಿ ವೈನ್​ ಸ್ಟೋರ್​ಗಳು ಸಂಪೂರ್ಣ ಬಂದ್​ ಆಗಿವೆ. ಈವರೆಗೂ ಕೇರಳದಲ್ಲಿ 120ಕ್ಕೂ ಹೆಚ್ಚು ಮಂದಿಗೆ ಕರೊನಾ ವೈರಸ್​ ಸೋಂಕು ತಗುಲಿದೆ.(ಏಜೆನ್ಸೀಸ್​)
ಐಪಿಎಲ್​ ದಾಖಲೆ ಹಿಂದಿಕ್ಕಿದ ಪ್ರಧಾನಿ ಮೋದಿಯ ಲಾಕ್​ಡೌನ್​ ಘೋಷಣೆ: ಟಿವಿ ಲೋಕದಲ್ಲಿ ಹೊಸ ಇತಿಹಾಸ

ಕರೊನಾ ಭೀತಿ: ಬೇಡವೆಂದರೂ ಮನೆಯಿಂದ ಹೊರಹೋದ ತಮ್ಮನನ್ನೇ ಕೊಲೆಗೈದ ಅಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − nine =
Remember me
