ತಿರುವನಂತಪುರಂ:ಅಫ್ಘಾನಿಸ್ತಾನದಲ್ಲಿನ ಇಸ್ಲಾಮಿಕ್​ ಸ್ಟೇಟ್​ ನೇತೃತ್ವದ ಸಮುದಾಯವನ್ನು ಸೇರಲು ತಮ್ಮ ಗಂಡಂದಿರೊಂದಿಗೆ ದೇಶವನ್ನೇ ತೊರೆದಿದ್ದ ಕೇರಳ ಮೂಲದ ಇಬ್ಬರು ಮಹಿಳೆಯರು ಇದೀಗ ತವರಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇಸ್ಲಾಮಿಕ್​ ಸ್ಟೇಟ್​ ವ್ಯಾಪ್ತಿಯನ್ನು ಉಲ್ಲಂಘಿಸಿ ಆಫ್ಘಾನ್​ ಏಜೆನ್ಸಿಗಳ ಕೈಗೆ ಸಿಕ್ಕಿಬಿದ್ದ ಬಳಿಕ ತವರಿಗೆ ಮರಳುವ ಆಸೆಯನ್ನು ಅವರ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ವೆಬ್​ಸೈಟ್​ ಒಂದರಲ್ಲಿ ವಿಡಿಯೋ ಬಿಡುಗಡೆಯಾಗಿದ್ದು, ತಿರುವನಂತಪುರಂ ನಿವಾಸಿ ಫಾತಿಮಾ ಅಲಿಯಾಸ್ ನಿಮಿಷಾ ಮತ್ತು ಎರ್ನಾಕುಲಂ ನಿವಾಸಿ ಸೋನಿಯಾ ಸೆಬಾಸ್ಟಿಯನ್​ ಅಲಿಯಾನ್​​ ಆಯೇಷಾ ತವರಿಗೆ ಮರಳುವ ಆಸೆ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಗಂಡಂದಿರನ್ನು ಅಫ್ಘಾನಿಸ್ತಾನದಲ್ಲೇ ಹತ್ಯೆಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ನಿಮಿಷಾ ಮತ್ತು ಸೋನಿಯಾರನ್ನು ಕಾಲೇಜು ದಿನಗಳಲ್ಲಿ ಹಿಂದು ಮತ್ತು ಕ್ರಿಶ್ಚಿಯನ್​ ಧರ್ಮದಿಂದ ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತಾಂತರ ಬಳಿಕ ನಿಮಿಷಾ ಮುಸ್ಲಿಂ ಮತಾಂತರಿ ಎಸಾ ಎಂಬುವನನ್ನು ಮದುವೆಯಾಗಿದ್ದಳು. ಸೋನಿಯಾ ಕಾಸರಗೋಡಿನ ಐಎಸ್​ ನಾಯಕ ಅಬ್ದುಲ್​ ರಶೀದ್​ ಜತೆ ವಿವಾಹವಾಗಿದ್ದಳು.
ಆಫ್ಘಾನಿಸ್ತಾನದ ಜೀವನದಿಂದ ದುಃಖಿತರಾಗಿರುವ ಸೋನಿಯಾ ತನ್ನ ಪತಿಯ ಮನೆಗೆ ಹಿಂದಿರುಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ನಿಮಿಷಾ ತನ್ನ ತಾಯಿಯನ್ನು ಸೇರುವ ಇಚ್ಛೆಯನ್ನು ತಿಳಿಸಿದ್ದಾಳೆ.(ಏಜೆನ್ಸೀಸ್​)
ವಿಶ್ವದೆಲ್ಲೆಡೆ ಇರುವ ಮಳಿಗೆಗಳನ್ನು ಮುಚ್ಚುವ ನಿರ್ಧಾರ ಘೋಷಿಸಿದ ಸ್ಪೋರ್ಟ್ಸ್​​ ಕ್ಷೇತ್ರದ ದೈತ್ಯ ಕಂಪನಿ ನೈಕ್

ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 7 =
Remember me
