ಬೆಂಗಳೂರು/ ನವದೆಹಲಿ:ಕರ್ನಾಟಕದ ಜಾತಿ ಗಣತಿ ವರದಿ ಕುರಿತಂತೆ ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರ ನಡುವಿನ ಅಪಸ್ವರವು ಮತ್ತೊಮ್ಮೆ ಜಗಜ್ಜಾಹೀರು ಆಗಿದ್ದು, ಸಂಸತ್ತಿನಲ್ಲಿಯೂ ಈ ಭಿನ್ನಮತ ಪ್ರತಿಧ್ವನಿಸಿದೆ. ಜಾತಿ ಗಣತಿ ವರದಿ ಬಿಡುಗಡೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಲುವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯಸಭೆಯಲ್ಲಿ ಟೀಕಿಸಿರುವುದು ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ.
ಕರ್ನಾಟಕದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಿನ್ನ ನಿಲುವು ಹೊಂದಿದ್ದಾರೆ ಎಂಬ ಸಂಗತಿ ಈಗಾಗಲೇ ಜಗಜ್ಜಾಹೀರಾಗಿದ್ದು, ಈ ಕುರಿತು ವ್ಯಾಪಕ ಚರ್ಚೆಯೂ ನಡೆಯುತ್ತಿದೆ. ಆದರೆ, ಮಂಗಳವಾರ ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಖಿಲ ಭಾರತ ಕಾಂಗ್ರೆಸ್​ ಸಮಿತಿ (ಎಐಸಿಸಿ) ಅಧ್ಯಕ್ಷರೂ ಆಗಿರುವ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ.ಶಿವಕುಮಾರ್​ ಅವರನ್ನು ಬಹಿರಂಗವಾಗಿಯೇ ಈ ವಿಚಾರದಲ್ಲಿ ಟೀಕಿಸಿರುವುದು. ಅದು ಕೂಡ ರಾಜ್ಯಸಭೆಯಲ್ಲಿಯೇ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಹರಿಹಾಯ್ದಿರುವುದು ರಾಜ್ಯ ಕಾಂಗ್ರೆಸ್​ನಲ್ಲಿ ಭಿನ್ನಮತವನ್ನು ದೇಶಾದ್ಯಂತ ಬಹಿರಂಗಗೊಳಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಹಿರಿಯ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರು, “ಇತರ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ ಪಕ್ಷ ತೋರಿಸುವ ಪ್ರೀತಿ ಒಂದು ನಾಟಕವಾಗಿದೆ” ಎಂದು ಆಪಾದಿದ್ದಲ್ಲದೆ, ಜಾತಿ ಗಣತಿ ಕುರಿತು ಡಿ.ಕೆ.ಶಿವಕುಮಾರ್‌ ಅವರ ನಿಲುವಿನ ಉದಾಹರಣೆ ನೀಡಿದ್ದಾರೆ.
“ನಿಮ್ಮ (ಕರ್ನಾಟಕ) ಸರ್ಕಾರವು ಜಾತಿ ಗಣತಿ ವರದಿಯನ್ನು ಯಾವಾಗ ಬಹಿರಂಗಪಡಿಸಲಿದೆ ಎಂದು ಖರ್ಗೆ ನಮಗೆ ಹೇಳಬೇಕು. ವರದಿಯನ್ನು ಬಹಿರಂಗಗೊಳಿಸುವುದನ್ನು ವಿರೋಧಿಸಿದ ಮನವಿಗೆ ಉಪಮುಖ್ಯಮಂತ್ರಿ (ಡಿ.ಕೆ.ಶಿವಕುಮಾರ್) ಸಹಿ ಹಾಕಿದ್ದಾರೆ,” ಎಂದು ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ. ಆಗ ಕರ್ನಾಟಕದವರೇ ಆದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಇದಕ್ಕೆ ದನಿಗೂಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಹಿತ ಹಲವು ಕಾಂಗ್ರೆಸ್‌ ಶಾಸಕರು ಮತ್ತು ವೀರಶೈವ ಮಹಾಸಭಾ ನಾಯಕರು ಕೂಡ ಈ ವರದಿಯನ್ನು ವಿರೋಧಿಸುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಶಿವಕುಮಾರ್‌ ಮತ್ತು ಬಿಜೆಪಿ ಸಹ ಜಾತಿ ಗಣತಿ ವರದಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಿದ್ದಾರೆ. “ಅವರೂ ವಿರೋಧಿಸುತ್ತಿದ್ದಾರೆ, ನೀವೂ ಸಹ ವಿರೋಧಿಸುತ್ತಿದ್ದೀರಿ, ಈ ವಿಚಾರದಲ್ಲಿ ನೀವಿಬ್ಬರೂ ಒಂದೇ. ಇದು ಜಾತಿಯ ಸ್ವರೂಪ. ಮೇಲ್ಜಾತಿ ಜನರು ಆಂತರಿಕವಾಗಿ ಒಂದಾಗುತ್ತಾರೆ” ಎಂದೂ ಖರ್ಗೆ ಹೇಳಿದ್ದಾರೆ.
