ತಿರುವನಂತಪುರಂ:ದೇವರ ನಾಡು ಕೇರಳ ರಾಜ್ಯದ ಅಧಿಕೃತ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ಕೇರಳ ವಿಧಾನಸಭೆ ನಿನ್ನೆ (ಆಗಸ್ಟ್​ 09) ಅಂಗೀಕರಿಸಿದೆ.
ಈ ನಿರ್ಣಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಕೇರಳದ ವಿಧಾನಭೆಯಲ್ಲಿ ಪ್ರಸ್ತುತಪಡಿಸಿದರು. ಈ ನಿರ್ಣಯವನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಹೆಸರು ಬದಲಿಸಲು ಕೇರಳ ಸರ್ಕಾರ ಕೋರಿದೆ.
ಇದನ್ನೂ ಓದಿ:ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ
ಭಾರತ ಸಂವಿಧಾನದಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಅದಕ್ಕೆ ತಿದ್ದುಪಡಿ ತಂದು ‘ಕೇರಳಂ’ ಮಾಡುವಂತೆ ಸದನವು ಕೇಂದ್ರ ಸರಕಾರವನ್ನು ಕೋರಿದೆ. ಮುಖ್ಯಮಂತ್ರಿ ಮಂಡಿಸಿದ ನಿರ್ಣಯ ಅಂಗೀಕಾರವಾದ ನಂತರ ಸರ್ಕಾರಿ ದಾಖಲೆಗಳಲ್ಲಿ ಕೇರಳಂ ಹೆಸರು ಬಳಕೆಯಾಗುತ್ತದೆ. ಈ ಬದಲಾವಣೆಯು ಸಂವಿಧಾನದಲ್ಲಿ ಪ್ರತಿಫಲಿಸುತ್ತದೆ ಮತ್ತು ಅಧಿಕೃತವಾಗಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿಯೂ ಬರೆಯಲಾಗುತ್ತದೆ.
ರಾಜ್ಯದ ಹೆಸರು ಮಲಯಾಳಂನಲ್ಲಿ ಕೇರಳಂ ಎಂದೇ ಕರೆಯಲಾಗುತ್ತದೆ. 1956ರ ನವೆಂಬರ್ 1ರಂದು ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಯಿತು. ಮಲಯಾಳಂ ಮಾತನಾಡುವ ಎಲ್ಲ ಜನರಿಗೆ ಅಖಂಡ ಕೇರಳ ರಾಜ್ಯ ರಚನೆಯಾಯಿತು. ಆದರೆ ಸಂವಿಧಾನದ ಮೊದಲ ಶೆಡ್ಯೂಲ್​ನಲ್ಲಿ ರಾಜ್ಯದ ಹೆಸರನ್ನು ‘ಕೇರಳ’ ಎಂದು ನಮೂದಿಸಲಾಗಿದೆ. ರಾಜ್ಯದ ಅಧಿಕೃತ ಹೆಸರನ್ನು ಎಲ್ಲ ಅಧಿಕೃತ ಭಾಷೆಗಳಲ್ಲಿ ‘ಕೇರಳಂ’ ಎಂದು ಬದಲಾಯಿಸಲು ಸಂವಿಧಾನದ ಎಂಟನೇ ಶೆಡ್ಯೂಲ್ ಅಡಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ವಿನಂತಿಸುತ್ತದೆ ಎಂದು ನಿರ್ಣಯವನ್ನು ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್​ ಹೇಳಿದರು.(ಏಜೆನ್ಸೀಸ್​)
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ? ಸ್ಪಷ್ಟನೆ ನೀಡಿದ ಅಮಿತ್ ಷಾ

ಕಳಾಹೀನ ಕಮಲ: ಬಿಜೆಪಿ ವರಿಷ್ಠರ ನಿರಾಸಕ್ತಿ, ಸೊರಗಿದ ಮುಖಂಡರು

ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 14 =
Remember me
