ಹರಿಯಾಣ:ಟ್ವೀಟ್​ ಮಾಡುವ ಮೂಲಕವೇ ಆಗಾಗ ವಿವಾದಕ್ಕೆ ಒಳಗಾಗುವ ಜತೆಗೆ ಒಂದಾದ ಮೇಲೊಂದರಂತೆ ದಾಖಲಾದ ಕೇಸ್​ಗಳಿಂದ ಸಂಕಷ್ಟಕ್ಕೀಡಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್​ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಟ್ವೀಟ್​ ಒಂದರ ಹಿನ್ನೆಲೆಯಲ್ಲಿ ಅವರಿಗೆ ಲೀಗಲ್ ನೋಟಿಸೊಂದು ಜಾರಿಯಾಗುವ ಜತೆಗೆ ಅವರ ಸಿನಿಮಾಗಳಿಗೆ ಬಹಿಷ್ಕಾರವೂ ಎದುರಾಗಿದೆ. ಹರಿಯಾಣದ ಖಾಪ್​ ಪಂಚಾಯತ್ ಹರಿಯಾಣಗೆ ಪ್ರವೇಶಿಸಲು ಕಂಗನಾಗೆ ಬಿಡುವುದಿಲ್ಲ ಎಂದಿರುವ ಜತೆಗೆ, ತಾಕತ್ತಿದ್ದರೆ ಕಂಗನಾ ಹರಿಯಾಣಗೆ ಬರಲಿ ಎಂಬುದಾಗಿಯೂ ಸವಾಲೆಸೆದಿದೆ. ಅಲ್ಲದೆ, ಹರಿಯಾಣದಲ್ಲಿ ಅವರ ಎಲ್ಲ ಸಿನಿಮಾಗಳನ್ನೂ ಬಹಿಷ್ಕರಿಸುವುದಾಗಿ ಹೇಳಿದೆ.
ಕೇಂದ್ರ ಸರ್ಕಾರದ ಮೂರು ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕಂಗನಾ ರಣಾವತ್ ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವ ಕುರಿತು ದೆಹಲಿ ಸಿಖ್​ ಗುರುದ್ವಾರ ಮ್ಯಾನೇಜ್​ಮೆಂಟ್ ಕಮಿಟಿಯು ಕಂಗನಾಗೆ ಲೀಗಲ್ ನೋಟಿಸ್ ಕಳುಹಿಸಿದೆ. ಮಾತ್ರವಲ್ಲ ಅವಹೇಳನಕಾರಿ ಟ್ವೀಟ್​ ಸಂಬಂಧ ಬೇಷರತ್ ಕ್ಷಮೆ ಯಾಚಿಸುವಂತೆಯೂ ಆಗ್ರಹಿಸಿದೆ. (ಏಜೆನ್ಸೀಸ್​)
ಬಿಡಿಎ ಕಚೇರಿಯೇ ನಕಲಿ!; ಸಿಕ್ಕಿಬಿದ್ರು ನಕಲಿ ದಾಖಲೆ ತಯಾರಿಸುತ್ತಿದ್ದ ಖದೀಮರು, ತಪ್ಪಿತು 300 ಕೋಟಿ ರೂ. ಭೂಹಗರಣ

ಕಳ್ಳನೇ ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​!; ಕಳ್ಳತನದಲ್ಲಿ 12 ವರ್ಷಗಳ ಅನುಭವ, ಈಗ ಕೊಡುತ್ತಿದ್ದಾನೆ ಮನೆಗಳವು ತಡೆಯುವಂಥ ಐಡಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