ಜಾತಿ ಗಣತಿ ಕುರಿತು ಸ್ಪಷ್ಟನೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು, “ನಾನು ಜಾತಿ ಗಣತಿ ವಿರೋಧಿಸಿಲ್ಲ, ಬದಲಾಗಿ ವೈಜ್ಞಾನಿಕವಾಗಿರಬೇಕು ಎಂಬುದಷ್ಟೇ ನನ್ನ ವಾದ” ಎಂದಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಾತಿ ಗಣತಿ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ಕಾಂಗ್ರೆಸ್​ ನಿಲುವಾಗಿದೆ. ಆ ನಿಲುವಿಗೆ ನಾನು ಬದ್ಧನಾಗಿದ್ದೇ ನೆ. ಆದರೆ, ಜಾತಿ ಗಣತಿ ಸಮೀಕ್ಷೆಯು ವೈಜ್ಞಾನಿಕವಾಗಿ ಆಗಬೇಕು’ ಎಂದು ಹೇಳಿದರು.
‘ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ, ಜಾತಿ ಗಣತಿ ಸಮೀ ಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ’ ಎಂದು ಹೇಳಿದರು.
ಈಚೆಗೆ ಸುದ್ದಿಗಾರರ ಜತೆ ಮಾತನಾಡಿದ್ದ ಡಿಕೆಶಿ, ‘ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹಿಸಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋ ರಾಟ ಮಾಡುತ್ತಿದ್ದಾರೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ತಮ್ಮನ್ನು ಸಂ ಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿದ್ದಾರೆ’ ಎಂದಿದ್ದರು.
‘ಜಾತಿ ಗಣತಿ ಸ್ವೀಕರಿಸದಂತೆ ಮುಖ್ಯಮಂತ್ರಿಗೆ ಒಕ್ಕಲಿಗರ ಸಂಘ ಸಲ್ಲಿಸಿದ ಮನವಿ ಪತ್ರಕ್ಕೆ ನೀವೂ ಸಹಿ ಹಾಕಿದ್ದೀ ರಲ್ಲವೇ?’ ಎಂದು ಪ್ರಶ್ನಿಸಿದ್ದಕ್ಕೆ, ‘ನಾನು ಸಹಿ ಮಾಡಬಾರದೇ? ಎಷ್ಟು ಜನ ಸಚಿವರು ಈ ವಿಚಾರದಲ್ಲಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲ ನಾಯಕರಲ್ಲೂ ಇರುತ್ತದೆ’ ಎಂದುಪ್ರತಿಕ್ರಿಯಿಸಿದ್ದರು.
ಈಚೆಗಷ್ಟೇ ಜರುಗಿದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸ್ವತಃ ರಾಹುಲ್​ ಗಾಂಧಿ ಅವರೂ ಜಾತಿ ಗಣತಿ ಪರವಾಗಿ ಮಾತನಾಡಿದ್ದರು. ತಮ್ಮ ಪಕ್ಷದ ಬರುವ ರಾಜ್ಯಗಳಲ್ಲಿ ಹಾಗೂ ಇಡೀ ದೇಶದಲ್ಲಿಯೇ ಜಾತಿ ಗಣತಿ ನಡೆಸುವುದಾಗಿ ರಾಹುಲ್​ ಘೋಷಿಸುವ ಮೂಲಕ ಇದನ್ನು ಪ್ರಮುಖ ಚುನಾವಣೆ ವಿಷಯವನ್ನಾಗಿ ರೂಪಿಸಲು ಪ್ರಯತ್ನಿಸಿದ್ದರು. ಆದರೀಗ, ಈ ವಿಚಾರದಲ್ಲಿ ಕಾಂಗ್ರೆಸ್​ ನಾಯಕರ ನಡುವೆಯೇ ಇರುವ ಭಿನ್ನಮತವು ಸಂಸತ್ತಿನಲ್ಲಿ ಸ್ಫೋಟವಾಗಿರುವ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ.

ರಾಜಸ್ಥಾನ ನೂತನ ಉಪಮುಖ್ಯಮಂತ್ರಿ ದಿಯಾ ಕುಮಾರಿ: ಯಾರೀ ರಾಜಕುಮಾರಿ?

2026ಕ್ಕೆ ಬುಲೆಟ್​ ಟ್ರೇನ್ ಸಂಚಾರ ಆರಂಭ: ಮುಂಬೈ- ಅಹಮದಾಬಾದ್​ ನಡುವಿನ ಪಯಣ ಕೇವಲ 2 ಗಂಟೆ

ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
