ತಿರುವನಂತಪುರ:ಕರೊನಾ ಸೋಂಕಿನ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳ ಇದೀಗ ಸೋಂಕು ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಈ ರಾಜ್ಯದಲ್ಲಿ ಈಗ ಪ್ರತಿದಿನ ಸೋಂಕು ಪತ್ತೆಯಾಗುತ್ತಿರುವವರ ಸಂಖ್ಯೆ ಒಂದಂಕಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್​ಡೌನ್​ ನಿಯಮವನ್ನು ಹಂತಹಂತವಾಗಿ ಸಡಿಲಗೊಳಿಸಲು ಪಿಣರಾಯಿ ವಿಜಯನ್​ ನೇತೃತ್ವದ ಸರ್ಕಾರ ಮುಂದಾಗಿದೆ.
ರಾಜ್ಯವನ್ನು ಕೆಂಪು, ಕಿತ್ತಳೆ ಎ, ಕಿತ್ತಳೆ ಬಿ ಮತ್ತು ಹಸಿರು ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ ಬರುವ ಕಾಸರಗೋಡು, ಕಣ್ಣೂರು, ಕೋಳಿಕ್ಕೋಡ್​ ಮತ್ತು ಮಲ್ಲಾಪುರಂನಲ್ಲಿ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ. ಇಲ್ಲಿನ ಸೀಲ್​ಡೌನ್​ ಆದ ಪ್ರದೇಶಗಳಲ್ಲಿ ಜನ, ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅಗತ್ಯವಸ್ತುಗಳ ಸರಬರಾಜಿಗಾಗಿ ಕೇವಲ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರಲಿವೆ.
ಇನ್ನುಳಿದ ಪ್ರದೇಶಗಳಲ್ಲಿ ಆಯಾ ವರ್ಗೀಕರಣವನ್ನು ಆಧರಿಸಿ ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ.ನಾನ್​ಹಾಟ್​ಸ್ಪಾಟ್​ ಎನಿಸಿಕೊಂಡಿರುವ ಈ ಪ್ರದೇಶಗಳಲ್ಲಿ ರಾತ್ರಿ 7 ಗಂಟೆಯವರೆಗೆ ಹೋಟೆಲ್​ನಲ್ಲಿ ತಿಂಡಿ, ಭೋಜನ ಮಾಡಲು ಅವಕಾಶ ನೀಡಲಾಗುತ್ತಿದೆ. ಸರಿ ಮತ್ತು ಬೆಸ ಸಂಖ್ಯೆಯನ್ನು ಆಧರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಜಿಲ್ಲೆಯ ಒಳಭಾಗದಲ್ಲಿ ಸಮೀಪದ ಊರುಗಳಿಗೆ ಬಸ್​ಗಳ ಸಂಚಾರ ಆರಂಭಿಸಲಾಗುತ್ತಿದೆ. ಆದರೂ ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕಿತ್ತಳೆ ಬಿ ವಲಯದಲ್ಲಿ ಇರುವ ಅಲ್ಲಪ್ಪುಳ, ತ್ರಿವೇಂಡ್ರಂ, ಪಾಲಕ್ಕಾಡ್​, ವಯನಾಡ್​ ಮತ್ತು ತ್ರಿಷೂರ್​ನಲ್ಲಿ ಈ ಸಡಿಲಿಕೆಗಳು ಏಪ್ರಿಲ್​ 20ರಿಂದ ಜಾರಿಗೆ ಬರಲಿವೆ.
ಕಿತ್ತಳೆ ಎ ವಲಯದಲ್ಲಿರುವ ಪಟ್ಟಣಂತಿಟ್ಟಾ, ಎನ್ರಾಕುಲಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಈ ಸಡಿಲಿಕೆ ಏಪ್ರಿಲ್​ 24ರಿಂದ ಜಾರಿಗೊಳ್ಳಲಿದೆ.ಹಸಿರು ವಲಯದಲ್ಲಿರುವ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸೋಮವಾರದಿಂದಲೇ ಜನಜೀವನ ಸಾಮಾನ್ಯಗೊಳ್ಳಲಿದೆ.
ದೂರದಿಂದಲೇ ಮಗಳನ್ನು ನೋಡಿ ಕಣ್ಣೀರು ಹಾಕಿದ್ದ ನರ್ಸ್​ ಸುಗಂಧಾ ಮಗಳನ್ನು ಭೇಟಿಯಾದ ಕ್ಷಣ ಹೀಗಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + twelve =
Remember me
