ಶಿಮ್ಲಾ:ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭಾ ಆವರಣದ ಗೇಟ್​ ಮೇಲೆ ಖಲಿಸ್ತಾನ ಧ್ವಜ ಹಾಕಲಾಗಿದೆ ಮತ್ತು ಕಾಂಪೌಂಡ್​ ಮೇಲೆ ಖಲಿಸ್ತಾನ ಪರ ಘೋಷಣೆ, ಚಿತ್ರಗಳನ್ನು ಗೀಚಲಾಗಿದೆೆ. ಇದು ಪಂಜಾಬ್​ನ ಬಂಡುಕೋರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕೃತ್ಯವನ್ನು ತೀಕ್ಷ$$$$್ಣವಾಗಿ ಖಂಡಿಸಿರುವ ಮುಖ್ಯಮಂತ್ರಿ ಜೈರಾಂ ಠಾಕೂರ್​, ಈ ಬಗ್ಗೆ ವಿಸತ ತನಿಖೆಗೆ ಆದೇಶಿಸಿದ್ದಾರೆ.
ರಾಜ್ಯದ ಗಡಿಯಲ್ಲಿನ ಭದ್ರತೆ, ಜನರ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ಇರಿಸಲಾಗಿದೆ. ಪ್ರವಾಸಿಗರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎಂದು ಸಿಎಂ ಠಾಕೂರ್​ ಭರವಸೆ ನೀಡಿದ್ದಾರೆ. ಧರ್ಮಶಾಲಾದಲ್ಲಿರುವ ವಿಧಾನಸಭಾ ಕಟ್ಟಡದಲ್ಲಿ ಚಳಿಗಾಲದ ಅಧಿವೇಶನ ಮಾತ್ರ ನಡೆಯುತ್ತದೆ. ಉಳಿದ ಸಮಯದಲ್ಲಿ ಈ ಕಟ್ಟಡಕ್ಕೆ ಅಗತ್ಯದಷ್ಟು ಮಾತ್ರ ಭದ್ರತೆ ಇರುತ್ತದೆ. ಪ್ರಸ್ತುತ ವಿಧಾನಸಭಾ ಕಟ್ಟಡದ ಒಳಆವರಣದಲ್ಲಿ ಪೊಲೀಸರು ಇದ್ದರು. ಹೊರ ಆವರಣದಲ್ಲಿ ಇರಲಿಲ್ಲ. ಪರಿಸ್ಥಿತಿಯ ದುರ್ಲಾಭ ಪಡೆದು ಈ ಕೃತ್ಯ ಎಸಗಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಠಾಕೂರ್​ ಟ್ವೀಟ್​ ಮಾಡಿದ್ದಾರೆ. ಬಂಡುಕೋರರ ಹಿಂದಿರುವ ರಾಜಕೀಯ ಚಿಂತನೆಯನ್ನು ರಾಜ್ಯದ ಜನತೆ ಗಮನಿಸುತ್ತಿದೆ. ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹಿಮಾಚಲ ಪ್ರದೇಶ ಬಿಜೆಪಿ ಟಕ ಹೇಳಿದೆ. ಹಿಮಾಚಲದವರಾದ ನಾವು ಭಾರತೀಯರು ಇಂಥ ಯಾವುದೇ ಬೆದರಿಕೆಗಳಿಗೆ ಹೆದರುವವರಲ್ಲ ಎಂದು ಸ್ಥಳಿಯ ಶಾಸಕ ವಿಶಾಲ್​ ನೆಹಾರಿಯಾ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್​ ಟಕ ಕೂಡ ಈ ದುಷತ್ಯ ದುರದೃಷ್ಟಕರ ಎಂದಿದೆ. ವಿಧಾನಸಭಾ ಕಟ್ಟಡವನ್ನೇ ರಸಲಾಗದವರು, ದೇಶದ ಭದ್ರತೆಗೆ ಧಕ್ಕೆಯನ್ನುಂಟು ಮಾಡುವವರನ್ನು ಯಾವ ರೀತಿ ತಡೆಯುತ್ತಾರೆ. ಜನರಿಗೆ ಸುರಕ್ಷತೆಯನ್ನು ಹೇಗೆ ನೀಡುತ್ತಾರೆ ಎಂದು ಆಮ್​ ಆದ್ಮಿ ಪಕ್ಷ ಪ್ರಶ್ನಿಸಿದೆ.
