ಕಣ್ಣೂರು:ನಿನ್ನೆ (ಅ.22) ಮಧ್ಯಾಹ್ಮ ಕೇರಳದ ಕಣ್ಣೂರು ಜಿಲ್ಲೆಯ ಪನೋರ್​ ಪಟ್ಟಣದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಆಕೆಯ ಮನೆಯ ಬೆಡ್​ರೂಮ್​ನಲ್ಲಿ ಪತ್ತೆಯಾಗಿದ್ದು, ಆರೋಪಿ ಶ್ಯಾಮಜಿತ್​ ಎಂಬಾತ ಪೊಲೀಸರಿಗೆ ಶರಣಾದ ಬಳಿಕ ಇದೊಂದು ಬರ್ಬರ ಹತ್ಯೆ ಪ್ರಕರಣ ಎಂಬುದು ಖಚಿತವಾಗಿದೆ.
ಕೊಲೆಯಾದ ಯುವತಿಯ ಹೆಸರು ವಿಷ್ಣುಪ್ರಿಯಾ. ಕೂತುಪರಂಬುವಿನ ಮನಾಂಥೇರಿ ಮೂಲದ ಶ್ಯಾಮಜಿತ್​ ಪೊಲೀಸರಿಗೆ ಶರಣಾಗಿದ್ದು, ಪ್ರೇಮ ವೈಫಲ್ಯವೇ ಕೊಲೆಗೆ ಕಾರಣ ಎಂಬುದು ಆರೋಪಿಯ ಹೇಳಿಕೆಯಿಂದ ಬಯಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ನಿನ್ನೆ ವಿಷ್ಣುಪ್ರಿಯಾ, ಸ್ನೇಹಿತೆಗೆ ವಿಡಿಯೋ ಕರೆ ಮಾಡಿ ಮಾತನಾಡುವಾಗಲೇ ಆರೋಪಿ ಶ್ಯಾಮಜಿತ್​ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾನೆ. ಆತ ಬಂದಿದ್ದನ್ನು ನೋಡಿದ ಆಕೆ, ಗಾಬರಿಗೊಂಡು ಫೋನ್ ಮೂಲಕ ತನ್ನ ಸ್ನೇಹಿತೆಗೆ ಅವನ ಹೆಸರನ್ನೂ ಹೇಳಿದ್ದಾಳೆ. ಇದಾದ ಮರುಕ್ಷಣವೇ ಫೋನ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
ಸುತ್ತಿಗೆ ಮತ್ತು ಚಾಕು ಹಿಡಿದುಕೊಂಡು ವಿಷ್ಣುಪ್ರಿಯಾ ಮನೆ ಪ್ರವೇಶಿಸಿದ ಆರೋಪಿ ಶ್ಯಾಮಜಿತ್​, ಆಕೆಯ ಕತ್ತು ಸೀಳುವ ಮುನ್ನ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಆಕೆಯನ್ನು ಹುಡುಕಿಕೊಂಡು ಮೊದಲು ಅಡುಗೆ ಮನೆಗೆ ಹೋಗಿದ್ದಾನೆ. ಅಲ್ಲಿ ಕಾಣದಿದ್ದಾಗ, ಆಕೆಯ ರೂಮಿನ ಕಡೆ ಹೋಗಿದ್ದಾನೆ. ಈ ವೇಳೆ ಆಕೆ ತನ್ನ ಸ್ನೇಹಿತೆ ಜೊತೆ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಇರುವುದನ್ನು ಗಮನಿಸಿದ್ದಾನೆ. ದಿಢೀರನೇ ಶ್ಯಾಮ್​ಜಿತ್​ನನ್ನು ನೋಡಿದ ವಿಷ್ಣುಪ್ರಿಯಾ ಗಾಬರಿಯಿಂದಲೇ ಆತನ ಹೆಸರನ್ನು ಕೂಗಿಕೊಂಡಿದ್ದಾಳೆ. ಈ ವೇಳೆ ಆಕೆಯ ತಲೆಗೆ ಆತ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಇದಾದ ಬಳಿಕ ತಾನು ತಂದಿದ್ದ ಚಾಕುವಿನಿಂದ ಆಕೆಯ ಕುತ್ತಿಗೆಯನ್ನು ಸೀಳಿ, ಕೈಗಳನ್ನು ಕತ್ತರಿಸಿದ್ದಾನೆ.
