ಚೆನ್ನೈ:‘ಲಿಯೋ’ ಚಿತ್ರದಲ್ಲಿ ನಟಿ ತ್ರಿಶಾ ಜತೆ ಬೆಡ್ ರೂಮ್ ಸೀನ್ ಹಂಚಿಕೊಳ್ಳಲು ಆಗಲಿಲ್ಲ. ಚಿತ್ರದಲ್ಲಿ ರೇಪ್ ಸೀನ್ ಇರಬೇಕಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ನಟಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:‘ಆಸ್ಟ್ರೇಲಿಯಾ’ ಅಲ್ಲ, ಅದು ಪಾಂಡವರ ‘ಅಸ್ತ್ರಾಲಯ’..ಅದಕ್ಕೇ ಗೆದ್ದಿದೆ – ನ್ಯಾ.ಕಾಟ್ಜು ಹೇಳಿಕೆಗೆ ನೆಟ್ಟಿಗರು ಏನೆಂದರು?ನಟಿ ತ್ರಿಷಾ ಮೇಲೆ ಅತ್ಯಾಚಾರವೆಸಗುವಂತಹ ದೃಶ್ಯವನ್ನು ನಿರ್ದೇಶಕ ಲೋಕೇಶ್ ಕೊಡುತ್ತಾರೆ ಎಂಬ ನಿರೀಕ್ಷೆ ಹುಸಿ ಮಾಡಿದ್ದಕ್ಕೆ ಮನ್ಸೂರ್ ಅಲಿಖಾನ್ ನಿರಾಸೆ ವ್ಯಕ್ತಪಡಿಸುವ ನೆಪದಲ್ಲಿ ಕೀಳಾಗಿ ಮಾತನಾಡಿದ್ದು ಚಿತ್ರರಂಗದ ಮತ್ತು ಸಮಾಜದ ಇತರರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇನ್ನು ಮುಂದೆ ಮನ್ಸೂರ್ ಅಲಿ ಖಾನ್ ಜೊತೆ ನಟಿಸುವುದಿಲ್ಲ ಎಂದು ನಟಿ ತ್ರಿಶಾ ಇದನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ಲೋಕೇಶ್ ಕನಕರಾಜ್, ಮಾಳವಿಕಾ ಮೋಹನನ್ ಸೇರಿದಂತೆ ಹಲವು ಗಣ್ಯರು ಕೂಡ ನಟನ ಅಸಹ್ಯ ಮಾತುಗಳಿಗೆ ಟೀಕೆ ವ್ಯಕ್ತಪಡಿಸಿದ್ದರು.
ಈ ವಿಷಯದ ಬಗ್ಗೆ ಮಾತನಾಡಿದ ನಟಿ ಖುಷ್ಬು, “ನೀವು ಹೇಗಾದರೂ ಮಹಿಳೆಯರ ಬಗ್ಗೆ ಅಸಹ್ಯ ಟೀಕೆಗಳನ್ನು ಮಾಡಬಹುದು. ಯಾರೂ ಪ್ರಶ್ನೆಗಳನ್ನು ಕೇಳದಂತಹ ಕೀಳು ಕೆಲಸಗಳನ್ನು ಅನೇಕರು ಮಾಡುತ್ತಾರೆ. ಹೀಗೆ ಮಾತನಾಡಿದರೆ ಎರಡೇ ದಿನದಲ್ಲಿ ಮರೆತು ಬಿಡುತ್ತಾರೆ ಎಂದುಕೊಳ್ಳುತ್ತಾರೆ. ಹೆಣ್ಣನ್ನು ಗೌರವಿಸುವವರು ಇಂತಹ ಪದ ಬಳಸುವುದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ನಾನು ಇದನ್ನು ಕೇಳಲೂ ಅಸಹ್ಯಪಡುತ್ತೇನೆ. ಮಹಿಳೆಯರು ಮತ್ತು ಅವರ ಸ್ವಾಭಿಮಾನವನ್ನು ರಕ್ಷಿಸುವ ಜವಾಬ್ದಾರಿ ನನ್ನದು. ತ್ರಿಷಾ ಮಾತ್ರವಲ್ಲ, ಯಾವುದೇ ನಟಿಯರಾಗಿದ್ದರೂ ನಾನು ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ಕಿಡಿ ಕಾರಿದ್ದಾರೆ.
ಇನ್ನು ಮನ್ಸೂರ್​ ಅಲಿಯ ಮಾತುಗಳನ್ನು ಯಾರೂ ಕೇಳಲು ಇಷ್ಟಪಡುವುದಿಲ್ಲ. ಆತನ ಕೊಳಕು ಮಾತುಗಳು ಸಮಾಜ ತಲೆ ತಗ್ಗಿಸುವಂತಿವೆ ಎಂದು ಖುಷ್ಬು ಬೇಸರ ವ್ಯಕ್ತಪಡಿಸಿದ್ದಾರೆ.
ತ್ರಿಶಾ-ಮನ್ಸೂರ್ ಅಲಿ ಖಾನ್ ವಿವಾದ: ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದ್ದಿಷ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
