ನವದೆಹಲಿ:ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವಂಥ ಹೇಳಿಕೆಗಳು ಮತ್ತು ಪೋಸ್ಟ್​ಗಳನ್ನು ಹಾಕಿದ್ದ ಹಲವು ಕಂಪನಿಗಳ ವಿರುದ್ಧ ದೆಹಲಿಯ ವಕೀಲ ವಿನೀತ್ ಜಿಂದಾಲ್ ದೂರು ನೀಡಿ ಎಫ್​ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಹುಂಡೈ ಮೋಟರ್ಸ್, ಕೆಐಎ, ಕೆಎಫ್​ಸಿ ಮತ್ತು ಪಿಜ್ಜಾ ಹಟ್​ಗಳ ನೋಂದಣಿಯನ್ನು ರದ್ದುಪಡಿಸುವಂತೆ ಕಾರ್ಪೆರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಕೇಸ್ ದಾಖಲಿಸುವಂತೆ ದೆಹಲಿ ಪೊಲೀಸರನ್ನು ಜಿಂದಾಲ್ ಒತ್ತಾಯಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 121 ಎ, 153, 153ಎ, 504, 505 ಮತ್ತು ಮಾಹಿತಿ ತಂತ್ರಜ್ಞಾನ ಕಾನೂನಿನ ಅನ್ವಯ ಕೇಸ್ ದಾಖಲಿಸಬೇಕೆನ್ನುವುದು ಅರ್ಜಿದಾರರ ಆಗ್ರಹವಾಗಿದೆ.
ಪಾಕಿಸ್ತಾನದಲ್ಲಿ ವ್ಯಾಪಾರದಲ್ಲಿ ಲಾಭ ಗಿಟ್ಟಿಸಲು ಈ ಬಹುರಾಷ್ಟ್ರೀಯ ಕಂಪನಿಗಳು (ಎಂಎನ್​ಸಿ) ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎಸೆಯುವಂಥ ಹೇಳಿಕೆಗಳನ್ನು, ಪೋಸ್ಟ್​ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿವೆ ಎಂಬುದು ದೂರಿನ ಸಾರಾಂಶವಾಗಿದೆ. ಫೆಬ್ರವರಿ 5ರಂದು ಆಚರಿಸಲಾಗುವ ‘ಕಾಶ್ಮೀರ ಒಗ್ಗಟ್ಟು’ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಈ ದಿನಕ್ಕೆ ಪಾಕ್ ಸಾರ್ವತ್ರಿಕ ರಜೆ ಘೋಷಿಸಿ ಬೆಂಬಲ ವ್ಯಕ್ತಪಡಿಸುತ್ತದೆ.
ದಕ್ಷಿಣ ಕೊರಿಯಾ ರಾಯಭಾರಿಗೆ ಬುಲಾವ್:ಹುಂಡೈ ದಕ್ಷಿಣ ಕೊರಿಯಾ ಮೂಲದ ಕಂಪನಿಯಾದ ಕಾರಣ ಆ ರಾಷ್ಟ್ರದ ರಾಯಭಾರಿಯನ್ನು ಸೋಮವಾರ ಕರೆಸಿಕೊಂಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಹುಂಡೈ ಕ್ರಮಕ್ಕೆ ತೀವ್ರ ಪ್ರತಿಭಟನೆ ದಾಖಲಿಸಿತು. ದೇಶದ ಸಾರ್ವಭೌಮತ್ವದ ವಿಷಯದಲ್ಲಿ ರಾಜಿ ಮಾತೇ ಇಲ್ಲ ಎಂದು ಖಡಕ್ ಆಗಿ ಹೇಳಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ್-ಯೀ ಯಾಂಗ್ ಮಾತನಾಡಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಈ ಮಧ್ಯೆ, ಸಿಯೋಲ್​ನಲ್ಲಿರುವ ಭಾರತ ರಾಯಭಾರಿ ಹುಂಡೈನ ಕಂಪನಿಯ ಮುಖ್ಯ ಕಚೇರಿಯನ್ನು ಸಂರ್ಪಸಿ ವಿವಾದದ ಬಗ್ಗೆ ವಿವರಣೆ ಕೇಳಿದ್ದಾರೆ ಎಂದು ತಿಳಿಸಿದ್ದಾರೆ. ಸಂಸತ್​ನಲ್ಲೂ ಈ ವಿಷಯ ಚರ್ಚೆಯಾಗಿದ್ದು, ಹುಂಡೈ ಕ್ಷಮೆ ಕೇಳಲೇಬೇಕು ಮತ್ತು ಇನ್ನೆಂದು ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಅಧಿಕ ಪ್ರಸಂಗತನ ಮಾಡಬಾರದು ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದರು.
ದೇಶದ ಹೊರಗಡೆ ಕೆಎಫ್​ಸಿ ಕೆಲವು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಹೇಳಿಕೆಗಳ ಬಗ್ಗೆ ಕೆಎಫ್​ಸಿ ಇಂಡಿಯಾ ಕಚೇರಿ ಕ್ಷಮೆ ಕೋರಿದೆ. ‘ನಾವು ಭಾರತವನ್ನು ಗೌರವಿಸುತ್ತೇವೆ. ಭಾರತದ ಜನತೆಗೆ ಹೆಮ್ಮೆಯಿಂದ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ’ ಎಂದು ಕಂಪನಿ ಹೇಳಿದೆ. ತನ್ನ ಕಂಪನಿಯ ಪಾಕಿಸ್ತಾನದ ಟ್ವಿಟರ್ ಹ್ಯಾಂಡಲ್ ಮಾಡಿದ್ದ ಎಡವಟ್ಟಿಗೆ ಹುಂಡೈ ಕಂಪನಿ ಮಂಗಳವಾರ ಎರಡನೇ ಬಾರಿಗೆ ಕ್ಷಮೆ ಕೋರಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್​ಗೆ
ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ವಾಹನ ತಯಾರಿಕಾ ಕಂಪನಿ ಭಾರತದ ಕ್ಷಮೆ ಕೇಳಿದೆ. ಎಂಎನ್​ಸಿಗಳ ಪೋಸ್ಟ್ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಇನ್ನಿತರ ಕಂಪನಿಗಳು ಪಿಜ್ಜಾ ಹಟ್, ಡಾಮಿನೋಸ್, ಪಾಕ್ ಹ್ಯಾಂಡಲ್ ಮಾಡುವ ಇಂಥ ಪೋಸ್ಟ್​ಗಳ ಬಹಿಷ್ಕಾರಕ್ಕೆ ಕರೆ ನೀಡಿವೆ.
ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ

ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + five =
Remember me