ವಿಷ್ಣುಪ್ರಿಯಾಳ ದೇಹದಲ್ಲಿ 18 ಕತ್ತರಿಸಿದ ಗುರುತುಗಳಿವೆ. ಶ್ಯಾಮಜಿತ್ ಕೂತುಪರಂಬು ಅಂಗಡಿಯಿಂದ ಸುತ್ತಿಗೆಯನ್ನು ಖರೀದಿಸಿದ್ದನು. ಆರೋಪಿಯು ದಿನಗಟ್ಟಲೆ ವಿಷ್ಣುಪ್ರಿಯಾಳನ್ನು ಹಿಂಬಾಲಿಸಿ, ಆಕೆಯ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದ. ಈ ಸಮಯದಲ್ಲಿ ಆಕೆಯ ಚಿಕ್ಕಮ್ಮ ನಿಧನರಾದರು. ಆಕೆಯ ಒಬ್ಬಂಟಿಯಾಗಿರುವ ಸ್ಥಳವನ್ನು ಹುಡುಕಲು ಶ್ಯಾಮಜಿತ್​ ಪ್ರಯತ್ನಿಸುತ್ತಿದ್ದನು. ತನ್ನ ಚಿಕ್ಕಮ್ಮನ ಅಂತ್ಯಕ್ರಿಯೆಯ ನಂತರ ವಿಷ್ಣುಪ್ರಿಯಾ ತನ್ನ ಮನೆಗೆ ಒಬ್ಬಳೇ ಹೋಗುವುದನ್ನು ಕಂಡ ಶ್ಯಾಮಜಿತ್​, ಆಕೆಯ ಮೇಲೆ ದಾಳಿ ಮಾಡಲು ನಿರ್ಧರಿಸಿದನು. ಅವಳು ಸತ್ತಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ ಅವನು ಅಪರಾಧದ ಸ್ಥಳವನ್ನು ತೊರೆದನು.
ಶ್ಯಾಮಜಿತ್ ಮತ್ತು ವಿಷ್ಣುಪ್ರಿಯಾ ಈ ಹಿಂದೆ ಪ್ರೀತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಇಬ್ಬರು ಬೇರೆಯಾದರು ಮತ್ತು ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ವಿಷ್ಣುಪ್ರಿಯಾ ಸ್ಪಷ್ಟಪಡಿಸಿದ್ದಳು. ಆದರೆ, ಇದು ಶ್ಯಾಮಜಿತ್‌ ಇಷ್ಟವಾಗಲಿಲ್ಲ. ಹೀಗಾಗಿ ಆಕೆಯ ಮೇಲೆ ಕೆಂಡಕಾರುತ್ತಿದ್ದ ಶ್ಯಾಮಜಿತ್​, ನಿನ್ನೆ ದುಷ್ಕೃತ್ಯ ಎಸಗಿದ್ದಾನೆ.
ವಿಷ್ಣುಪ್ರಿಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.(ಏಜೆನ್ಸೀಸ್​)
ಈ ಸಲದ ಮಕರ ಸಂಕ್ರಾಂತಿಯಲ್ಲೂ ಬಿಗ್ ಕ್ಲಾಶ್

ಪನೋರಮಾಗೆ ಕನ್ನಡದಿಂದ ಎರಡು ಚಿತ್ರಗಳು..

ಯೌವ್ವನದ ಜೋಶ್​ನಿಂದಾದ ಜೋಡಿ ಅಪರಾಧಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
