ತಿರುವನಂತಪುರಂ:ಲಿವ್ ಇನ್  ರಿಲೇಶನ್​ನಲ್ಲಿದ್ದ ಮಹಿಳೆ ತನ್ನ ಜತೆಗಾರ ಹಚ್ಚಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಮೃತಳನ್ನು 28 ವರ್ಷದ ಅಥಿರಾ ಎಂದು ಗುರುತಿಸಲಾಗಿದೆ. ಈಕೆ ಶಾನವಾಸ್​ ಎಂಬಾತನ ಜತೆ ಲಿವ್ ಇನ್ ರಿಲೇಶನ್​ನಲ್ಲಿದ್ದಳು. ಅಥಿರಾ ಸೆರೆಹಿಡಿದಿದ್ದ ಹಾಗೂ ಜೂನ್​ 8ರಂದು ಅಪ್​ಲೋಡ್​ ಮಾಡಲು ಬಯಸಿದ್ದ ವಿಡಿಯೋವೊಂದರ ಕುರಿತು ಇಬ್ಬರ ನಡುವೆ ಜಗಳ ನಡೆದಿತ್ತು.
ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಕೋಪದ ಕೈಗೆ ಬುದ್ಧಿ ಕೊಟ್ಟ ಶಾನವಾಸ್​, ಅಥಿರಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಶೇ. 40 ರಷ್ಟು ಸುಟ್ಟ ಗಾಯಗಳಿಂದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಥಿರಾ ಮತ್ತು ಶಾನವಾಸ್​ಗೆ 6 ತಿಂಗಳ ಮಗುವಿದೆ. ಘಟನೆ ನಡೆದಾಗ ಮಗು ಮನೆಯಲ್ಲಿಯೇ ಇತ್ತು. ದಂಪತಿ ಕಳೆದ ಎರಡು ವರ್ಷದಿಂದ ಕೊಲ್ಲಂ ಜಿಲ್ಲೆಯ ಅಂಚಲ್​ ತಾಲೂಕಿನ ಕೈಪಲ್ಲಿಮುಕ್ಕುವಿನಲ್ಲಿ ನೆಲೆಸಿದ್ದರು. ಘಟನೆ ನಡೆದ ಬೆನ್ನಲ್ಲೇ ಮೊದಲು ಅಥಿರಾಳನ್ನು ಅಂಚಲ್​ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆ ತಿರುವನಂತಪುರಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆ ನಡೆಯುವಾಗಲೇ ಆಕೆಯನ್ನು ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆಯುವಾಗ ಶಾನವಾಸ್​ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎಂದು ಹೇಳಿದ್ದಾಳೆ. ಅದೇ ಆಸ್ಪತ್ರೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಥಿರಾ ಹೇಳಿಕೆ ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ

ಮದುವೆಯಾಗ್ತೇನೆಂದು ಕಾಡಿಗೆ ಕರೆದೊಯ್ದು ರೇಪ್​! ಪೊಲೀಸ್​ ಠಾಣೆ ಸಿಬ್ಬಂದಿ ವಿರುದ್ಧವೇ ದೂರು ನೀಡಿದ ಯುವತಿ

ಒಂಟಿ ಕೋಣೆಯಲ್ಲಿ 10 ವರ್ಷ ಪ್ರೇಯಸಿಯನ್ನು ಬಚ್ಚಿಟ್ಟಿದ್ದ ಪ್ರಕರಣಕ್ಕೆ ಮತ್ತೊಂದು ತಿರುವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − thirteen =
Remember me
