ಕೊಚ್ಚಿ:ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಮಹಿಳೆಯೊಬ್ಬಳು ತುತ್ತು ಅನ್ನಕ್ಕಾಗಿ ಬೇರೆ ಯಾವುದೇ ದಾರಿ ತೋಚದಿದ್ದಾಗ, ತನಗಿರುವ ಒಂದೇ ಆಯ್ಕೆ ಅಂದುಕೊಂಡ ಮಹಿಳೆ ಅಂತಿಮವಾಗಿ ತನ್ನ ಮಗನ ಟೀಚರ್​ ಬಳಿಯೇ 500 ರೂ. ಹಣ ಬೇಡುತ್ತಾಳೆ. ತನಗಿರುವ ಮೂವರು ಮಕ್ಕಳಲ್ಲಿ ಓರ್ವ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದು, ಮೂವರ ಹೊಟ್ಟೆ ತುಂಬಿಸಲು ಹಣಕ್ಕಾಗಿ ಮಗನ ಶಿಕ್ಷಕಿಯ ಬಳಿ ಹಣ ಬೇಡುವ ತಾಯಿಯ ಅಸಹಾಯಕತೆ ನೋಡಿದ ಹೃದಯವಂತ ಜನರು ಇಂದು ಆ ತಾಯಿಯ ಬಡತನವನ್ನೇ ಹೋಗಲಾಡಿಸಿದ್ದಾರೆ. ನಿಜಕ್ಕೂ ಇದೊಂದು ಮನ ಮುಟ್ಟುವ ನೈಜ ಘಟನೆಯಾಗಿದೆ.
46 ವರ್ಷದ ಸುಭದ್ರ ಎಂಬಾಕೆ ಕೇರಳದ ಪಲಕ್ಕಾಡ್​ ನಿವಾಸಿ. ತನ್ನ ಪುತ್ರ ಅಭಿಶೇಕ್​ ಅರು ಶಿಕ್ಷಕಿ ಗಿರಿಜಾ ಹರಿಕುಮಾರ್​ ಬಳಿ ಊಟಕ್ಕಾಗಿ 500 ರೂ. ಹಣವನ್ನು ಬೇಡಿದ್ದರು. ಕಳೆದ ಆಗಸ್ಟ್​ ತಿಂಗಳಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ ಸುಭದ್ರ, ಮಕ್ಕಳನ್ನು ಸಾಕಲು ಹಾಗೂ ತನ್ನ ದೈನಂದಿನ ಅಗತ್ಯ ಪೂರೈಕೆಗಳನ್ನು ಭರಿಸಲು ಹೆಣಗಾಡುತ್ತಿದ್ದಳು.
ಕುಟುಂಬದ ಪರಿಸ್ಥಿತಿಯನ್ನು ನೋಡಲಾಗದೇ ಅವರ ನೆರವಿಗೆ ಧಾವಿಸಿ ಶಿಕ್ಷಕಿ ಗಿರಿಜಾ, ಸುಭದ್ರ ಅವರ ಜೊತೆಗೂಡಿ, ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಯಾರಾದರೂ ನೆರವು ನೀಡಿ ಅಂತಾ ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸುಭ್ರದ ಅನುಭವಿಸುತ್ತಿರುವ ಕಷ್ಟದ ಕ್ಷಣವನ್ನು ವಿವರಿಸಿ, ಆಕೆಯ ಬ್ಯಾಂಕ್​ ಖಾತೆಯನ್ನು ನಮೂದಿಸಿ, ಮನಮುಟ್ಟುವ ವಿಡಿಯೋವನ್ನು ಹರಿಬಿಟ್ಟಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಅನೇಕರು ಸುಭದ್ರ ಅವರ ಬ್ಯಾಂಕ್​ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ವಿಡಿಯೋ ಪೋಸ್ಟ್​ ಮಾಡಿದ ಎರಡೇ ದಿನದಲ್ಲಿ ದಾನಿಗಳಿಂದ ಸುಮಾರು 51 ಲಕ್ಷ ರೂ. ರೂಪಾಯಿ ಸುಭದ್ರ ಬ್ಯಾಂಕ್​ ಖಾತೆಗೆ ಜಮಾ ಆಗಿದೆ.
