ಪಾರಸಲೈ:ಕಳೆದ ವಾರ ಕೇರಳದ ಪಾರಸಲ್ಲ ಗ್ರಾಮದ ಜನರಿಗೆ ಅಚ್ಚರಿಯೊಂದು ಕಾದಿತ್ತು. ಗ್ರಾಮದ ರೈತನೊಬ್ಬನ ಹಸುವು ಜನ್ಮ ನೀಡಿದ ಕರುವಿಗೆ ಒಂದುಕ್ಕೊಂದು ಹೊಂದಿಕೊಂಡಂತೆ ಎರಡು ತಲೆ ಇತ್ತು. ಅಲ್ಲದೆ, ನಾಲ್ಕು ಕಣ್ಣುಗಳು, ಎರಡು ಬಾಯಿ ಮತ್ತು ಎರಡು ಜೋಡಿ ಕಿವಿಗಳು ಇದ್ದುದ್ದನ್ನು ನೋಡಿ ಇಡೀ ಊರೇ ನಿಬ್ಬೆರಗಾಗಿತ್ತು.
ನಿರೀಕ್ಷೆಯಂತೆ ರೂಪಾಂತರಗೊಂಡ ಕರುವು ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಿತ್ತು. ಈ ಅಪರೂಪದ ಕರುವನ್ನು ನೋಡಲು ಪಾರಸಲ್ಲ ಗ್ರಾಮದ ಅಕ್ಕಪಕ್ಕ ಗ್ರಾಮಸ್ಥರು ಧಾವಿಸಿ ಬಂದಿದ್ದರು.
ತನ್ನ ವಿಚಿತ್ರ ಜನನದಿಂದಲೇ ಕರುವು ಹುಟ್ಟಿನಿಂದಲೇ ಅನೇಕ ತೊಂದರೆಗೆ ಒಳಗಾಗಿದೆ. ಎರಡು ನಾಲಿಗೆಯನ್ನು ಹೊಂದಿರುವುದರಿಂದ ಸ್ವಾಭಾವಿಕವಾಗಿ ಹಾಲು ಕುಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತ ಬಾಟಲ್​ ಮೂಲಕ ಕೃತಕವಾಗಿ ಕರುವಿಗೆ ಹಾಲುಣಿಸುತ್ತಿದ್ದಾರೆ.
ಕರುವು ಡೈಸ್ಫಾಲಿಕ್ ಪ್ಯಾರಾಪಾಗಸ್ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಇದು 1 ಲಕ್ಷ ಹಸುಗಳಲ್ಲಿ ಒಂದು ಹಸುವಿಗೆ ಬರುವಂತಹ ಕಾಯಿಲೆಯಾಗಿದೆ. ಈ ರೀತಿಯ ಅಪರೂಪದ ಕಾಯಿಲೆ ಎತ್ತುಗಳು, ಆಮೆಗಳು, ಶಾರ್ಕ್​ಗಳು ಮತ್ತು ಸೀಗಡಿಗಳಲ್ಲಿ ಪತ್ತೆಯಾಗಿವೆ. ಇದು ಹಾವುಗಳಲ್ಲಿ ಸಾಮಾನ್ಯವಾಗಿದೆ.
ಅಧ್ಯಯನ ಪ್ರಕಾರ ಡೈಸ್ಫಾಲಿಕ್ ಪ್ಯಾರಾಪಾಗಸ್ ಕಾಯಿಲೆಯಿಂದ ಹುಟ್ಟುವ ಪ್ರಾಣಿಗಳು ಬದುಕುವುದು ತುಂಬಾ ವಿರಳ. ಅದರಲ್ಲೂ ಬೆರಳೆಣಿಕೆಯಷ್ಟು ಪ್ರಾಣಿಗಳು ಮಾತ್ರ ಪ್ರೌಢಾವಸ್ತೆಯ ಹಂತವನ್ನು ತಲುಪುತ್ತವೆ.
ಸದ್ಯದ ಕರು ಮತ್ತು ಹಸು ಬದುಕುಳಿದಿದ್ದು, ಸಾಕಷ್ಟು ತೊಂದರೆಗಳ ನಡುವೆಯೂ ಕರು ಬದುಕುಳಿಯಲಿದೆ ಎಂದು ರೈತ ಮತ್ತು ಜನರು ನಂಬಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
