ನವದೆಹಲಿ:ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್ ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಪಿತೂರಿ ನಡೆಸುತ್ತಿರುವುದನ್ನು ಬೇಹುಗಾರಿಕೆ ಸಂಸ್ಥೆಗಳು ಪತ್ತೆ ಹಚ್ಚಿವೆ.
ಪಂಜಾಬ್​ನ ಗ್ಯಾಂಗ್​ಸ್ಟರ್ ಜಾಲ, ಉಗ್ರಗಾಮಿ ಗುಂಪುಗಳು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಸಕ್ರಿಯಗೊಳಿಸುವುದು ಐಎಸ್​ಐ ಕಾರ್ಯತಂತ್ರದಲ್ಲಿ ಸೇರಿವೆ. ಅಮರನಾಥ ಯಾತ್ರೆಯ ವೇಳೆ ಅನಾಹುತಕಾರಿ ದಾಳಿಯನ್ನು ಸಂಘಟಿಸುವುದು ಐಎಸ್​ಐ ಉದ್ದೇಶವಾಗಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಬಿಜೆಪಿ ಹಾಗೂ ಹಿಂದು ಮುಖಂಡರನ್ನು ಟಾರ್ಗೆಟ್ ಮಾಡಲು ಬಬ್ಬರ್ ಖಾಲ್ಸಾವನ್ನು ಐಎಸ್​ಐ ಬಳಸಿಕೊಳ್ಳುವ ಸಾಧ್ಯತೆಯಿದೆಯೆಂಬ ಕಳವಳಕಾರಿ ಅಂಶವೂ ಬಹಿರಂಗವಾಗಿದೆ.
ಶಸ್ತ್ರಸಜ್ಜಿತ ಗುಂಪು: ಜೂನ್​ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತವಾದ ಗುಂಪೊಂದು ಪಠಾಣ್​ಕೋಟ್ ಬಳಿಯ ಗ್ರಾಮವೊಂದರಲ್ಲಿ ಬೀಡುಬಿಟ್ಟಿತ್ತೆಂದು ಬೇಹುಗಾರಿಕೆ ಸಂಸ್ಥೆಗಳು ಎಚ್ಚರಿಸಿದ್ದವು. ತಕ್ಷಣವೇ ಪಠಾಣ್​ಕೋಟ್​ನಲ್ಲಿ ಕಾರ್ಯಾಚರಣೆ ನಡೆಸಿದಾಗ ಏಳು ಶಂಕಿತ ವ್ಯಕ್ತಿಗಳು ಇರುವುದು ಕಂಡು ಬಂದಿತ್ತು. ಅದೇ ಹೊತ್ತಿಗೆ, ಪಂಜಾಬ್​ನ ಹಿಂದು ಧಾರ್ವಿುಕ ಪ್ರವಚನಕಾರನೊಬ್ಬನಿಗೆ ಖಲಿಸ್ತಾನಿ ಬೆಂಬಲಿತ ಗುಂಪೊಂದು ಪತ್ರ ಬರೆದ ಕಳವಳಕಾರಿ ವಿದ್ಯಮಾನವೂ ನಡೆದಿತ್ತು. ಈ ಸಂಬಂಧ ಪಂಜಾಬ್ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ಅದರ ಹಿಂದಿರುವ ಶಕ್ತಿಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.
4 ಲಕ್ಷ ಭಕ್ತರು:ಈ ವರ್ಷದ ಅಮರನಾಥ ಯಾತ್ರೆಯಲ್ಲಿ, ಕಳೆದ 28 ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ:ಜಮ್ಮು -ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಶನಿವಾರ ಭಯೋತ್ಪಾದಕ ರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ಕಾಳಗದಲ್ಲಿ ಒಬ್ಬ ‘ಪಾಕಿಸ್ತಾನಿ ವ್ಯಕ್ತಿ’ ಕೂಡ ಹತನಾಗಿದ್ದಾನೆ ಎಂದು ಸೇನೆ ತಿಳಿಸಿದೆ. ಕಾರ್ಗಿಲ್ ವಿಜಯ ದಿವಸದಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ ಮರು ದಿನವೇ ಈ ಘಟನೆ ನಡೆದಿದೆ.
ಬಿಎಟಿ ದಾಳಿ?:ಇದು ಪಾಕಿಸ್ತಾನದ ಗಡಿ ಕಾರ್ಯ ತಂಡ (ಬಿಎಟಿ) ನಡೆಸಿರುವ ದಾಳಿಯಾಗಿರಬಹುದೆಂದು ಮೂಲಗಳು ಹೇಳಿವೆ. ಭಾರತ ಮತ್ತು ಪಾಕಿಸ್ತಾನದ ನಡುವೆ 2021ರ ಫೆಬ್ರವರಿಯಲ್ಲಿ ಸಹಿ ಹಾಕಲಾದ ಕದನ ವಿರಾಮಕ್ಕೂ ಮುನ್ನ ನಡೆದ ಹಲವು ಆಕ್ರಮಣಗಳಲ್ಲಿ ಬಿಎಟಿ ಒಳಗೊಂಡಿತ್ತು.
ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