ಸುಭದ್ರ ಅವರು ನನ್ನ ಬಳಿ 500 ರೂ. ಕೇಳಿದರು. ಆದರೆ, ನಾನು 1000 ರೂ. ಕೊಟ್ಟೆ ಮತ್ತು ನಾನೇನಾದರೂ ಮಾಡಬೇಕು ಎಂದು ಅವರಿಗೆ ಹೇಳಿದೆ ಎಂದು ಗಿರಿಜಾ ಅವರು ತಿಳಿಸಿದರು. ಒಂದು ದಿನ ಸುಭದ್ರ ಅವರ ಮನೆಗೆ ಭೇಟಿ ನೀಡಿದ ಗಿರಿಜಾ ಅವರಿಗೆ ಸುಭದ್ರ ಅವರ ಕಠಿಣ ಪರಿಸ್ಥಿತಿ ಮನವರಿಕೆಯಾಗಿದೆ. ಬಡತನದಲ್ಲಿ ಬೇಗೆಯಲ್ಲಿ ಬೇಯುತ್ತಿದ್ದ ಕುಟುಂಬದಲ್ಲಿ ಕೇವಲ ಒಂದು ಹಿಡಿ ಕೈನಷ್ಟು ಮಾತ್ರ ಕಾಳುಗಳಿದ್ದವು. ಅದನ್ನು ಬಿಟ್ಟರೆ ಬೇರೆ ಏನು ಇರಲಿಲ್ಲ. ಮಕ್ಕಳಿಗೆ ತಿನ್ನಲೂ ಅಗತ್ಯವಾಗಿ ಬೇಕಾದ ಯಾವ ಪದಾರ್ಥಗಳೂ ಇರಲಿಲ್ಲ ಎಂದು ಗಿರಿಜಾ ಹೇಳಿದ್ದಾರೆ. ಬಳಿಕ ಒಂದು ನಿರ್ಧಾರಕ್ಕೆ ಬಂದ ಗಿರಿಜಾ, ಸುಭದ್ರ ಅವರ ಮನೆಯ ಇಡೀ ಚಿತ್ರಣವನ್ನು ತೋರಿಸಿ, ಅವರ ಅಸಹಾಯಕ ಸ್ಥಿತಿಯನ್ನು ವಿವರಿಸಿ, ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಶಿಕ್ಷಕಿಯ ಉದ್ದೇಶವನ್ನು ಶ್ಲಾಘಿಸುತ್ತಿದ್ದಾರೆ. ಆ ಪೋಸ್ಟ್ ಮಾಡುವಾಗ ನನ್ನ ಮನಸ್ಸಿನಲ್ಲಿ ಕೇವಲ ಎರಡು ಉದ್ದೇಶಗಳಿದ್ದವು. ಮೊದಲನೆಯದು ಅವರ ಅಪೂರ್ಣ ಮನೆಯನ್ನು ಪೂರ್ಣಗೊಳಿಸಬೇಕು ಮತ್ತು ಅವರನ್ನು ಉತ್ತಮ ಸ್ಥಳಕ್ಕೆ ಬದಲಾಯಿಸಬೇಕು. ಎರಡನೆಯದು ಆ ತಾಯಿ ತನ್ನ ಮಕ್ಕಳಿಗೆ ಆಹಾರ ಮತ್ತು ಶಿಕ್ಷಣಕ್ಕಾಗಿ ಯಾರ ಮುಂದೆಯೂ ಭಿಕ್ಷೆ ಬೇಡಬಾರದು ಎಂಬುದು. ನಿರೀಕ್ಷೆಗೂ ಮೀರಿ ಸ್ಪಂದಿಸಿದ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಗಿರಿಜಾ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದು ಸುಭದ್ರ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸುಭದ್ರಳ ಪತಿ ಸಾಯುವ ಮೊದಲು ನಿರ್ಮಿಸಲು ಪ್ರಾರಂಭಿಸಿದ ಮನೆಯನ್ನು ಪೂರ್ಣಗೊಳಿಸಲು ಸ್ವಲ್ಪ ಹಣವನ್ನು ಬಳಸಲಾಗುತ್ತದೆ ಮತ್ತು ಉಳಿದ ಹಣವನ್ನು ಅವರ ಜೀವನ ವೆಚ್ಚಕ್ಕಾಗಿ ಬ್ಯಾಂಕ್‌ಗೆ ಜಮಾ ಮಾಡಲಾಗುವುದು ಎಂದು ಗಿರಿಜಾ ಅವರು ತಿಳಿಸಿದ್ದಾರೆ.
ಇನ್ನು ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಕೇವಲ ಒಂದು ವಿಡಿಯೋ ನೋಡಿ ಅಷ್ಟೊಂದು ಹಣದ ಹೊಳೆ ಹರಿಸಿದ್ದಾರೆ ಅಂದರೆ, ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರುವ ಮಾನವೀಯತೆಯ ನಡುವೆ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡು ಜೀವಿಸುತ್ತಿರುವವರು ನಮ್ಮ ನಡುವೆ ಇನ್ನು ಇದ್ದಾರೆ ಎಂಬುದು ಖುಷಿಯ ಸಂಗತಿ.(ಏಜೆನ್ಸೀಸ್​)
ದೇಶದಲ್ಲಿ ಮತ್ತೆ ಆವರಿಸಿದ ಕೋವಿಡ್​ ಭೂತ! ಪುನಃ ಲಾಕ್​ಡೌನ್​ ಆಗುತ್ತಾ? ತಜ್ಞರು ಹೇಳೋದೇನು?

ಗಡಿ ಘರ್ಷಣೆ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಕಲಾಪ ವ್ಯರ್ಥ; ರಾಜ್ಯಸಭೆಯಲ್ಲಿ ಸಭಾತ್ಯಾಗ ಮುಂದುವರಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲ

ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಕಂಕಣ; ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹತ್ತರ ಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
