ನವದೆಹಲಿ:ದೆಹಲಿಗೆ ಹೋಗಿ ಜಿ-20 ಶೃಂಗಸಭೆ ಅಡ್ಡಿಪಡಿಸುವಂತೆ ಕಾಶ್ಮೀರದ ಮುಸ್ಲಿಮರಿಗೆ ಖಲಿಸ್ತಾನಿ ಪ್ರತ್ಯೇಕವಾದಿ ಮತ್ತು ಸಿಖ್​ ಫಾರ್​ ಜಸ್ಟೀಸ್​ (ಎಸ್​ಎಫ್​ಜೆ) ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್​ ಆಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾನೆ. ದೆಹಲಿಯಲ್ಲಿ ಸೆ. 9 ಮತ್ತು 10ರಂದು ಎರಡು ದಿನಗಳ ಕಾಲ ಶೃಂಗಸಭೆ ನಡೆಯಲಿದೆ.
ಶುಕ್ರವಾರದ ನಮಾಜಿನ ಬಳಿಕ ಶೃಂಗಸಭೆ ನಡೆಯಲಿರುವ ಪ್ರಗತಿ ಮೈದಾನ ಕಡೆ ಮೆರವಣಿಗೆ ಹೋಗುವಂತೆಯೂ ಪನ್ನುನ್ ಕರೆ ನೀಡಿದ್ದಾರೆ. ಅಲ್ಲದೆ, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಬಾವುಟ ಹಾರಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ದೆಹಲಿಯಾದ್ಯಂತ ಹಲವಾರು ಮೆಟ್ರೋ ನಿಲ್ದಾಣಗಳನ್ನು ಖಲಿಸ್ತಾನ್ ಪರ ಗೀಚುಬರಹಗಳಿಂದ ವಿರೂಪಗೊಳಿಸಿದ ಕೆಲವೇ ದಿನಗಳಲ್ಲಿ ಈ ಆಡಿಯೋ ಸಂದೇಶ ಬಂದಿದೆ. ಭಾರತ ವಿರೋಧಿ ಘೋಷಣೆಗಳನ್ನು ಬರೆದಿರುವ ಹಿನ್ನೆಲೆಯಲ್ಲಿ ಎಸ್‌ಎಫ್‌ಜೆಗೆ ಸಂಬಂಧಿಸಿದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್​, ಆದೇಶದ ಮೇರೆಗೆ ಈ ಘೋಷಣೆಗಳನ್ನು ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸೋಫಾ ಸೆಟ್‌ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್‌ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ
ಪಶ್ಚಿಮ ದೆಹಲಿಯಲ್ಲಿ ಇರುವ ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ್, ಉದ್ಯೋಗ್ ನಗರ, ಮಹಾರಾಜ ಸೂರಜ್ಮಲ್ ಸ್ಟೇಡಿಯಂ ಮತ್ತು ನಂಗ್ಲೋಯ್ ಸೇರಿದಂತೆ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ‘ದೆಹಲಿ ಬನೇಗಾ ಖಲಿಸ್ತಾನ್’ ಮತ್ತು ‘ಖಾಲಿಸ್ತಾನ್ ರೆಫರೆಂಡಮ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕಪ್ಪು ಬಣ್ಣದಲ್ಲಿ ಗೀಚಿರುವುದು ಕಂಡುಬಂದಿದೆ. ಪ್ರಸ್ತುತ ಪನ್ನುನ್​ನ ಆಡಿಯೋ ಸಂದೇಶವು ISI ಮತ್ತು ಅದರ K2 (ಕಾಶ್ಮೀರ-ಖಾಲಿಸ್ತಾನ್) ಕಾರ್ಯಸೂಚಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್​ ಪಿಂಗ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಹೊರತುಪಡಿಸಿ ಜಿ-20 ವೇದಿಕೆಯ ನಾಯಕರು ಶೀಘ್ರದಲ್ಲೇ ದೆಹಲಿಗೆ ಆಗಮಿಸಲಿದ್ದು ಎರಡು ದಿನಗಳ ಕಾಲ ನಡೆಯಲಿರುವ ಜಿ20 ಸಮ್ಮೇಳದಲ್ಲಿ ಭಾಗವಹಿಸಲಿದ್ದಾರೆ. ಇದು ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿದೆ. ಏಕೆಂದರೆ, ಇದೇ ಮೊದಲ ಬಾರಿಗೆ ಜಿ-20 ಶೃಂಗಸಭೆ ಭಾರತದಲ್ಲಿ ಆಯೋಜನೆಗೊಂಡಿದೆ.
ಜಿ-20 ಶೃಂಗ ಸಭೆ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ. ಯಾವುದೇ ಒಳನುಸುಳುವಿಕೆ, ಭಯೋತ್ಪಾದಕ ಕೃತ್ಯ ಅಥವಾ ವಿಧ್ವಂಸಕ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ಸುಮಾರು 1,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸಭೆ ನಡೆಯುವ ಸ್ಥಳಗಳಲ್ಲಿ ಫೂಲ್‌ಫ್ರೂಫ್ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಕೃತಕ ಬುದ್ಧಿಮತ್ತೆ (AI) ಮಾಡ್ಯೂಲ್‌ಗಳನ್ನು ಸಹ ಬಳಸಲಿದ್ದಾರೆ.(ಏಜೆನ್ಸೀಸ್​)
ಡಿಯರ್​ ಹೇಟರ್ಸ್​… ಕೆಟ್ಟದಾಗಿ ಕಾಮೆಂಟ್​ ಮಾಡುವವರಿಗೆ ಹಾಟ್​ ವಿಡಿಯೋ ಮೂಲಕವೇ ಸೋನು ತಿರುಗೇಟು!

ಏಷ್ಯಾಕಪ್​ನಲ್ಲಿ ಇಂದು ಭಾರತಕ್ಕೆ ನೇಪಾಳ, ಮಳೆ ಎದುರಾಳಿ! ಪಂದ್ಯ ರದ್ದಾದರೂ, ರೋಹಿತ್​ ಪಡೆ ಸೇಫ್​!

ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್​ಡೌನ್​ ಧ್ವನಿ ನೀಡಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 16 =
Remember me
