ಪಲಕ್ಕಾಡ್​:ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ವ್ಯಕ್ತಿಯ ಹೆಸರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಸಂಚಾರಿ ಪೊಲೀಸರು ನೋಟಿಸ್​ ನೀಡಿರುವ ಘಟನೆ ಕೇರಳದ ಪಲಕ್ಕಾಡ್​ನಲ್ಲಿ ನಡೆದಿದೆ.
ನೋಟಿಸ್​ ಅನ್ನು ಪಲಕ್ಕಾಡ್​ನಲ್ಲಿರುವ ವಿನೋದ್​ ಎಂಬುವರ ಮನೆಗೆ ಕಳುಹಿಸಲಾಗಿದೆ. ಮೃತ ವಿನೋದ್ ಅವರ ತಂದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಹಿಂಬದಿ ಸೀಟಿನ ಪ್ರಯಾಣಿಕರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದನ್ನು ಎಐ ಕ್ಯಾಮೆರಾ ಪತ್ತೆಹಚ್ಚಿರುವ ಸಂಬಂದ ನೋಟಿಸ್​ ನೀಡಲಾಗಿದೆ. ಆದರೆ, ವಿನೋದ್​ ಹೇಳುವುದೇ ಬೇರೆ.
ಇದನ್ನೂ ಓದಿ:508 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿ: ಭಾರತೀಯ ರೈಲ್ವೆ ಇತಿಹಾಸದ ಹೊಸ ಅಧ್ಯಾಯ ಆರಂಭ ಎಂದ ಪ್ರಧಾನಿ
ವಿನೋದ್​ ಅವರ ತಂದೆಯ ಹೆಸರು ಚಂದ್ರಶೇಖರನ್​. ಪಲಕ್ಕಾಡ್​ನ ಕಲವಪಡ ಮೂಲದವರು. 89ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಒಂದೂವರೆ ವರ್ಷ ಕಳೆದಿದೆ. ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರನ್​ ಸಾವಿಗೂ ಮುನ್ನ 7 ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಅಂದಿನಿಂದ ಪಂಕ್ಚರ್​ ಹಾಕಿಸಲು ಸಹ ಸ್ಕೂಟರ್​ ಹೊರಗೆ ತೆಗೆದುಕೊಂಡು ಹೋಗಿಲ್ಲ ಎಂದು ವಿನೋದ್​ ಹೇಳಿದ್ದಾರೆ.
ನೋಟಿಸ್​ ಬಂದಿದ್ದನ್ನು ನೋಡಿ ನಮಗೇ ಶಾಕ್​ ಆಗಿದೆ. ಯಾರೂ ಕೂಡ ನನ್ನ ತಂದೆಯ ಸ್ಕೂಟರ್​ ಅನ್ನು ಮುಟ್ಟಿಲ್ಲ. ಕಳೆದ ಒಂದೂವರೆ ವರ್ಷದಿಂದ ಸ್ಕೂಟರ್​ ಅನ್ನು ಹೊರಗಡೆ ತೆಗೆದುಕೊಂಡು ಹೋಗಿಲ್ಲ. ಈಗ ನೋಡಿದರೆ ನೋಟಿಸ್​ ಬಂದಿದೆ. ನಾನು ಯಾವುದೇ ಕಾರಣಕ್ಕೂ ದಂಡ ಕಟ್ಟುವುದಿಲ್ಲ. ಬೇಕಾದ್ರೆ ಈಗ ಅವರು ನನ್ನ ತಂದೆಯನ್ನು ಬಂಧಿಸಲಿ, ಅದನ್ನು ಬಿಟ್ಟು ಇನ್ನೇನು ಮಾಡಲು ಸಾಧ್ಯ ಎಂದು ವಿನೋದ್​ ಹೇಳಿದ್ದಾರೆ.(ಏಜೆನ್ಸೀಸ್​)
ಕಾರಿನೊಳಗೆ ಪತ್ತೆಯಾಯ್ತು ವ್ಯಕ್ತಿಯ ಮೃತದೇಹ: ಸಾವಿಗೆ ಕಾರಣ ಮಾತ್ರ ನಿಗೂಢ

ಚಿಪ್ಸ್ ಪ್ಯಾಕೆಟ್​​ ಕದಿಯುವಾಗ ಸಿಕ್ಕಿಬಿದ್ದ ಬಾಲಕ: ಥಳಿಸಿ, ಮಾರ್ಕೆಟ್​​ನಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ರು..

ಕುತ್ತಿಗೆ ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕ: ರಕ್ತಪಿಪಾಸುವಿನ ಜೀವ ತೆಗೆದ ಸ್ನೇಹಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
