ನವದೆಹಲಿ:ಭಾರತ ಮತ್ತು ಪಾಕಿಸ್ತಾನದಲ್ಲಿ ಉಭಯ ರಾಷ್ಟ್ರಗಳ ಜನತೆಯ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯಗಳಿಲ್ಲ ಎಂಬುದು ಸರ್ವವಿಧಿತ. ಆದರೆ, ಎಂದೂ ಕೂಡ ಪರಸ್ಪರ ಕೊಂದುಕೊಳ್ಳುವ, ಧಾರ್ಮಿಕ ನಂಬಿಕೆಗಳನ್ನು ಹುಸಿಗೊಳಿಸುವ ಬಗ್ಗೆ ಮಾತನಾಡುವುದಿಲ್ಲ. ಆದರೆ, ತನ್ನ ತಂದೆಯ ಒತ್ತಾಯಕ್ಕೆ 4 ವರ್ಷದ ಪಾಕಿಸ್ತಾನ ಪೋರ ಹೇಳಿರುವ ಆಘಾತಕಾರಿ ಮಾತಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.
ಈ ವಿಡಿಯೋ ತುಣುಕಿನಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರಿಗೆ ಒಂದು ಸಂದೇಶ ರವಾನಿಸಿರುವ ಆ ವ್ಯಕ್ತಿ ತನ್ನ 4 ವರ್ಷದ ಮಗನ ಬಾಯಲ್ಲಿ, ಖಾನ್​ ಸಾಹೇಬ್​, ಇಸ್ಲಾಮಾಬಾದ್​ನಲ್ಲಿ ದೇಗುಲ ನಿರ್ಮಿಸಿದರೆ, ದೇಶದಲ್ಲಿರುವ ಹಿಂದುಗಳನ್ನೆಲ್ಲರನ್ನೂ ಹುಡುಕಿ, ಹುಡುಕಿ ಕೊಲ್ಲುವೆ. ಅರ್ಥ ಆಯಿತಾ? ಅಲ್ಲಾ ಹಫೀಜ್​ ಎಂದು ಮಗನ ತೊದಲು ನುಡಿಗಳಲ್ಲಿ ಹೇಳಿಸಿದ್ದಾನೆ.
ಇದನ್ನೂ ಓದಿ:ಗಲ್ವಾನ್​ ಕಣಿವೆಯಲ್ಲಿ ಪಿಪಿ 14ರವರೆಗೆ ಗಸ್ತು, ಭಾರತೀಯ ಯೋಧರ ಘೋಷಣೆ
ಬಾಲಕನ ಪಕ್ಕದಲ್ಲೇ ನಿಂತಿರುವ ಆತನ ಅಪ್ಪ ಈ ರೀತಿ ಹೇಳುವಂತೆ ಒತ್ತಾಯಿಸುವ ಮೂಲಕ ಎಳವೆಯಿಂದಲೇ ಭಾರತ ವಿರೋಧಿ ಮನೋಭಾವವನ್ನು ಪುತ್ರನಲ್ಲಿ ಬಿತ್ತಲು ಯತ್ನಿಸಿದ್ದಾನೆ.
This is the net result of decades of state-sponsored indoctrination against Hindus and other minorities in Pakistan.pic.twitter.com/KUxyHnYhEH
— Naila Inayat (@nailainayat)July 7, 2020

ಇಸ್ಲಾಮಾಬಾದ್​ನಲ್ಲಿ ದೇಗುಲಕ್ಕೆ ಮೀಸಲಿಟ್ಟಿರುವ ಸ್ಥಳದಲ್ಲಿ ಅಲ್ಪಸಂಖ್ಯಾತ ಹಿಂದುಗಳು ದೇವಸ್ಥಾನ ನಿರ್ಮಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಸೈಟ್​ನ ಸುತ್ತ ತಡೆಗೋಡೆ ನಿರ್ಮಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತಡೆಯೊಡಿದ್ದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ, ಕಾನೂನಾತ್ಮಕ ಸಮಸ್ಯೆಗಳಿರುವುದರಿಂದ ಅಲ್ಲಿ ದೇಗುಲ ನಿರ್ಮಾಣವನ್ನು ತಡೆಹಿಡಿದಿರುವುದಾಗಿ ಹೇಳಿತ್ತು.
ಇದನ್ನು ಪ್ರಶ್ನಿಸಿ ಅಲ್ಪಸಂಖ್ಯಾತ ಹಿಂದುಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ವಿಷಯವಾಗಿ ಆ ಸ್ಥಳದಲ್ಲಿ ದೇಗುಲ ನಿರ್ಮಿಸಲು ಅವಕಾಶ ಮಾಡಿಕೊಡುವುದನ್ನು ಪ್ರಶ್ನಿಸಿ ಕೆಲವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡುವ ಬಗ್ಗೆ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಸರ್ಕಾರಿ ಸಿಬ್ಬಂದಿ ನೇಮಕಾತಿಗೆ ಸಂಪೂರ್ಣ ತಡೆ; ಆರ್ಥಿಕ ಮಿತವ್ಯಯ ಮಂತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
