ನವದೆಹಲಿ:ಕೇರಳದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ 15 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಸ್ವಪ್ನಾ ಸುರೇಶ್​ ಬ್ಯಾಂಕ್​ ಲಾಕರ್​ಗಳಲ್ಲಿ ಭಾರಿ ನಿಧಿಯೇ ಪತ್ತೆಯಾಗಿದೆ. ಸ್ಟೇಟ್​ ಬ್ಯಾಂಕ್​ ಇಂಡಿಯಾ ಹಾಗೂ ಫೆಡರಲ್​ ಬ್ಯಾಂಕ್​ನ ಲಾಕರ್​ಗಳಲ್ಲಿ ಇಡಲಾಗಿದ್ದ ಒಂದು ಕೋಟಿ ರೂ. ನಗದು ಹಾಗೂ ಒಂದು ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ;ದೆಹಲಿ ಮಾಂಸದಡ್ಡೆಯ ಕರಾಳತೆ; 12ರ ಬಾಲೆಗೆ ಡ್ರಗ್ಸ್​ ನೀಡಿ ವೇಶ್ಯಾವಾಟಿಕೆ; 6 ವರ್ಷಗಳ ನರಕದ ಬಳಿಕ ಸಿಕ್ತು ನ್ಯಾಯ
ಫೆಡರಲ್​ ಬ್ಯಾಂಕ್​ ಲಾಕರ್​ನಲ್ಲಿ 36.5 ಲಕ್ಷ ರೂ. ಹಾಗೂ ಎಸ್​ಬಿಐ ಲಾಕರ್​ನಲ್ಲಿ 64 ಲಕ್ಷ ರೂ. ಹಾಗೂ 984 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಸ್ವಪ್ನಾಳನ್ನು ಆರಂಭದಲ್ಲಿ ವಿಚಾರಣೆಗೊಳಪಡಿಸಿದಾಗ ಕಳ್ಳಸಾಗಣೆಯಿಂದ ಬಂದ ಹಣವನ್ನು ಲಾಕ್​ರಗಳಲ್ಲಿ ಇಟ್ಟಿರುವುದಾಗಿ ಹೇಳಿದ್ದಳು.
ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಸಲ್ಲಿಸಿರುವ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಸ್ವಪ್ನಾ ಹಾಗೂ ಪ್ರಕರಣದ ಇನ್ನೊಬ್ಬ ಆರೋಪಿ ಸಂದೀಪ್​ ನಾಯರ್​ನನ್ನು ಆಗಸ್ಟ್​ 21ರವರೆಗೆ ರಾಷ್ಟ್ರಿಯ ತನಿಖಾ ದಳದ ವಶಕ್ಕೆ ನೀಡಲಾಗಿದೆ.
ಇದನ್ನೂ ಓದಿ;ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಹುಡುಗಿಯರಿಗೆ ವಂಚಿಸೋದೇ ಖಯಾಲಿ
ಈ ನಡುವೆ ತನಿಖಾ ದಳದ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸ್ವಪ್ನಾ ಹಾಗೂ ಸಂದೀಪ್​ ನಾಯರ್​ ಜಾಮೀನು ಕೋರಿ ಎನ್​ಐಎ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಆಗಸ್ಟ್​ 5ರಂದು ವಿಚಾರಣೆಗೆ ಬರಲಿದೆ.
ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
