ಕ್ರೇಜಿ ಸ್ಟಾರ್​ ರವಿಚಂದ್ರನ್ ನಟನೆಯ ‘ರಣಧೀರ’ ಸಿನಿಮಾದ ನಾಯಕಿ ಖುಷ್ಬೂ ಗಂಡಸಿನಂತೆ ಕಾಣುತ್ತಿದ್ದಾರೆ!
ಅರೆ, ಏನಾಯ್ತು ಖುಸ್ಬೂ ಅವರಿಗೆ? ಎಂದು ಹುಬ್ಬೇರಿಸಬೇಡಿ. ಇತ್ತೀಚೆಗೆ ಟ್ವಿಟರ್​ನಲ್ಲಿ ಖುಸ್ಬೂಶೇರ್​ ಮಾಡಿಕೊಂಡಿರುವ ಫೋಟೋವೊಂದು ಆ ರೀತಿ ಇದೆಯಷ್ಟೆ. ಖುಷ್ಬೂ, ತನ್ನ ಫೋಟೋವನ್ನು ಗಂಡಸಿನ ಲುಕ್​ ಕಾಣುವಂತೆ ಫೇಸ್ ಆ್ಯಪ್ ಮೂಲಕ ಎಡಿಟ್ ಮಾಡಿಕೊಂಡಿದ್ದು, ಅದನ್ನು ಟ್ವಿಟರ್​ನಲ್ಲಿ ಹಾಕಿದ್ದಾರೆ. ಆ ಫೋಟೋಗೆ ‘ನಾನು ಪುರುಷನಾಗಿದ್ದರೆ, ಅಷ್ಟೇನೂ ಕೆಟ್ಟದಾಗಿ ಕಾಣುತ್ತಿರಲಿಲ್ಲ’ ಎಂದು ಟ್ಯಾಗ್​ಲೈನ್​ ಕೊಟ್ಟಿದ್ದಾರೆ. ಜತೆಗೆ ನಗುವ ಎಮೋಜಿ ಹಾಕಿಕೊಂಡಿದ್ದಾರೆ. ಈ ಪೋಟೋ ಪಕ್ಕಾ ಗಂಡಸಿನ ರೀತಿ ಕಾಣುತ್ತಿದೆ.
ಇದನ್ನೂ ಓದಿರಿಕೆಲಸ ಇಲ್ಲದೆ ರಾಖಿ ಮಾಡಿ ಮಾರುತ್ತಿರುವ ಸೀರಿಯಲ್​ ನಟಿ
ಗಂಡಸಿನ ಲುಕ್​ನಲ್ಲಿರುವ ಖುಷ್ಬೂ ಅವರ ಫೋಟೋಗೆ ವಿಧವಿಧವಾದ ಕಮೆಂಟ್‌ಗಳು ಬರುತ್ತಿವೆ. ಕೆಲವರು ಫೋಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಇನ್ನೂ ಕೆಲವರು ಪುರುಷ ಖುಷ್ಬೂ ಸುಂದರವಾಗಿ ಕಾಣಿಸುತ್ತಾರೆ ಎಂದಿದ್ದಾರೆ. ಅಮೀರ್ ಖಾನ್ ರೀತಿ ಕಾಣುತ್ತಿದ್ದೀರಿ, ಯೂಟ್ಯೂಬ್ ಚಾನೆಲ್ ಆರಂಭಿಸಿ ಬ್ಯೂಟಿ ಟಿಪ್ಸ್ ನೀಡಿ ಎಂದೆಲ್ಲ ಕಮೆಂಟ್ಸ್ ಮಾಡಿದ್ದಾರೆ. ಖುಷ್ಬೂ ಸುಂದರ್ ಅವರು ಕೆಲದಿನಗಳ ಹಿಂದೆ ಸಣ್ಣಗಾಗಿರುವ ವಿಚಾರ ಸುದ್ದಿಯಾಗಿತ್ತು.
And if I was a man.. not bad actually..😄😄😄😄😄😄😆😆😆😆pic.twitter.com/mvYK5ob2RV
— KhushbuSundar (@khushsundar)July 21, 2020

ಕರೊನಾ ಸೋಂಕಿಗೆ ಆಯುರ್ವೇದ ಔಷಧ ಪಡೆದ ಸಿ.ಟಿ.ರವಿ ಗುಣಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