ಎಸ್​ಐಟಿ ರಚನೆಈ ಪ್ರಚೋದನಾಕಾರಿ ಕೃತ್ಯವು ಶನಿವಾರ ರಾತ್ರಿ ಅಥವಾ ಭಾನುವಾರ ನಸುಕಿನಲ್ಲಿ ನಡೆದಿರುವ ಸಾಧ್ಯತೆ ಇದೆ. ವಿಧಾನಸಭಾ ಗೇಟ್​ ಮೇಲಿದ್ದ ಖಲಿಸ್ತಾನದ ಬಾವುಟಗಳನ್ನು ತೆಗೆಯಲಾಗಿದೆ ಮತ್ತು ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಬಂಧಿಸಲು ಆರು ಸದಸ್ಯರ ವಿಶೇಷ ತಂಡ (ಎಸ್​ಐಟಿ) ರಚಿಸಲಾಗಿದೆ ಡಿಜಿಪಿ ಸಂಜಯ್​ ಖಂಡು ತಿಳಿಸಿದ್ದಾರೆ. ಏಪ್ರಿಲ್​ 26ರಂದೇ ಈ ರೀತಿಯ ಅಸಹಜ ಟನೆಗಳು ನಡೆಯಬಹುದೆಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದ್ದವು. ಸಿಖ್​ ಾರ್​ ಜಸ್ಟೀಸ್​ (ಎಸ್​ಎ್​ಜೆ) ಸಂಟನೆಯ ಮುಖ್ಯಸ್ಥ ಗುರುಪತ್ವಂತ್​ ಸಿಂಗ್​ ಪನ್ನು, ಶಿಮ್ಲಾದಲ್ಲಿ ಖಲಿಸ್ತಾನ್​ ಬಾವುಟ ಮತ್ತು ಭಿಂದ್ರನ್​ವಾಲೆ ಭಾವಚಿತ್ರವಿರುವ ಧ್ವಜಗಳನ್ನು ಮಾರ್ಚ್​ 29 ಹಾರಿಸಲಾಗುವುದು ಎಂದು ಸಿಎಂ ಠಾಕೂರ್​ಗೆ ಪತ್ರ ಬರೆದಿದ್ದ ಕಾರಣ ಆಗ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಆದರೆ, ಆಗ ಅಂಥ ಯಾವುದೇ ಟನೆ ನಡೆದಿರಲಿಲ್ಲ.
ಉಗ್ರರಿಂದ ಮುಂಬೈ ರೈಲು ಸ್ಫೋಟಕ್ಕೆ ಸಂಚುಹರಿಯಾಣದ ಕರ್ನಲ್​ನಲ್ಲಿ ಬಂಧಿತರಾದ ನಾಲ್ವರು ಶಂಕಿತ ಉಗ್ರರು ಮುಂಬೈನಲ್ಲಿ ಲೋಕಲ್​ ರೈಲನ್ನು ಗುರಿಯಾಗಿಟ್ಟುಕೊಂಡು ಸರಣಿ ಸ್ಫೋಟ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ತೆಲಂಗಾಣದ ಅದಿಲಾಬಾದ್​ಗೆ ಸ್ಫೋಟಕ ಸಾಮಗ್ರಿಗಳನ್ನು ವಾಹನದಲ್ಲಿ ಒಯ್ಯುತ್ತಿದ್ದ ಲುಧಿಯಾನದ ಭೂಪಿಂದರ್​ ಸಿಂಗ್​, ಫಿರೋಜ್​ಪುರದ ಗುರುಪ್ರೀತ್​ ಸಿಂಗ್​, ಪರಮಬೀರ್​ ಸಿಂಗ್​ ಮತ್ತು ಅಮನ್​ದೀಪ್​ ಸಿಂಗ್​ಗೆ ಪಾಕ್​ ನಂಟು ಇರುವ ಶಂಕೆ ಇದೆ. ಪಾಕ್​ ಮೂಲದ ಹರ್ವೀಂದರ್​ಸಿಂಗ್​ ರಿಂಡಾ ಎಂಬ ಭಯೋತ್ಪಾದಕನ ಆಣತಿಯಂತೆ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಆತ ಭಯೋತ್ಪಾದನಾ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಬೇಕಾದ ಸ್ಥಳವನ್ನು ಆ್ಯಪ್​ ಮೂಲಕ ಇವರಿಗೆ ಸೂಚಿಸುತ್ತಿದ್ದ ಎಂದು ಕರ್ನಲ್​ನ ಪೊಲೀಸ್​ ವರಿಷ್ಠಾಧಿಕಾರಿ ಗಂಗಾರಾಮ್​ ಪುನಿಯಾ ತಿಳಿಸಿದ್ದಾರೆ. ಬೇಹುಗಾರಿಕಾ ಮಾಹಿತಿ ಆಧರಿಸಿ ಪಂಜಾಬ್​ ಮತ್ತು ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಈ ನಾಲ್ವರನ್ನು ಬಸ್ತರಾ ಟೋಲ್​ ಪ್ಲಾಜಾ ಬಳಿ ಬಂಧಿಸಿದ್ದರು. ತಲಾ ಎರಡೂವರೆ ಕೆ.ಜಿ. ತೂಕವಿದ್ದ 3 ಸುಧಾರಿತ ಸ್ಫೋಟಕ ಸಾಧನ (ಐಇಡಿ) ಹಾಗೂ ಪಿಸ್ತೂಲ್​, 31 ಸುತ್ತಿನ ಸಜೀವ ಗುಂಡುಗಳು ಮತ್ತು 1.30 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
