ಕೇರಳ:ಕೆಲವು ಗ್ರಾಮಗಳ ಹೆಸರು ವಿಭಿನ್ನ ಮತ್ತು ವಿಶೇಷವಾಗಿರುತ್ತವೆ. ಕೆಲವು ಊರುಗಳ ಹೆಸರಿನ ಹಿಂದೆ ಒಂದು ಚಿರಿತ್ರೆ ಇರುತ್ತದೆ. ಕೇರಳವು ಕಥಕ್ಕಳಿ ನೃತ್ಯ ಪ್ರಕಾರದ ನೆಲೆವೀಡು ಹೌದು. ಹೀಗೆ ಕೇರಳಾದ ಒಂದು ಊರು ವಿಶೇಷತೆಯಿಂದ ಹೆಸರುವಾಸಿಯಾಗಿದೆ.
ಪತ್ತನಂತಿಟ್ಟ ಜಿಲ್ಲೆಯ ಪಂಪಾ ನದಿಯ ಅಚ್ಚುಕಟ್ಟು ಭಾಗದಲ್ಲಿರುವ ಆಯರೂರು ಗ್ರಾಮಕ್ಕೆ ಈಗ ‘ಆಯಿರೂರು ಕಥಕ್ಕಳಿ ಗ್ರಾಮ’ ಎಂದು ಹೆಸರಿಸಲಾಗಿದೆ. ಕಥಕ್ಕಳಿ ನೃತ್ಯ ಪ್ರಕಾರಕ್ಕೆ ಹೆಸರಾಗಿದ್ದ ಕೇರಳದ ಕುಗ್ರಾಮಕ್ಕೆ ಈಗ ಅದರ ಹೆಸರನ್ನೇ ಇಡಲಾಗಿದೆ. ಭಕ್ತಿ, ನೃತ್ಯ, ರಂಗಕಲೆ, ಸಂಗೀತ, ವಸ್ತ್ರವಿನ್ಯಾಸ, ಪ್ರಸಾಧನ ಎಲ್ಲವೂ ಮೆಳೈಸಿರುವ ಕಥಕ್ಕಳಿಗೆ ಕೇರಳದಲ್ಲಿ 300 ವರ್ಷಗಳ ಇತಿಹಾಸವಿದೆ. ಈ ಗ್ರಾಮವು ದಶಕಗಳಿಂದ ಕಥಕ್ಕಳಿ ನೃತ್ಯ ಪ್ರಕಾರವನ್ನು ಬೆಳೆಸುವ ಕಲಾವಿದರು ಇದ್ದಾರೆ.
ಇದನ್ನೂ ಓದಿ:ತಂದೆ ಮೃತ್ಯು: 5 ವರ್ಷದ ಮಗನ ಕೈ ಹಿಡಿದ ಪೊಲೀಸ್‌ ಹುದ್ದೆ!ಕಥಕ್ಕಳಿ ನೃತ್ಯ ಕಲಾವಿದರ ಕುಟುಂಬದ ಮೂರನೇ ಪೀಳಿಗೆಯ ರಾಜ್, ಸ್ವತಃ ನೃತ್ಯಗಾರನಲ್ಲದಿದ್ದರೂ ನೃತ್ಯದೆಡೆಗಿನ ಒಲವಿನಿಂದಾಗಿ 1995ರಲ್ಲಿ ಗೆಳೆಯರ ಜೊತೆಗೂಡಿ ಜಿಲ್ಲಾ ಕಥಕ್ಕಳಿ ಕ್ಲಬ್ ಅನ್ನು ಸ್ಥಾಪಿಸಿದ್ದಾರೆ.ಈ ಕ್ಲಬ್‌ನ ಮನವಿ ಆಧರಿಸಿ ಸ್ಥಳೀಯ ಗ್ರಾಮ ಪಂಚಾಯತ್‌ ಗ್ರಾಮದ ಹೆಸರು ಬದಲಿಸಲು 2010ರಲ್ಲಿ ನಿರ್ಣಯ ಅಂಗೀಕರಿಸಿತ್ತು. ರಾಜ್ಯ, ಕೇಂದ್ರ ಸರ್ಕಾರಗಳ ಅನುಮೋದನೆ ಪಡೆದಿದ್ದು, ಕೋಮು ಸಮಸ್ಯೆಗೆ ಕಾರಣವಾದೀತಾ ಎಂದೂ ಪರಿಶೀಲಿಸಲಾಗಿತ್ತು. ಆದರೆ, ಯಾವುದೇ ಆಕ್ಷೇಪ ಬರಲಿಲ್ಲ.
ಗ್ರಾಮದಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕ್ಲಬ್‌ ಯಶಸ್ವಿಯಾಗಿ ಮುನ್ನಡೆಯಲು ಅವರ ಕೊಡುಗೆಯೇ ಹೆಚ್ಚಿದೆ. ಗ್ರಾಮದಲ್ಲಿ ಮಕ್ಕಳಲ್ಲಿಯೂ ನೃತ್ಯದ ಬಗ್ಗೆ ಒಲವು ಹೆಚ್ಚುತ್ತಿದೆ. ಇದಕ್ಕೆ ಉತ್ತೇಜನ ನೀಡಲು ಕ್ಲಬ್ ಪ್ರತಿ ವರ್ಷ ಜನವರಿ ಮೊದಲ ವಾರ ಏಳು ದಿನಗಳ ಉತ್ಸವ ಆಚರಿಸುತ್ತಿದೆ. ಕಥಕ್ಕಳಿ ನೃತ್ಯದ ಪ್ರದರ್ಶನ ಇರುತ್ತದೆ. 17 ವರ್ಷದಿಂದ ಇಂತಹ ಉತ್ಸವ ನಡೆಯುತ್ತಿದೆ ಪ್ರತಿನಿತ್ಯ ಆಸುಪಾಸಿನ ಜಿಲ್ಲೆಗಳಿಂದಲೂ ಸುಮಾರು 1,500 ಮಕ್ಕಳು ಭಾಗವಹಿಸುತ್ತಾರೆ. ಹೀಗಾಗಿ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕಥಕ್ಕಳಿಯನ್ನು ನಂಬಿ ಜೀವಿಸುವ ಅನೇಕ ಕಲಾವಿದರು ಇರುವ ಈ ಗ್ರಾಮಕ್ಕೆ ಈಗ ಕಥಕ್ಕಳಿ ಎಂದೆ ಹೆಸರಿಡಲಾಗಿದೆ.
ಭಗವಾನ್ ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ದೇವರಾಗಿದ್ದಾನೆ: ಫಾರೂಕ್ ಅಬ್ದುಲ್ಲಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 13 =
Remember me
