ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​​ ಆತ್ಮಹತ್ಯೆ ಪ್ರಕರಣಕ್ಕೆ ಹಲವು ತಿಂಗಳುಗಳು ಕಳೆದಿವೆ. ಇದೀಗ ಸುಶಾಂತ್​ ಸಿಂಗ್​ನಂತೆಯೇ ತನಗೂ ಸಿನಿಮಾ ಇಂಡಸ್ಟ್ರಿಯಿಂದ ಸಾಕಷ್ಟು ನೋವಾಗುತ್ತಿರುವುದಾಗಿ ನಟರೊಬ್ಬರು ಆರೋಪಿಸಿದ್ದಾರೆ. ನನ್ನನ್ನೂ ಸಾವಿಕ ಕೂಪಕ್ಕೆ ತಳ್ಳಲು ನೋಡಲಾಗುತ್ತಿದೆ ಆದರೆ ನಾನು ಗಟ್ಟಿಯಿದ್ದೇನೆ, ಸಮಸ್ಯೆಯನ್ನು ಗೆದ್ದು ನಿಲ್ಲುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಭೋಜ್‌ಪುರಿ ನಟ ಕೇಸರಿ ಲಾಲ್ ಯಾದವ್ ಈ ರೀತಿಯ ಆರೋಪ ಮಾಡಿರುವ ನಟ. ಸಿನಿಮಾ ಕ್ಷೇತ್ರದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆಯಂತೆ. ಅವರನ್ನು ಕರೊನಾ ಪಾಸಿಟಿವ್​ ರೀತಿಯಲ್ಲಿ ನೋಡಲಾಗುತ್ತಿದೆಯಂತೆ. ಸುಶಾಂತ್​ ಸಿಂಗ್​ ಅವರ ಊರಿನವನೇ ಆದ ನನ್ನನ್ನು ಅದೇ ರೀತಿಯಲ್ಲೇ ನಡೆಸಿಕೊಳ್ಳಲಾಗುತ್ತಿದೆ. ಆದರೆ ನಾನು ಮೃದು ಸ್ವಭಾವದವನು ಅಲ್ಲ. ನಾನು ಗಟ್ಟಿ ಹೃದಯದವನು. ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ ಎಂದು ಅವರು ಫೇಸ್​ಬುಕ್​ ಲೈವ್​ ವಿಡಿಯೋದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಕೇಸರಿ ಲಾಲ್​ ನಟಿ ಕಾಜಲ್ ರಾಘವಾನಿ ಮೇಲೆ ಗಂಭೀರ ಆರೋಪ ಮಾಡಿದ್ದರು. ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಹೇಳಿದ್ದರು. ಅದಕ್ಕೆ ಉತ್ತರಿಸಿದ್ದ ಕಾಜಲ್​, ಕೇಸರಿ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುತ್ತಿದ್ದಾನೆ. ನಾನೂ ಸಂದರ್ಶನಗಳನ್ನು ಕೊಡುತ್ತೇನೆ ಆದರೆ ಮೋಸ ಮಾಡಿದ್ದಾರೆ ಎಂದು ಆರೋಪಗಳನ್ನು ಮಾಡುತ್ತಾ ಕೂರುವುದಿಲ್ಲ ಎಂದು ಹೇಳಿದ್ದರು.
ಲೈವ್​​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:
ಕೇಸರಿ ಲಾಲ್ ಯಾದವ್ ಲೈವ್ ವಿಡಿಯೋ
ಇಂದು ಫೇಸ್​ಬುಕ್​ ಲೈವ್​ ಬಂದ ಕೇಸರಿ, ಕಾಜಲ್​ ಹೆಸರು ತೆಗೆಯದೆಯೇ ಅವರನ್ನು ನಿಂದಿಸಿದ್ದಾರೆ. ಜಗಳ ಆಡುವುದನ್ನು ಬಿಟ್ಟು ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
‘3 ಬಾರಿ ಪಾರ್ಶ್ವವಾಯು, ಒಮ್ಮೆ ಹೃದಯಾಘಾತ’ ಡ್ರಗ್ಸ್​ ಓವರ್​ಡೋಸ್​ನಿಂದಾಗಿದ್ದ ಸೈಡ್​ ಎಫೆಕ್ಟ್​ ಬಿಚ್ಚಿಟ್ಟ ನಟಿ

ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seven =
Remember me
