ನವದೆಹಲಿ:ಖ್ಯಾತ ನಟಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಾಯಕಿ ಖುಷ್ಬೂ ಸುಂದರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 28ರಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಖಚಿತಪಡಿಸಿದೆ.
ಸಕ್ರಿಯ ರಾಜಕೀಯಕ್ಕೆ ಸೇರಲು ರಾಜೀನಾಮೆ ನೀಡಿರುವುದಾಗಿ ಖುಷ್ಬೂ ಅವರು ಬಹಿರಂಗಪಡಿಸಿದ್ದಾರೆ.
ಬುಧವಾರ (ಆಗಸ್ಟ್​ 14) ಎಕ್ಸ್ ಖಾತೆಯಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ರಾಜಕೀಯದಲ್ಲಿ 14 ವರ್ಷಗಳ ಸಮರ್ಪಣೆಯ ನಂತರ ಇಂದು ನನ್ನ ಮನಸ್ಸು ಪರಿವರ್ತನೆಯಾಗಿದೆ. ನಮ್ಮ ಬಿಜೆಪಿ ಪಕ್ಷಕ್ಕೆ ಸೇವೆ ಸಲ್ಲಿಸುವ ನನ್ನ ಉತ್ಸಾಹವನ್ನು ಸಂಪೂರ್ಣವಾಗಿ ಸ್ವೀಕರಿಸಲು ನಾನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಖುಷ್ಬೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ತನ್ನ ಸೇವೆಗಳು ಸೀಮಿತವಾಗಿರುವುದರಿಂದ, ರಾಜೀನಾಮೆ ನೀಡಿದ ಬಳಿಕ ಸಂಪೂರ್ಣವಾಗಿ ಬಿಜೆಪಿ ಮಿಷನ್‌ಗೆ ಸಮರ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಖುಷ್ಬೂ ಬಹಿರಂಗಪಡಿಸಿದ್ದಾರೆ. ಮನಃಪೂರ್ವಕವಾಗಿ ಸೇವೆ ಮಾಡಲು ನಾನೀಗ ಮುಕ್ತಳಾಗಿದ್ದೇನೆ. ಸಕ್ರಿಯ ರಾಜಕಾರಣಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ ಚೆನ್ನೈನ ಬಿಜೆಪಿ ಕಚೇರಿ ‘ಕಮಲಾಲಯ’ದಲ್ಲಿ ನಡೆಯುವ ಧ್ವಜ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದರು.
After 14 dedicated years in politics, today marks a heartfelt transition. I’ve resigned from@NCWIndiato fully embrace my passion for serving our great party, the BJP. Immense gratitude to the PM@narendramodiji, HM@AmitShahji, BJP national president@JPNaddaJi, and…
— KhushbuSundar (@khushsundar)August 14, 2024

ಅಂದಹಾಗೆ ಖುಷ್ಬೂ ಸುಂದರ್ ಅವರು ತಮಿಳುನಾಡಿನಲ್ಲಿ ಬೆಳೆಯಲು ಬಯಸಿರುವ ಬಿಜೆಪಿಯ ಪ್ರಮುಖ ನಾಯಕಿಯಾಗಿದ್ದಾರೆ. ಮಹಿಳಾ ಆಯೋಗದ ಸದಸ್ಯೆ ಸ್ಥಾನ ಹಾಗೂ ಸಿನಿಮಾವನ್ನು ಸಂಪೂರ್ಣ ಬದಿಗೊತ್ತಿ, ರಾಜಕೀಯದತ್ತ ಖುಷ್ಬೂ ಮುಖಮಾಡಿದ್ದು, ಈ ನಿರ್ಧಾರವನ್ನು ಖುಷ್ಬೂ ಬೆಂಬಲಿಗರು ಸ್ವಾಗತಿಸಿದ್ದಾರೆ.(ಏಜೆನ್ಸೀಸ್​)
ಮಾಜಿ ಪತಿ ನಾಗಚೈತನ್ಯ ಜತೆ ಶೋಭಿತಾ ನಿಶ್ಚಿತಾರ್ಥ: ಕೊನೆಗೂ ಮೌನ ಮುರಿದ ಸಮಂತಾ!

ಐಸಿಸಿ ಆಫರ್​ ತಿರಸ್ಕರಿಸಿದ ಭಾರತ! ಮಹಿಳಾ ಟಿ20 ವಿಶ್ವಕಪ್​ ಆಯೋಜನೆ ಮಾಡಲ್ಲ ಎಂದಿದ್ದೇಕೆ ಬಿಸಿಸಿಐ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine − 3 =
Remember me
