ನವದೆಹಲಿ:ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಅವರ ಸಹಾಯಕನಾದ ಖಲಿಸ್ತಾನಿ ಭಯೋತ್ಪಾದಕ ಸುಖ್‌ದೂಲ್‌ ಸಿಂಗ್‌ಕೆನಡಾದಲ್ಲಿ ಗ್ಯಾಂಗ್ ನಡುವಿನ ಪೈಪೋಟಿಯಲ್ಲಿ ಸಾವನ್ನಪ್ಪಿದ್ದಾನೆಂದು ಮೂಲಗಳು ತಿಳಿಸಿವೆ.
ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಬ್ಬ ಭಾರತ ವಿರೋಧಿ ಖಲಿಸ್ತಾನಿ ಉಗ್ರನನ್ನು ಹತ್ಯೆಯಾಗಿದೆ. ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಸುಖ್‌ದೂಲ್‌ ಸಿಂಗ್‌ನನ್ನು (ಸುಖಾ ದುನೆಕೆ ಎಂದೇ ಖ್ಯಾತಿ) ಬುಧವಾರ (ಸೆಪ್ಟೆಂಬರ್‌ 20) ರಾತ್ರಿ ಹತ್ಯೆ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸುಖಾ ದುನೆಕೆಯನ್ನು ಮೋಗಾ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ.
Sukhdool Singh @ Sukha Duneke, a gangster who escaped to Canada from Punjab, India in 2017 on forged documents, was shot dead today in Winnipeg, Canada by unknown assailants.
The Punjab Police Anti-Gangster Task Force (AGTF) believes he supported the DB gang and joined…pic.twitter.com/TFxOsVzsno
— Megh Updates 🚨™ (@MeghUpdates)September 21, 2023

2017ರಲ್ಲಿ, ಸುಖದೂಲ್ ಸಿಂಗ್ ಅಲಿಯಾಸ್ ಸುಖ ದುನುಕೆ ತನ್ನ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರೂ ಕೆನಡಾಕ್ಕೆ ಪಲಾಯನ ಮಾಡಲು ನಕಲಿ ದಾಖಲೆಗಳ ಮೇಲೆ ಪಾಸ್‌ಪೋರ್ಟ್ ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆದಿದ್ದನು. ದವಿಂದರ್‌ ಬಾಂಬಿಹಾ ಎಂಬ ಗ್ಯಾಂಗ್‌ ಜತೆ ಗುರುತಿಸಿಕೊಂಡಿರುವ ಈತ ಖಲಿಸ್ತಾನಿಗಳ ಉಗ್ರರ ಒಡನಾಟವನ್ನೂ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ದವಿಂದರ್‌ ಬಾಂಬಿಹಾ ಗ್ಯಾಂಗ್‌ನ ವಿರೋಧಿ ಬಣದ ಜತೆ ಆಗಾಗ ಕಾಳಗಗಳು ನಡೆಯುತ್ತಿವೆ. ಇಂತಹ ಸಂಘರ್ಷದಲ್ಲಿ ಸುಖಾ ದುನೆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಜೂನ್‌ 19ರಂದು ಆಂತರಿಕ ಗ್ಯಾಂಗ್‌ವಾರ್‌ನಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಸರ‍್ರೆಯಲ್ಲಿ ಹತ್ಯೆ ಮಾಡಲಾಗಿತ್ತು. ಇಬ್ಬರ ಹತ್ಯೆಯ ಮಾದರಿಯೂ ಒಂದೇ ಆಗಿದೆ ಎಂದು ಮೂಲಗಳು ತಿಳಿಸಿವೆ. ನಿಜ್ಜರ್‌ಗೆ 15 ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಸುಖಾ ದುನೆಕೆಯು ಹಲವು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ತಿಳಿದುಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
