ಕೊಲ್ಕತಾ :ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ಸಮರದ ಬಿಸಿ ಏರುತ್ತಲೇ ಇದೆ. ಇಂದು ಬಂಕುರಾದಲ್ಲಿ ನಡೆದ ಬಿಜೆಪಿಯ ಬೃಹತ್ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳು ಅದಕ್ಕೆ ನಿದರ್ಶನವಾಗಿದ್ದವು. ಮೋದಿ ಅವರು, ಈ ಚುನಾವಣೆಯು ನಿರ್ಣಾಯಕವಾಗಲಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರ ದುರಾಡಳಿತಕ್ಕೆ ರಾಜ್ಯದ ಜನರು ಕೊನೆ ಹಾಡಲಿದ್ದಾರೆ ಎಂದಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದ ಸಾರ್ವಜನಿಕ ಸಭೆಯಲ್ಲಿ ಪೂರ್ಣ ಹುಮ್ಮಸ್ಸಿನಿಂದ ಮಾತನಾಡಿದ ಮೋದಿ, ಹಲವಾರು ಬಂಗಾಳಿ ಶಬ್ದಗಳನ್ನು ಬಳಸಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಮೇಲೆ ಟೀಕಾಪ್ರಹಾರ ನಡೆಸಿದರು. ಟಿಎಂಸಿ ‘ಆಟ ನಡೆಯಲಿದೆ’ ಎಂಬ ಅರ್ಥ ಬರುವ ‘ಖೇಲಾ ಹೋಬೆ’ ಅನ್ನುವ ಘೋಷವಾಕ್ಯವನ್ನು ಚುನಾವಣೆಯಲ್ಲಿ ಬಳಸುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ಬಂಗಾಳದ ಜನರು ನಿಮ್ಮ ಆಟವನ್ನು ಮುಗಿಸಬೇಕೆಂದಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ:“ಬೇಕಿದ್ದರೆ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಿರಿ, ಆದರೆ…”
“ದೀದಿ, ಕಳೆದ 10 ವರ್ಷಗಳಲ್ಲಿ ನೀವು ಪೊಳ್ಳು ಘೋಷಣೆಗಳನ್ನು ಮಾತ್ರ ಮಾಡಿದ್ದೀರಿ. ನೀವು ಮಾಡಿದ್ದೀನಿ ಅನ್ನುವ ಕೆಲಸ ಎಲ್ಲಿದೆ?” ಎಂದು ಪ್ರಶ್ನಿಸಿದ ಮೋದಿ, “ನೀವು ಖೇಲಾ ಹೋಬೆ(ಆಟ ನಡೆಯಲಿದೆ) ಅಂತ ಹೇಳ್ತಾ ಇರ್ತೀರಾ, ಆದರೆ ಪಶ್ಚಿಮ ಬಂಗಾಳದ ಜನರು ಖೇಲಾ ಶೇಷ್​ ಹೋಬೆ(ಆಟ ಮುಗಿಯಲಿದೆ) ಅಂತ ನಿರ್ಧರಿಸಿದ್ದಾರೆ” ಎಂದರು.
ಎಷ್ಟು ದೂರ ನೋಡಿದರೂ ಜನರೇ ಕಾಣುತ್ತಿದ್ದಾರೆ ಎಂದು ತಮ್ಮ ಸಭೆಗೆ ಭಾರೀ ಸಂಖ್ಯೆಯಲ್ಲಿ ಬಂದ ಜನರ ಬಗ್ಗೆ ಮಾತನಾಡಿದ ಮೋದಿ, “ಬಂಕುರಾದ ಇಂದಿನ ಚಿತ್ರವು ಬಂಗಾಳದ ಜನರು ನಿರ್ಧಾರ ಮಾಡಿರುವುದನ್ನು ತೋರಿಸುತ್ತದೆ. ಮೇ 2 ರಂದು ‘ದೀದಿ ಜಾಚ್ಛೆ, ಅಶೊಲ್ ಪೊರಿಬರ್ತನ್ ಆಚ್ಛೆ, ಅಶೊಲ್ ಪೊರಿಬರ್ತನ್ ಆಚ್ಛೆ…’ ಎಂದರು! (ದೀದಿ ಹೋಗುತ್ತಾರೆ, ಅಸಲಿ ಪರಿವರ್ತನೆ ಬರುತ್ತದೆ ಎಂಬ ಅರ್ಥ)
ಇದನ್ನೂ ಓದಿ:ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !
“ನಾನು ದೀದಿಯನ್ನು ಹೆಚ್ಚು ಪ್ರಶ್ನೆ ಕೇಳಿದಂತೆಲ್ಲಾ ಅವರು ಹೆಚ್ಚು ಸಿಟ್ಟಾಗುತ್ತಾರೆ. ಈಗ ನನ್ನ ಮುಖ ಅವರಿಗೆ ಇಷ್ಟವಿಲ್ಲ ಎನ್ನುತ್ತಿದ್ದಾರೆ. ಆದರೆ, ದೀದಿ, ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಸೇವೆ ಪರೀಕ್ಷಿಸಲ್ಪಡುತ್ತದೆ, ನಮ್ಮ ಮುಖ ಅಲ್ಲ” ಎಂದು ಮೋದಿ ಟೀಕಿಸಿದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

VIDEO | ಪ್ರಧಾನಿ ಮೋದಿ ಭಾಷಣ ಕೇಳಲು ನೆರೆದ ಜನಸಾಗರ ನೋಡಿ!

ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!

ಮುಗುಳ್ನಗೆ ಹಂಚಿಕೊಂಡ ಸಚಿವೆ ಸ್ಮೃತಿ ಇರಾನಿ… ಹೇಳಿದ್ದೇನು ಗೊತ್ತೆ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fourteen =
Remember me
