ಬೆಂಗಳೂರು:ಕೇಂದ್ರ ಸರ್ಕಾರದ ಆಹಾರ ನಿಗಮವು(FCI) ಜೂನ್​ 12ರಂದು ಪತ್ರ ಬರೆದು ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಆಗಲ್ಲ ಎನ್ನುತ್ತಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್​. ಮುನಿಯಪ್ಪ ಹೇಳಿದ್ದಾರೆ.
ಅಕ್ಕಿ ಖರೀದಿ ಕುರಿತಂತೆ ಈಗಾಗಲೇ ತೆಲಂಗಾಣ, ಛತ್ತೀಸ್​ಗಢ, ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಗುರುವಾರ ಅಧಿಕಾರಿಗಳ ನಿಯೋಗ ಒಂದನ್ನು ಅಕ್ಕಿ ಖರೀದಿ ಸಂಬಂಧ ತೆಲಂಗಾಣಕ್ಕೆ ಕಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾವು ಕೇಂದ್ರ ಸರ್ಕಾರವನ್ನು ಉಚಿತವಾಗಿ ಅಕ್ಕಿ ಕೊಡಲು ಕೇಳಿರಲಿಲ್ಲ. ಅವರು ಕೇಳಿದ್ದಷ್ಟು ಹಣ ಕೊಟ್ಟು ನಾವು ಖರೀದಿಸಲು ಸಿದ್ದರಿದ್ದೇವು. ಅವರ ಬಳಿ 7 ಲಕ್ಷ ಟನ್​ ಆಹಾರ ಧಾನ್ಯ ಸ್ಟಾಕ್​ ಇದ್ದರು ಕೊಡದೆ ರಾಜಕಾರಣ ಮಾಡುತ್ತಿದ್ದಾರೆ. ಬಡವರ ಊಟದಲ್ಲಿ ರಾಜಕೀಯ ಮಾಡೋದನ್ನು ನಾವು ಖಂಡಿಸುತ್ತೇವೆ.
ಕೇಂದ್ರ ಸರ್ಕಾರ ಟೆಂಡರ್ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಆದರೆ, ಯಾವ ಕಾಲದಲ್ಲೂ ಈ ರೀತಿಯ ತೀರ್ಮಾನ ಮಾಡಿರಲಿಲ್ಲ. ದುರುದ್ದೇಶದಿಂದ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಹೆಂಡತಿಯನ್ನು ಮನೆಗೆ ಕಳಿಸದ ಅತ್ತೆ; ಪ್ರಾಣಬಿಟ್ಟ ಅಳಿಯ
ಈ ಹಿಂದೆ ನಾನು ಕೂಡ ಕೇಂದ್ರ ಸಚಿವನಾಗಿದ್ದೆ. ಸಾರ್ವಜನಿಕರ, ಬಡವರ ಕಾರ್ಯಕ್ರಮಗಳ್ಲಲಿ ಯಾವುದೇ ತಾರತಮ್ಯ ಮಾಡಿರಲಿಲ್ಲ. ನಾವು ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಜನರಿಗೆ ಆಶ್ವಾಸನೆ ಕೊಟ್ಟಿದ್ದೇವೆ. ಅದರಂತೆ ಪಕ್ಕದ ರಾಜ್ಯದಿಂದ ಅಕ್ಕಿ ತಂದು ಕೊಟ್ಟು ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಕ್ಕಿ ಖರೀದಿ ಸಂಬಂಧ ಓಪನ್​ ಮಾರ್ಕೆಟ್​ಗೆ ಹೋಗಲ್ಲ. ನೆರೆಯ ರಾಜ್ಯಗಳಿಂದ ಖರೀದಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಇಲಾಖೆಯ ಕಾರ್ಯದರ್ಶಿಗಳು ಕಾರ್ಯೋನ್ಮುಖರಾಗಿದ್ದಾರೆ. ಹೆಚ್ಚು ಹೊರೆ ಆಗದಂತೆ, ಯೋಜನೆಯನ್ನು ಸರಿಯಾದ ಸಮಯಕ್ಕೆ ಅನುಷ್ಠಾನ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್​. ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
