ಚೆನ್ನೈ:ನಟಿ, ರಾಜಕಾರಣಿ ಖುಷ್ಬೂ ಅವರ ಟ್ವಿಟರ್​ ಖಾತೆಯನ್ನು ಮತ್ತೊಮ್ಮೆ ಹ್ಯಾಕ್​ ಮಾಡಲಾಗಿದೆ. ಇದಕ್ಕೂ ಮುನ್ನ 2020ರ ಏಪ್ರಿಲ್ ತಿಂಗಳಲ್ಲಿ ಹ್ಯಾಕ್​ ಮಾಡಲಾಗಿತ್ತು. ಬಳಿಕ ಅಭಿಮಾನಿಗಳ ನೆರವಿನಿಂದ​ ಸರಿಪಡಿಸಿಕೊಂಡಿದ್ದರು. ಆದರೆ, ಈ ಬಾರಿ ಹ್ಯಾಕರ್​ ಖುಷ್ಬೂ ಅವರ ಪ್ರೊಫೈಲ್​ ಹೆಸರನ್ನು Briann ಎಂದು ಬದಲಾಯಿಸಿದ್ದಾನೆ.
ಕೇವಲ ಹೆಸರು ಮಾತ್ರವಲ್ಲ ಕವರ್​ ಫೋಟೋ ಕೂಡ ಬದಲಾಗಿದೆ. ಅಲ್ಲದೆ, ನಟಿ ಮಾಡಿದಂತಹ ಎಲ್ಲ ಟ್ವೀಟ್ಸ್​ ಮತ್ತು ಪೋಸ್ಟ್​ಗಳನ್ನು ಡಿಲೀಟ್​ ಮಾಡಲಾಗಿದೆ. ಡಿಸ್​ಪ್ಲೇ ಇಮೇಜ್​ ಕೂಡ ಬದಲಾಗಿದೆ.

2020ರ ಏಪ್ರಿಲ್​ನಲ್ಲಿ ಟ್ವಿಟರ್​ ಹ್ಯಾಕ್​ ಆಗಿದ್ದ ಸಂದರ್ಭದಲ್ಲಿ ಖುಷ್ಬೂ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ನೆರವು ಕೊರಿದ್ದರು. ನನ್ನ ಖಾತೆಯನ್ನು ಯಾರೋ ಹ್ಯಾಕ್​ ಮಾಡಿದ್ದಾರೆ. ಮೂರು ವಿವಿಧ ಲೊಕೇಶನ್​ಗಳಿಂದ ಲಾಗಿನ್​ ಆಗಲೂ ಪ್ರಯತ್ನ ನಡೆದಿದೆ, ನಿಮ್ಮ ಖಾತೆಯ ಪಾಸ್​ವರ್ಡ್​ ಅನ್ನು ಬದಲಾಯಿಸಿ ಎಂದು ಟ್ವಿಟರ್​ ಹೇಳಿದೆ. ಆದರೆ, ನನಗೆ ಬದಲಾಯಿಸಲು ತಿಳಿಯುತ್ತಿಲ್ಲ. ಟ್ವಿಟರ್​ ಹೇಳಿರುವುದು ಸಹ ಗೊತ್ತಾಗುತ್ತಿಲ್ಲ. ಹೀಗಾಗಿ ನನಗೆ ಯಾರಾದರೂ ಸಹಾಯ ಮಾಡಿ ಎಂದು ಖುಷ್ಬೂ ಅಭಿಮಾನಿಗಳ ನೆರವು ಕೋರಿದ್ದರು.
ಇದಾದ ಬಳಿಕ ಅಭಿಮಾನಿಗಳ ನೆರವಿನಿಂದಲೇ ತಮ್ಮ ಟ್ವಿಟರ್​ ಖಾತೆಯನ್ನು ಖುಷ್ಬೂ ಮರಳಿ ಪಡೆದುಕೊಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ಹ್ಯಾಕ್​ ಮಾಡಿದ್ದು, ಈ ಬಾರಿ ಇಡೀ ಖಾತೆಯನ್ನೇ ಬದಲಾಯಿಸಲಾಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಖುಷ್ಬೂ ಅವರು ರಜಿನಿಕಾಂತ್​ ಅವರ ಮುಂದಿನ ಚಿತ್ರ ಅಣ್ಣಾತೆಯಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಚಿತ್ರದಲ್ಲಿ ಖುಷ್ಬೂ ರಜಿನಿಕಾಂತ್​ ಪತ್ನಿಯ ಪಾತ್ರ ಮಾಡಿದ್ದಾರೆಂದು ತಿಳಿದುಬಂದಿದೆ.(ಏಜೆನ್ಸೀಸ್​)
ಬಕ್ರೀದ್​ ಹಬ್ಬಕ್ಕೆ ಕೋವಿಡ್​ ನಿರ್ಬಂಧಗಳಿಂದ ವಿನಾಯಿತಿ: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತರಾಟೆ

ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್​ ಶಾಕ್​! ಅಧ್ಯಕ್ಷ ಸೇರಿದಂತೆ ಎಂಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆ

ರೈಲಿನಡಿ ಸಿಲುಕಿದರೂ ಮರುಜೀವ ಪಡೆದ ವೃದ್ಧ- ಮೈ ಝುಂ ಎನ್ನುವ ವಿಡಿಯೋ ಇಲ್ಲಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
